ದೆಹಲಿ: ರಾಹುಲ್ ಗಾಂಧಿ (Rahul Gandhi) ನೇತೃತ್ವದ ಕಾಂಗ್ರೆಸ್ ಪ್ರತಿಭಟನೆಗೆ (Congress protest) ಸೋನಮ್ ವಾಂಗ್ಚುಕ್ ಅವರ ಪತ್ನಿ (Sonam Wangchuk’s wife) ಗೀತಾಂಜಲಿ ಆಂಗ್ಮೋ
(Geetanjali Angmo) ಗರಂ ಆಗಿದ್ದಾರೆ. ಮೊನ್ನೆ ಜುಲೈ 21, ಮಂಗಳವಾರ ಪ್ರಧಾನಿ ನಿವಾಸದ (Prime Minister’s residence) ಎದುರು ಕಾಂಗ್ರೆಸ್ ಪ್ರತಿಭಟನೆ ಕೈಗೊಂಡಿತ್ತು. ಈ ವೇಳೆ ಹೈಡ್ರಾಮಾವೇ ನಡೆದಿತ್ತು. ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರತಿಭಟನಾನಿರತ ಕಾಂಗ್ರೆಸ್ ನಾಯಕರು ಮುಂದಾಗಿದ್ದರು. ಈ ವೇಳೆ ಪೊಲೀಸರು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ (Priyanka Gandhi) ಸೇರಿದಂತೆ ಎಲ್ಲರನ್ನೂ ಎತ್ತಿಕೊಂಡು ಹೋಗಿದ್ದರು. ಇನ್ನು ಕಾಂಗ್ರೆಸ್ ಪ್ರತಿಭಟನೆ ವಿರುದ್ಧ ಗೀತಾಂಜಲಿ ಆಂಗ್ಮೋ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪ್ರತಿಭಟನೆಗೆ ವಾಂಗ್ಚುಕ್ ಪತ್ನಿ ಅಸಮಾಧಾನ
ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೋ ಅವರು ಪ್ರಧಾನಿ ನರೇಂದ್ರ ಮೋದಿಯವರ ನಿವಾಸದ ಬಳಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಡೆಯುತ್ತಿರುವ ವಿದ್ಯಾರ್ಥಿಗಳ ಚಳವಳಿಗೆ ನಿಜವಾದ ಬೆಂಬಲ ನೀಡುವಲ್ಲಿ ಕಾಂಗ್ರೆಸ್ ಪ್ರತಿಭಟನೆ ಅದು ವಿಫಲವಾಗಿದೆ ಎಂದು ಗೀತಾಂಜಲಿ ಅಸಮಾಧಾನ ಹೊರಹಾಕಿದ್ದಾರೆ.
ಸೋನಮ್ ವಾಂಗ್ಚುಕ್ ಇಮೇಜ್ಗೆ ಧಕ್ಕೆ
ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ, ಗೀತಾಂಜಲಿ ಆಂಗ್ಮೋ ಅವರು ಕಾಂಗ್ರೆಸ್ ನಾಯಕರು ಪ್ರಧಾನಿ ನಿವಾಸದ ಹೊರಗೆ ಪ್ರತಿಭಟನೆ ನಡೆಸುವ ಬದಲು ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳೊಂದಿಗೆ ಸೇರಬೇಕಿತ್ತು ಎಂದು ಹೇಳಿದ್ದಾರೆ. ಸೋನಮ್ ವಾಂಗ್ಚುಕ್ ಅವರ ಸಾರ್ವಜನಿಕ ಇಮೇಜ್ ಅನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: Congress Protest: ಶ್ರೀಲಂಕಾ, ಬಾಂಗ್ಲಾದೇಶ, ಈಗ ದೆಹಲಿ? ಪ್ರಧಾನಿ ನಿವಾಸದ ಬಳಿ ಕಾಂಗ್ರೆಸ್ ಪ್ರತಿಭಟನೆ, ಸಾರ್ವಜನಿಕವಲಯದಲ್ಲಿ ಚರ್ಚೆ!
ಕಾಂಗ್ರೆಸ್ ಪ್ರತಿಭಟನೆಯಲ್ಲಿ ಪ್ರಾಮಾಣಿಕತೆಯ ಕೊರತೆ
ಪ್ರಧಾನಿ ನಿವಾಸದ ಹೊರಗೆ ನಡೆದ ಪ್ರತಿಭಟನೆಯಲ್ಲಿ ಪ್ರಾಮಾಣಿಕತೆಯ ಕೊರತೆ ಇತ್ತು ಅಂತ ಗೀತಾಂಜಲಿ ಆರೋಪಿಸಿದ್ದಾರೆ. ಸಾರ್ವಜನಿಕರನ್ನು ಇನ್ನು ಮುಂದೆ ಮೋಸಗೊಳಿಸಲು ಸಾಧ್ಯವಿಲ್ಲ. ಇದು ಜಾಗೃತ ಭಾರತ. ಜನರು ಪ್ರಾಮಾಣಿಕ ಮತ್ತು ಸಾಂಕೇತಿಕ ಸನ್ನೆಗಳ ನಡುವೆ ವ್ಯತ್ಯಾಸವನ್ನು ಗುರುತಿಸುತ್ತಾರೆ. ಪ್ರಾಮಾಣಿಕರಲ್ಲದವರನ್ನು ಯುವಕರು ಹೊರಹಾಕುತ್ತಾರೆ ಎನ್ನುವ ಮೂಲಕ ಕಾಂಗ್ರೆಸ್ ಪ್ರತಿಭಟನೆಗೆ ಪರೋಕ್ಷವಾಗಿ ತಿರುಗೇಟು ಕೊಟ್ಟಿದ್ದಾರೆ.
