ಬಿಗ್ಬಾಸ್ ಯಾವಾಗ ಶುರುವಾಗಲಿದೆ ಎಂದು ಕಾಯುತ್ತಿರುವವರಿಗೆ ಗುಡ್ನ್ಯೂಸ್ (Good News) ಬಂದಿದೆ. ಈ ಬಾರಿ 6 ಭಾಷೆಗಳಲ್ಲಿಯೂ ಬಿಗ್ಬಾಸ್ (Bigg Boss) ಒಂದೇ ಬಾರಿಗೆ ಶುರುವಾಗಲಿದೆ ಎನ್ನುವ
ವಿಚಾರ ರಿವೀಲ್ ಆಗಿದೆ. ಹೌದು, 6 ಭಾಷೆಗಳಲ್ಲಿ ಬಿಗ್ಬಾಸ್ ಏಕಕಾಲಕ್ಕೆ ಶುರುವಾಗಲಿದ್ದು ಇದು ಪ್ರೇಕ್ಷಕರಿಗೆ ಎಕ್ಸೈಟಿಂಗ್ ಆಗಿದೆ.
ಭಾರತದ ಪ್ರಮುಖ ಮನರಂಜನಾ ಕಂಪನಿಯಾದ ಜಿಯೋಸ್ಟಾರ್ (Jio Hotstar), ಸೆಪ್ಟೆಂಬರ್ 2026 ರಿಂದ ಭಾರತದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನ ಆರು ಭಾಷಾ ಆವೃತ್ತಿಗಳನ್ನು ಏಕಕಾಲದಲ್ಲಿ ಪ್ರಾರಂಭಿಸಲು ಸಜ್ಜಾಗಿದೆ.
ಪ್ರೇಕ್ಷಕರಿಗೆ ನೆಚ್ಚಿನ ಈ ಬಿಗ್ಬಾಸ್ ಹಬ್ಬದ ಸೀಸನ್, ಬಿಗ್ ಬಾಸ್ ಎಲ್ಲಾ ಆರು ಭಾಷೆಗಳಲ್ಲಿ – ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಬಂಗಾಳಿ – ಪ್ರಸಾರವಾಗಲಿದೆ.
ಬಿಗ್ಬಾಸ್ ರಿಯಾಲಿಟಿ ಶೋವನ್ನು ಸಲ್ಮಾನ್ ಖಾನ್ (ಹಿಂದಿ), ವಿಜಯ್ ಸೇತುಪತಿ (ತಮಿಳು), ನಾಗಾರ್ಜುನ (ತೆಲುಗು), ಕಿಚ್ಚ ಸುದೀಪ್ (ಕನ್ನಡ), ಮೋಹನ್ ಲಾಲ್ (ಮಲಯಾಳಂ) ಮತ್ತು ಸೌರವ್ ಗಂಗೂಲಿ (ಬಂಗಾಳಿ) ಸೇರಿದಂತೆ ಭಾರತೀಯ ಚಲನಚಿತ್ರೋದ್ಯಮದ ಪ್ರಮುಖ ತಾರೆಯರು ನಡೆಸಿಕೊಡಲಿದ್ದಾರೆ.
ಬಿಗ್ ಬಾಸ್ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ತಾರಾಬಳಗವು ಹಲವು ಭಾಷೆಗಳಲ್ಲಿ ಏಕಕಾಲದಲ್ಲಿ ಪ್ರಾರಂಭವಾಗಿದೆ.
ಈ ಮೈಲಿಗಲ್ಲನ್ನು ಆಚರಿಸಲು, ಜಿಯೋಸ್ಟಾರ್ ‘ಇಂಡಿಯಾಸ್ ಬಿಗ್ಗೆಸ್ಟ್ ರಿಯಾಲಿಟಿ’ ಎಂಬ ವಿಶೇಷ ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡಿದೆ. ಈ ಪುಸ್ತಕವು ಭಾರತೀಯ ಸಂಸ್ಕೃತಿ, ಪ್ರೇಕ್ಷಕರ ಭಾಗವಹಿಸುವಿಕೆ ಮತ್ತು ಅದರ ವಾಣಿಜ್ಯ ಯಶಸ್ಸಿನ ಮೇಲೆ ಬಿಗ್ ಬಾಸ್ನ ಪ್ರಭಾವವನ್ನು ವಿವರಿಸುತ್ತದೆ. ಅಂತೂ ಈ ಬಾರಿ ಬಿಗ್ಬಾಸ್ ಒಟ್ಟಿಗೆ ಶುರುವಾಗುತ್ತಿದ್ದು ಭಾರೀ ಕ್ರೇಜ್ ಸೃಷ್ಟಿಸುವುದರಲ್ಲಿ ಡೌಟೇ ಇಲ್ಲ ಅಂತಿದ್ದಾರೆ ಫ್ಯಾನ್ಸ್.
