ಇತ್ತೀಚೆಗೆ ಕೊಳೆಗೇರಿ ಪುನರ್ವಸತಿ ಪ್ರಾಧಿಕಾರದ ಮುಂಬೈ (Mumbai) ಕಚೇರಿಯಲ್ಲಿ ನಡೆದ ಅಧಿಕೃತ ಕಾರ್ಯಕ್ರಮದಲ್ಲಿ ಬಾಲಿವುಡ್ ಖ್ಯಾತ ನಟ (Bollywood Actor) ಸಲ್ಮಾನ್ ಖಾನ್ (Salman Khan)
ಭಾಗವಹಿಸಿದ್ದರು. ಅಲ್ಲಿ ಅವರು ಹೊಸದಾಗಿ ಅಭಿವೃದ್ಧಿಪಡಿಸಿದಂತಹ ಐಟಿ ಸರ್ವರ್ ಕೊಠಡಿಯನ್ನು ಉದ್ಘಾಟಿಸಿದರು.
ನಟ ಅಲ್ಲಿ ಸರಳವಾಗಿ ಭೇಟಿ ಕೊಟ್ಟಿದ್ದರೂ ಕೂಡಾ ಆ ಸಂದರ್ಭದ ವಿಡಿಯೋಗಳು ಸೋಷಿಯಲ್ ಮೀಡಿಯಾದ್ಯಂತ ತಕ್ಷಣ ವೈರಲ್ ಆದವು. ಅದು ಎಲ್ಲಾ ಕಡೆ ಶೇರ್ ಆಗಿ ವೈರಲ್ ಆಗೋಕೆ ಶುರುವಾದವು.
ಹಲವಾರು ವೀಕ್ಷಕರು ಸಲ್ಮಾನ್ ಖಾನ್ ಅವರು ತುಂಬಾನೆ ದಣಿದಂತೆ ಕಾಣುತ್ತಿದ್ದಾರೆಂದು ಕಮೆಂಟ್ ಮಾಡಿದ್ದಾರೆ. ನಟ ಆರೋಗ್ಯವಾಗಿದ್ದಾರೆಯೇ ಎಂದು ಪ್ರಶ್ನಿಸಲು ಪ್ರಾರಂಭಿಸಿದರು.
ಕಾರ್ಯಕ್ರಮದ ವೀಡಿಯೊಗಳಲ್ಲಿ ಸಲ್ಮಾನ್ ಅಧಿಕಾರಿಗಳೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದು. ಉದ್ಘಾಟನಾ ಸಮಾರಂಭದಲ್ಲಿ ನಟ ಭಾಗವಹಿಸಿರುವ ವಿಡಿಯೋ ವೈರಲ್ ಆಗಿದೆ. ನಟ ಈ ಒಂದು ಕಾರ್ಯಕ್ರಮಕ್ಕಾಗಿ ಸರಳವಾಗಿ ರೆಡಿಯಾಗಿದ್ದರು. 60 ವರ್ಷದ ನಟ ಅಲ್ಲಿ ಸರಳವಾಗಿದ್ದರು.
ಈ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡೋಕೆ ಶುರುವಾದ ನಂತರ ಎಲ್ಲರ ಗಮನ ಆ ಕಾರ್ಯಕ್ರಮದಿಂದ ಸಲ್ಮಾನ್ ಅವರ ಲುಕ್ ಕಡೆ ಶಿಫ್ಟ್ ಆಯಿತು ಎನ್ನಬಹುದು. ಜನ ತಕ್ಷಣ ಭಾಯಿಜಾನ್ ಅವರ ಲುಕ್, ಮುಖ, ಆರೋಗ್ಯದ ಬಗ್ಗೆ ಚರ್ಚೆ ಮಾಡೋಕೆ ಶುರು ಮಾಡಿದರು.
“ಸಲ್ಮಾನ್ ಖಾನ್ ಅವರ ಆರೋಗ್ಯ ಸರಿಯಾಗಿದೆಯೇ?” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು “ಸಲ್ಮಾನ್ ಖಾನ್ ಸಲ್ಮಾನ್ ಖಾನ್ ತರಹ ಕಾಣುತ್ತಿಲ್ಲ” ಎಂದು ಬರೆದಿದ್ದಾರೆ.
