ರಾಕಿಂಗ್ ಸ್ಟಾರ್ ಯಶ್ (Rocking Star Yash) ಮತ್ತು ರಣಬೀರ್ ಕಪೂರ್ (Ranbir Kapoor) ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಕಾಮಿಕ್ ಕಾನ್ (Comic Con) ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ.
ಅಮೆರಿಕಾದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ ಡಿಯಾಗೋ ಕನ್ವೆನ್ಷನ್ ಸೆಂಟರ್ನಲ್ಲಿ ಇದು ನಡೆಯುತ್ತಿದೆ. ಇಲ್ಲಿ ಭಾಗಿ ಆದ ಯಶ್ ತಮ್ಮ ರಾಮಾಯಣ ಚಿತ್ರದ ಹಲವು ವಿಷಯಗಳನ್ನ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಅಸಲಿಗೆ ಇರೋದು ಏನು ಅನ್ನೋದನ್ನು ಹೇಳಿದ್ದಾರೆ. ರಾಮಾಯಣ ಎಲ್ಲ ಚಿತ್ರಗಳಿಗೂ ಸ್ಪೂರ್ತಿ ನೀಡಿದ ಓಜಿ ಸ್ಟೋರಿ (OG Story) ಅಂತಲೂ ಹೇಳಿದ್ದಾರೆ. ಈ ಸಿನಿಮಾ ನೋಡ್ತಾ ಹೋದಂತೆ ಈ ವಿಷಯವನ್ನ ಆ ಚಿತ್ರದಲ್ಲಿ ನೋಡಿದ್ದೇನೆ. ಈ ಚಿತ್ರದಲ್ಲಿ ನೋಡಿದ್ದೇನೆ ಅಂತಲೂ ಹೇಳಬಹುದು. ಆ ರೀತಿನೇ ಈ ಚಿತ್ರ ಇರುತ್ತದೆ ಅಂತಲೂ ಹೇಳಿದ್ದಾರೆ. ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.
ರಾಮಾಯಣ ನಮ್ಮ ನೆಲದ ಸ್ಟೋರಿ
ರಾಮಾಯಣ ನಮ್ಮ ನೆಲದ ಕತೆ ಆಗಿದೆ. ಇದರಲ್ಲಿ ಮಾನವೀಯತೆಯನೂ ಇದೆ. ರಾವಣನಂತಹ ವ್ಯಕ್ತಿಯ ಚಿತ್ರಣವೂ ಇದೆ. ಆದರೆ, ಈ ರಾವಣ ಒಳ್ಳೆಯವ ಮತ್ತು ವಿದ್ಯಾವಂತ, ಆದರೂ ಕೆಟ್ಟವನು ಅನ್ನೋದು ಅಷ್ಟೆ ಸತ್ಯ.
ರಾಮಾಯಣ ನಮ್ಮ ನೆಲದ ಸ್ಟೋರಿ
(ಚಿತ್ರ ಕೃಪೆ: ಫ್ಯಾನ್ವರ್ಸೇಷನ್ ಯೂಟ್ಯೂಬ್)
ಆದರೆ, ಈ ರಾವಣ ತನ್ನ ಹಾದಿಯಲ್ಲಿ ಹೀರೋನೇ ಆಗಿದ್ದಾನೆ. ಹಾಗೆ ರಾಮಾಯಣ ನಮ್ಮಲ್ಲಿರೋ ರಾಮ ಮತ್ತು ರಾವಣನ ಚಿತ್ರವನ್ನೆ ಕಟ್ಟಿಕೊಡುತ್ತದೆ. ಅದಕ್ಕೂ ಹೆಚ್ಚಾಗಿ ಇದು ನಮ್ಮ ಕತೆನೇ ಆಗಿದೆ. ನಮ್ಮ ನೆಲದ ಈ ಕತೆಯ ಇತರ ಚಿತ್ರಗಳಿಗೂ ಸ್ಪೂರ್ತಿ ಆಗಿದೆ.
ಇದನ್ನೂ ಓದಿ: Karavali Movie: ಕರಾವಳಿ ಸಿನಿಮಾ ರಿಲೀಸ್, ಮೂವಿ ನೋಡಿ ಜನ ಏನಂದ್ರು? ಫಸ್ಟ್ ಡೇ ಫಸ್ಟ್ ಶೋ ಪಬ್ಲಿಕ್ ರಿಯಾಕ್ಷನ್
ರಾಮಾಯಣ ನೋಡಿದ್ಮೇಲೆ…
ನಮ್ಮ ರಾಮಾಯಣ ಚಿತ್ರ ನೋಡಿದ್ಮೇಲೆ ನಿಮಗೆ ಪಕ್ಕಾ ಅನಿಸುತ್ತದೆ. ಈ ಚಿತ್ರದಲ್ಲಿ ಈ ವಿಷಯವನ್ನ ನೋಡಿದ್ದೇವೆ. ಆ ಚಿತ್ರದಲ್ಲಿ ಆ ವಿಷಯ ನೋಡಿದ್ದೇವೆ ಅಂತಲೂ ಅನಿಸುತ್ತದೆ.
