ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಕಾರುಗಳ ಮೇಲೆ ಸಾಕಷ್ಟು ಪ್ರೀತಿ ಇದೆ. ಇದು ಇಡೀ ಗಾಂಧಿನಗರಕ್ಕೆ ತಿಳಿದಿರುವ ವಿಚಾರ. ಸದಾ ಒಂದಿಲ್ಲೊಂದು ಅತ್ಯಾಧುನಿಕ ಹಾಗೂ ರಾಯಲ್ ಕಾರುಗಳಲ್ಲಿ
ಓಡಾಡುವ ಸುದೀಪ್ ಅವರ ಗ್ಯಾರೇಜ್ನಲ್ಲಿ ಈಗಾಗಲೇ ಹಲವು ಐಷಾರಾಮಿ ಕಾರುಗಳಿವೆ. ಆದರೆ, ಈ ಬಾರಿ ಅವರು ಎಂದಿನ ತಮ್ಮ ಶೈಲಿಗಿಂತ ಭಿನ್ನವಾಗಿ ಯೋಚಿಸಿದ್ದು, ಪರಿಸರ ಸ್ನೇಹಿಯಾಗಿರುವ ಹೊಸ ಎಲೆಕ್ಟ್ರಿಕ್ ಕಾರೊಂದನ್ನು ಖರೀದಿ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಸುದೀಪ್ ಅವರು ಮಹಿಂದ್ರಾ ಕಂಪನಿಯ ಬಿಇ6 ಕಾರು ಖರೀದಿ ಮಾಡಿದ್ದಾರೆ. ಹೊಸ ಕಾರಿಗೆ ಮುಚ್ಚಲಾದ ಬಟ್ಟೆಯನ್ನು ಸರಿಸಿ ಕಾರನ್ನು ಅನ್ವೀಲ್ ಮಾಡಿದ್ದಾರೆ. ಈ ವೇಳೆ ಹೂಗುಚ್ಛಗಳನ್ನು ನೀಡಿ ಮಹೀಂದ್ರಾ ಕಂಪನಿಯ ಸಿಬ್ಬಂದಿ ಸುದೀಪ್ ಅವರ ಹೊಸ ಕಾರಿನ ಜರ್ನಿಗೆ ಶುಭ ಕೋರಿದರು. ಈ ಸಂದರ್ಭದ ವಿಡಿಯೋ ಹಾಗೂ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
View this post on Instagram
ಕಿಚ್ಚ ಸುದೀಪ್ ಖರೀದಿಸಿರುವ ಈ ಕಾರು ಮಹೀಂದ್ರಾ ಕಂಪನಿಯ ಮಹೀಂದ್ರಾ ಬಿಇ 6. ಅತ್ಯಂತ ವಿಶಿಷ್ಟ ಹಾಗೂ ಸ್ಪೋರ್ಟಿ ಲುಕ್ ಹೊಂದಿರುವ ಈ ಕಾರು ಆಕರ್ಷಕವಾಗಿದೆ. ಅತ್ಯಧಿಕ ಮೈಲೇಜ್ ಕೂಡ ಇದು ಹೊಂದಿದೆ. ವಿವಿಧ ಬಣ್ಣಗಳಲ್ಲಿ ಈ ಕಾರು ಲಭ್ಯವಿದೆ.
ಇದನ್ನೂ ಓದಿ: ಈಗ ಚಿತ್ರಕ್ಕೆ ಸುದೀಪ್ ಅವರೇ ಫಸ್ಟ್ ಆ್ಯಂಡ್ ಲಾಸ್ಟ್ ಚಾಯ್ಸ್ ಆಗಿತ್ತು; ರಾಜಮೌಳಿ
ಇನ್ನು ಸುದೀಪ್ ಅವರ ಸಿನಿಮಾಗಳ ವಿಷಯಕ್ಕೆ ಬಂದರೆ, ಅವರು ತಮ್ಮ ಬಹುನಿರೀಕ್ಷಿತ ಚಿತ್ರವಾದ ‘ಬಿಲ್ಲ ರಂಗ ಭಾಷ’ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಒಂದು ರೋಮ್ ಕಾಮ್ ಸಿನಿಮಾ ಕೂಡ ಅವರ ಕೈಯಲ್ಲಿದೆ. ಇದರ ಜೊತೆಗೆ, ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಆದ ‘ಬಿಗ್ ಬಾಸ್’ ಹೊಸ ಸೀಸನ್ನ ನಿರೂಪಣೆಯಲ್ಲೂ ಕಿಚ್ಚ ಸುದೀಪ್ ಅವರು ಮುಂದಿನ ದಿನಗಳಲ್ಲಿ ಬ್ಯುಸಿ ಆಗಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.