ಮೂರನೇ ವ್ಯಕ್ತಿ ಒಬ್ಬರು, “ಅವರು ಅನಾರೋಗ್ಯದಿಂದ ಬಳಲುತ್ತಿರುವಂತೆ ಕಾಣುತ್ತಿದ್ದಾರೆ. ದೇವರು ನಿಮ್ಮನ್ನು ಆಶೀರ್ವದಿಸಲಿ” ಎಂದು ಕಾಮೆಂಟ್ ಮಾಡಿದ್ದಾರೆ. ಬೇರೊಬ್ಬರು ನಟ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರಬಹುದು ಎಂದು ಕಮೆಂಟ್ ಮಾಡಿದ್ದಾರೆ. ಅಂತೂ ನಟನ ಈ ಲುಕ್ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ಅವರ ರೂಪ ಮತ್ತು ಜೀವನಶೈಲಿಯ ಬಗ್ಗೆ ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ
ಕೆಲವು ಬಳಕೆದಾರರು ಸಲ್ಮಾನ್ಗೆ ಈಗ 60 ವರ್ಷ ವಯಸ್ಸಾಗಿದೆ. ಹಾಗಾಗಿ ಈ ವಯಸ್ಸಿನಲ್ಲಿ ಹೀಗೆ ಕಾಣೋದು ಸಾಮಾನ್ಯ ಎಂದಿದ್ದಾರೆ. ವಯಸ್ಸು ಸ್ವಾಭಾವಿಕವಾಗಿ ವ್ಯಕ್ತಿಯ ನೋಟವನ್ನು ಬದಲಾಯಿಸುತ್ತದೆ ಎಂದು ಕಮೆಂಟ್ ಮಾಡಿದರು.
ಸಲ್ಮಾನ್ ಈ ಹಿಂದೆ ಬಿಗ್ ಬಾಸ್ನಲ್ಲಿ ಬೆಳಿಗ್ಗೆ 4 ಅಥವಾ 5 ಗಂಟೆಯವರೆಗೆ ತಡವಾಗಿ ನಿದ್ರಿಸುವ ಬಗ್ಗೆ ಮಾತನಾಡಿದ್ದರು. ಅದನ್ನು ಉಲ್ಲೇಖಿಸಿ, ಈ ರೀತಿಯ ಸ್ಲೀಪಿಂಗ್ ಶೆಡ್ಯೂಲ್ ಕಾಲಾನಂತರದಲ್ಲಿ ಯಾವುದೇ ವ್ಯಕ್ತಿಯನ್ನಾದರೂ ಹೆಚ್ಚು ದಣಿದಂತೆ ಕಾಣುವಂತೆ ಮಾಡುತ್ತದೆ ಎಂದು ಒಬ್ಬರು ಕಮೆಂಟ್ ಮಾಡಿದರು.
That’s Salman Khan? Is he unwell? Omg pic.twitter.com/Bh8Rx3koV9
— Sabudana khichadi (@dishasatra) July 19, 2026
ಇದನ್ನೂ ಓದಿ: Prajwal Devaraj: ಪ್ರಜ್ವಲ್ ದೇವರಾಜ್ ಕರ್ಲಿ ಹೇರ್ ಲುಕ್, ಚಂದನವನದಲ್ಲಿ ಹೊಸ ಟ್ರೆಂಡ್
ಸಲ್ಮಾನ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಅಥವಾ ಅವರು ಯಾವುದೇ ಹೊಸ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಅವರ ತಂಡ ಕೂಡಾ ಹೇಳಿಲ್ಲ.
ಸಲ್ಮಾನ್ ಖಾನ್ ಸಿನಿಮಾಗಳು
ಕೆಲಸದ ವಿಷಯದಲ್ಲಿ, ಸಲ್ಮಾನ್ ಮುಂದಿನ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ಮೊದಲು ಬ್ಯಾಟಲ್ ಆಫ್ ಗಾಲ್ವಾನ್ ಎಂದು ಹೆಸರಿಸಲಾಗಿತ್ತು.
ಇದನ್ನೂ ಓದಿ: Director Srini Movie: ಎ ಫಾರ್ ಆನಂದ್ ಟೈಟಲ್ ಇಟ್ಟಿದ್ಯಾರು? ಚಿತ್ರದ ಐಡಿಯಾ ಕೊಟ್ಟಿದ್ಯಾರು?
ಅವರು ನಯನತಾರಾ ಅವರೊಂದಿಗೆ ಇನ್ನೂ ಟೈಟಲ್ ಫಿಕ್ಸ್ ಮಾಡದ ಇನ್ನೊಂದು ಸಿನಿಮಾ ಮಾಡಲಿದ್ದಾರೆ ಎಂದು ವರದಿಯಾಗಿದೆ. ಈ ಸಿನಿಮಾ ಪ್ರಸ್ತುತ 2027 ರ ಈದ್ ಆಸುಪಾಸಿನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ನ್ಯೂಸ್18 ವರದಿ ಮಾಡಿದೆ.














