ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ (Lord’s Cricket Ground) ಇತಿಹಾಸ ನಿರ್ಮಾಣವಾಗಿದೆ. ಸರಣಿಯ ಕೊನೆಯ ಪಂದ್ಯದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ (Rohit Sharma) ಶತಕ ಸಿಡಿಸಿ ಮಿಂಚಿದ್ದಾರೆ.
ಈ ಮೂಲಕ ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ಏಕದಿನ ಅಂತರರಾಷ್ಟ್ರೀಯ ಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ಕೇವಲ 84 ಎಸೆತಗಳಲ್ಲಿ ರೋಹಿತ್ ಸೆಂಚುರಿ (Century) ಬಾರಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ರೋಹಿತ್ ಶರ್ಮಾ ಕ್ರಿಕೆಟ್ನಿಂದ ನಿವೃತ್ತಿ ನೀಡುತ್ತಾರೆ, ಲಾರ್ಡ್ಸ್ ಅಂಗಳದಲ್ಲೇ ಅವರ ಕೊನೆಯ ಪಂದ್ಯ ಅಂತೆಲ್ಲಾ ವದಂತಿ ಹಬ್ಬಿತ್ತು. ಆದ್ರೀಗ ರೋಹಿತ್ ಇದೇ ಪಂದ್ಯದಲ್ಲಿ ತಾವೇನು ಅನ್ನೋದನ್ನು ಸಾಬೀತುಪಡಿಸಿದ್ದಾರೆ. 39 ವಯಸ್ಸಿನಲ್ಲಿ ಕೇವಲ 84 ಎಸೆತಗಳಲ್ಲಿ ಸೆಂಚುರಿ ಬಾರಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಈ ಶತಕದೊಂದಿಗೆ, ರೋಹಿತ್ ಶರ್ಮಾ ಏಕದಿನ ಇತಿಹಾಸದಲ್ಲಿ ಶತಕ ಗಳಿಸಿದ ಅತ್ಯಂತ ಹಿರಿಯ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.