ನಿರ್ದಿಷ್ಟವಾಗಿ ಹೇಳುವುದಾದರೆ, ಕಳೆದ 2025 ರಲ್ಲಿಯೇ, ಬಿಗ್ ಬಾಸ್ ಕಾರ್ಯಕ್ರಮವು 500 ಮಿಲಿಯನ್ (500 ಮಿಲಿಯನ್+) ವೀಕ್ಷಕರನ್ನು ತಲುಪಿದೆ. 4,380 ಕೋಟಿ (438 ಬಿಲಿಯನ್+) ವೀಕ್ಷಣಾ ನಿಮಿಷಗಳ ದಾಖಲೆಯನ್ನು ಸಾಧಿಸಿದೆ ಎಂದು ಉಲ್ಲೇಖಿಸಲಾಗಿದೆ. ಇದಲ್ಲದೆ, 46 ವಿಭಾಗಗಳಿಂದ 625 ಕ್ಕೂ ಹೆಚ್ಚು ವ್ಯವಹಾರಗಳು/ಬ್ರಾಂಡ್ಗಳು ಇದರೊಂದಿಗೆ ಕೆಲಸ ಮಾಡಿವೆ.
ಇದನ್ನೂ ಓದಿ: Lenin: 10 ವರ್ಷಗಳ ಬಳಿಕ ಮೊದಲ ಬ್ಲಾಕ್ಬಸ್ಟರ್ ಹಿಟ್! ಅಪ್ಪನನ್ನ ಹಿಂದಿಕ್ಕಿ, ಅಣ್ಣನ ದಾಖಲೆ ಬ್ರೇಕ್ ಮಾಡಲು ಸಜ್ಜಾದ ಅಖಿಲ್
ಈ ಪುಸ್ತಕವು ಬಿಗ್ ಬಾಸ್ ಭಾರತದ ಅತ್ಯಂತ ಪ್ರಭಾವಶಾಲಿ ಮನರಂಜನೆ ಮತ್ತು ಬ್ರ್ಯಾಂಡ್ ಪ್ರಚಾರ ವೇದಿಕೆಯಾಗಿ ಹೊರಹೊಮ್ಮಿದೆ ಎಂದು ದೃಢಪಡಿಸುತ್ತದೆ.
ಕನ್ನಡಿಗರ ನೆಚ್ಚಿನ ಶೋ
ಮನರಂಜನಾ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೆ ಮನೆಮಾತಾಗಲು ಸಜ್ಜಾಗಿದೆ. ಕಳೆದ ಹಲವು ವರ್ಷಗಳಿಂದ ಕನ್ನಡದ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿರುವ ಬಿಗ್ ಬಾಸ್ ಇದೀಗ ತನ್ನ 13ನೇ ಸೀಸನ್ ನೊಂದಿಗೆ ಮರಳಲು ಸಿದ್ಧವಾಗಿದೆ.
ಈ ಕುರಿತಾದ ಮೊದಲ ಪ್ರೋಮೋ ಬಿಡುಗಡೆಯಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಆರಂಭವಾಗಿದ್ದು, ಈ ಬಾರಿಯ ಸೀಸನ್ ಬಗ್ಗೆ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: Jana Nayagan: ರಿಲೀಸ್ಗೆ ಮೊದಲೇ ಜನ ನಾಯಗನ್ ಭರ್ಜರಿ ಕಲೆಕ್ಷನ್! 10 ಕೋಟಿ ಬಾಚಿದ ವಿಜಯ್ ಕೊನೆಯ ಸಿನಿಮಾ
ಬಿಗ್ ಬಾಸ್ ಕನ್ನಡ ಸೀಸನ್ 12 ಯಶಸ್ವಿಯಾಗಿ ಮುಕ್ತಾಯಗೊಂಡ ಕೆಲವೇ ದಿನಗಳಲ್ಲಿ ಹೊಸ ಸೀಸನ್ ಘೋಷಣೆಯಾಗಿರುವುದು ಕಾರ್ಯಕ್ರಮದ ಜನಪ್ರಿಯತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಹೊಸ ಪ್ರೋಮೋದಲ್ಲಿರುವ ಕೆಲವು ವಿಶೇಷ ಸುಳಿವುಗಳು ಈ ಬಾರಿಯ ಸೀಸನ್ ಹಿಂದಿನ ಸೀಸನ್ಗಳಿಗಿಂತ ಭಿನ್ನವಾಗಿರಬಹುದು ಎಂಬ ಕುತೂಹಲ ಮೂಡಿಸಿವೆ.