ಅಷ್ಟು ವಿಷಯ ಈ ಒಂದು ರಾಮಾಯಣದಲ್ಲಿ ಇದೆ. ಇದು ನಮ್ಮ ‘OG’ ಸ್ಟೋರಿ ಅಂತಲೇ ಯಶ್ ಅಷ್ಟೆ ಹೆಮ್ಮೆಯಿಂದಲೇ ಹೇಳಿಕೊಂಡಿದ್ದಾರೆ. ಕೋ ಸ್ಟಾರ್ ರಣಬೀರ್ ಕಪೂರ್ ಕೆಲಸವನ್ನು ಇಲ್ಲಿ ಮೆಚ್ಚಿಕೊಂಡಿದ್ದಾರೆ. ಆ್ಯಂಕರ್ ಕೇಳುವ ಪ್ರಶ್ನೆಗಳಿಗೆ ಅಷ್ಟೆ ನೇರವಾಗಿಯೇ ಇಂಗ್ಲಿಷ್ ಅಲ್ಲಿಯೇ ಯಶ್ ಉತ್ತರ ಕೊಟ್ಟಿದ್ದಾರೆ.
ರಾವಣನಾಗಲು ಏನೆಲ್ಲ ಮಾಡಿದ್ರಿ
ಈ ಒಂದು ಪ್ರಶ್ನೆಗೂ ಯಶ್ ಉತ್ತರ ಕೊಟ್ಟಿದ್ದಾರೆ. ಫಿಜಿಕಲಿ ನಾನು ಹಾಗೆ ಮಾಡಿದೆ. ಹೀಗೆ ಮಾಡಿದೆ ಅಂತ ಹೇಳೋದಿಲ್ಲ.ನಾನು ಒಬ್ಬ ಕಲಾವಿದೆ. ಅದು ನನ್ನ ಕೆಲಸವೇ ಆಗಿದೆ.
ಅಮೆರಿಕಾ ಕಾಮಿಕ್-ಕಾನ್ ಅಲ್ಲಿ ಯಶ್ (ಚಿತ್ರ ಕೃಪೆ: ಯಶ್ ಫ್ಯಾನ್ ಕ್ಲಬ್ ಇನ್ಸ್ಟಾಗ್ರಾಮ್)
ಆದರೆ, ಈ ಒಂದು ಪಾತ್ರದ ಬಗ್ಗೆ ನಾನು ನನ್ನ ಅಜ್ಜ ಹೇಳಿದ ಕತೆಯ ಮೂಲಕವೇ ತಿಳಿದುಕೊಂಡಿದ್ದೇನೆ. ರಾಮಾಯಣದಲ್ಲಿ ಬರುವ ರಾವಣ ಕೆಟ್ಟವನ್ನು ಅನ್ನೋದು ಆಗಲೇ ಗೊತ್ತಾಗಿದೆ.
ಆದರೆ, ಈ ಒಂದು ಪಾತ್ರಕ್ಕೆ ತಯಾರಿ ಅಂತ ಬಂದ್ರೆ, ಆ ಪಾತ್ರವೇ ಆಗಲು ಪ್ರಯತ್ನಿಸಿದ್ದೇನೆ. ರಾವಣ ಅನಿಸಬೇಕು ಆ ರೀತಿನೇ ಈ ಒಂದು ಪಾತ್ರಕ್ಕಾಗಿ ತಯಾರಿ ಮಾಡಿಕೊಂಡಿದ್ದೇನೆ ಅಂತಲೇ ಯಶ್ ಹೇಳಿಕೊಂಡಿದ್ದಾರೆ.
ರಾವಣನ್ನ ಅರ್ಥ ಮಾಡಿಕೊಂಡಿದ್ದೇನೆ..
ರಾವಣ ಪಾತ್ರಕ್ಕಾಗಿ ಫಿಜಿಕಲಿ ಬದಲಾಗಿದ್ದೇನೆ. ಅದಕ್ಕಾಗಿ ಹಾರ್ಡ್ ವರ್ಕ್ ಕೂಡ ಮಾಡಿದ್ದೇನೆ. ಕಲಾವಿದನಾಗಿ ಅದನ್ನ ಮಾಡಲೇಬೇಕು. ಆದರೆ, ರಾವಣನನ್ನ ಅರ್ಥ ಮಾಡಿಕೊಂಡಿದ್ದೇನೆ.
ಇದನ್ನೂ ಓದಿ: Jana Nayagan: ಜನ ನಾಯಗನ್ ಕೊನೆ ದೃಶ್ಯ ನೋಡಿ ಫ್ಯಾನ್ಸ್ ಅಳ್ತಿರೋದ್ಯಾಕೆ? ಅಂಥದ್ದೇನಿದೆ?
ಯಾವ ಸಂದರ್ಭದಲ್ಲಿ ರಾವಣನ ಮನಸ್ಥಿತಿ ಹೇಗೆ ಇರ್ತಾ ಇತ್ತು. ರಾವಣ ಯಾವುದನ್ನ ಹೇಗೆ ತೆಗೆದುಕೊಳ್ಳುತ್ತಿದ್ದ, ಈ ಎಲ್ಲ ವಿಷಯಗಳನ್ನ ತಿಳಿದುಕೊಂಡಿದ್ದೇನೆ. ಇದನ್ನ ತೆರೆ ಮೇಲೆ ತರೋವಾಗ ಎಂಜಾಯ್ ಮಾಡಿದ್ದೇನೆ.
ಆದರೆ, ರಿಯಲ್ ಲೈಫ್ ಅಲ್ಲಿ ನಾವು ರಾವಣನ ತರ ಇರೋಕೆ ಆಗೋದಿಲ್ಲ. ಹಾಗೆ ಈ ಒಂದು ರಾವಣನ ಪಾತ್ರವನ್ನ ಎಂಜಾಯ್ ಮಾಡಿದ್ದೇನೆ. ಅಷ್ಟೆ ಖುಷಿಯಲ್ಲಿಯೇ ಇಡೀ ಪಾತ್ರ ಮಾಡಿದ್ದೇನೆ ಅಂತಲೂ ಯಶ್ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.