As an educator, I find it deeply painful to watch the image of our students being tarnished on media.
The students’ protest is taking place peacefully at Jantar Mantar. If there are reports of violence elsewhere in Delhi, please do not rush to attribute them to this movement…— Gitanjali J Angmo (@GitanjaliAngmo) July 23, 2026
ವಿದ್ಯಾರ್ಥಿಗಳಿಗೆ ಕಳಂಕ ತರಬೇಡಿ
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಗೀತಾಂಜಲಿ ಆಂಗ್ಮೋ, ನಾನು ಒಬ್ಬ ಶಿಕ್ಷಕಿಯಾಗಿ, ಮಾಧ್ಯಮಗಳಲ್ಲಿ ನಮ್ಮ ವಿದ್ಯಾರ್ಥಿಗಳ ಚಿತ್ರಣಕ್ಕೆ ಕಳಂಕ ತರುವುದನ್ನು ನೋಡುವುದು ನನಗೆ ತುಂಬಾ ನೋವುಂಟುಮಾಡುತ್ತದೆ. ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಶಾಂತಿಯುತವಾಗಿ ನಡೆಯುತ್ತಿದೆ. ದೆಹಲಿಯ ಬೇರೆಡೆ ಹಿಂಸಾಚಾರದ ವರದಿಗಳಿದ್ದರೆ, ದಯವಿಟ್ಟು ಪುರಾವೆಗಳಿಲ್ಲದೆ ಅವರನ್ನು ಈ ಚಳವಳಿಗೆ ಕಾರಣವೆಂದು ಹೇಳಲು ಆತುರಪಡಬೇಡಿ” ಎಂದು ಅವರು ಮನವಿ ಮಾಡಿದ್ದಾರೆ.
ನಮ್ಮ ಮಕ್ಕಳನ್ನು ಖಳನಾಯಕರಂತೆ ಚಿತ್ರಿಸಬೇಡಿ
ಯಾವ ರೀತಿಯ ವ್ಯವಸ್ಥೆಯು ತನ್ನದೇ ಆದ ವಿದ್ಯಾರ್ಥಿಗಳನ್ನು ನಂಬಲು ಇಷ್ಟು ಬೇಗನೆ ಸಿದ್ಧವಾಗಿದೆ? ಅವರ ಕಾಳಜಿಗಳನ್ನು ಕೇಳುವುದಕ್ಕಿಂತ ಅವರ ಉದ್ದೇಶಗಳನ್ನು ಪ್ರಶ್ನಿಸುವುದು ಏಕೆ ಸುಲಭ? ಅಂತ ಅವರು ಪ್ರಶ್ನಿಸಿದ್ದಾರೆ. ನಮ್ಮ ಮಕ್ಕಳು ರಕ್ಷಣೆಗೆ ಅರ್ಹರು, ಖಳನಾಯಕರಂತೆ ಚಿತ್ರಿಸಬಾರದು. ಅವರ ಧ್ವನಿಯನ್ನು ಕೇಳಲು ಅರ್ಹರು, ಸ್ವಾರ್ಥ ಹಿತಾಸಕ್ತಿಗಳನ್ನು ಪೂರೈಸುವ ನಿರೂಪಣೆಗಳಿಂದ ಮುಳುಗಿಸಬಾರದು” ಎಂದು ಅವರು ಹೇಳಿದರು.
ಉಪವಾಸ ಸತ್ಯಾಗ್ರಹ ಮುಂದುವರೆಸಿದ ವಾಂಕ್ಚುಕ್
ಇನ್ನು ಸೋನಮ್ ವಾಂಗ್ಚುಕ್ ಪ್ರತಿಭಟನೆ ಮುಂದುವರೆದಿದೆ. ಕಳೆದ ವಾರ ಜಂತರ್ ಮಂತರ್ ಪ್ರತಿಭಟನಾ ಸ್ಥಳದಿಂದ ಆಸ್ಪತ್ರೆಗೆ ಸ್ಥಳಾಂತರಿಸಲ್ಪಟ್ಟ ಸೋನಮ್ ವಾಂಗ್ಚುಕ್ ಅಲ್ಲಿಯೂ ತಮ್ಮ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸಿದ್ದಾರೆ. ಗುರುವಾರ ಅವರ ಉಪವಾಸ 26 ನೇ ದಿನಕ್ಕೆ ಕಾಲಿಟ್ಟಿದೆ.














