ಕರಾವಳಿ ಚಿತ್ರವನ್ನ (Karavali Movie) ಮಂಗಳೂರಿನ ಮಂದಿ ನೋಡಿದ್ದಾರೆ. ರಿಲೀಸ್ ಮುಂಚೇನೆ ಮಂಗಳೂರಿನಲ್ಲಿ ಒಂದು ಪ್ರೀಮಿಯರ್ ಶೋ ಆಗಿದೆ. ಜುಲೈ-19 ರಂದು ಭಾನುವಾರ ಇಲ್ಲಿ ಪ್ರೀಮಿಯರ್ ಶೋ (Premiere
Show) ಆಗಿದೆ. ಇದರಲ್ಲಿ ಚಿತ್ರ ನೋಡಿದ ಮಂದಿಗೆ ಇಡೀ ಚಿತ್ರ ಸುಮಾರು ವಿಚಾರಗಳಿಗೆ ಇಷ್ಟ ಆಗಿದೆ. ಮಹಾಬಲ ಪಾತ್ರಧಾರಿ ಮಿತ್ರ ಅವರ ಕೆಲಸವನ್ನ ಮೆಚ್ಚಿಕೊಂಡಿದ್ದಾರೆ. ಮಾಹವೀರ ಪಾತ್ರಧಾರಿ ರಾಜ್ ಬಿ ಶೆಟ್ಟಿ (Raj B Shetty) ಅವರ ಕೆಲಸವನ್ನ ಕೊಂಡಾಡಿದ್ದಾರೆ. ಪ್ರಜ್ವಲ್ ದೇವರಾಜ್ (Prajwal Devaraj) ಪಾತ್ರದ ಬಗ್ಗೆನೂ ಮೆಚ್ಚುಗೆ ವ್ಯಕ್ತವಾಗಿದೆ. ಈ ಎಲ್ಲ ವಿಷಯದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕರಾವಳಿ ಸಿನಿಮಾ ಹೇಗಿದೆ
ಕರಾವಳಿ ಚಿತ್ರದ ಮೊದಲ ಪ್ರೀಮಿಯರ್ ಶೋ ಮಂಗಳೂರಿನಲ್ಲಿಯೇ ನಡೆದಿದೆ. ಇಲ್ಲಿಯ ಜನ ತಮ್ಮ ಕಡೆಗೆ ಚಿತ್ರ ನೋಡಿ ತುಂಬಾನೆ ಖುಷಿಪಟ್ಟಿದ್ದಾರೆ.
ರಾಜ್ಗಾಗಿಯೇ ಬಂದೆ
ಈ ಚಿತ್ರದ ಕತೆಯಲ್ಲಿ ಮಹಾಬಲ ಪಾತ್ರಧಾರಿ ಮಿತ್ರ ಅವರ ಪಾತ್ರಕ್ಕೆ ಅತಿ ಹೆಚ್ಚು ಪ್ರಶಂಸೆ ಬಂದಿದೆ. ಜೀವನದಲ್ಲಿ ಒಮ್ಮೆ ಈ ರೀತಿಯ ರಿಯಾಕ್ಷನ್ ಪಡೆಯಬೇಕು ಅಂತ ಆಸೆ ಇತ್ತು. ಅದು ಈ ಕರಾವಳಿ ಚಿತ್ರದಿಂದ ಸಿಕ್ಕಿದೆ ಅಂತ ಮಹಾಬಲ ಪಾತ್ರಧಾರಿ ಮಿತ್ರ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Director Srini Movie: ಎ ಫಾರ್ ಆನಂದ್ ಟೈಟಲ್ ಇಟ್ಟಿದ್ಯಾರು? ಚಿತ್ರದ ಐಡಿಯಾ ಕೊಟ್ಟಿದ್ಯಾರು?
ರಾಜ್ ಬಿ ಶೆಟ್ಟಿ ಟಾಪ್
ರಾಜ್ ಬಿ ಶೆಟ್ಟಿ ಈ ಚಿತ್ರದಲ್ಲಿ ಮಹಾವೀರ ಅನ್ನುವ ಪಾತ್ರ ಮಾಡಿದ್ದಾರೆ. ಮಹಾವೀರ ಮತ್ತು ಮಹಾಬಲ ಎರಡು ಪಾತ್ರಗಳು ಈ ಚಿತ್ರದಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿವೆ.
ಮೊದಲ ಪ್ರೀಮಿಯರ್ ಅಲ್ಲಿಯೇ ಚಿತ್ರ ನೋಡಿದ ಮಂಗಳೂರು ಮಂದಿ ಈ ಅಭಿಪ್ರಾಯ ಪಟ್ಟಿದ್ದಾರೆ. ಇವರಿಗೆ ಪ್ರಜ್ವಲ್ ದೇವರಾಜ್ ಪಾತ್ರವು ಇಷ್ಟ ಆಗಿದೆ. ಅದನ್ನು ಇಲ್ಲಿ ಕೆಲವರು ಹೇಳಿಕೊಂಡಿದ್ದಾರೆ. ಆದರೆ, ಮಹಾಬಲ ಮಿತ್ರ ಮತ್ತು ಮಹಾವೀರ ರಾಜ್ ಬಿ ಶೆಟ್ಟಿ ಪಾತ್ರ ಹೆಚ್ಚು ಇಷ್ಟ ಆಗಿದೆ ನೋಡಿ.
ರಾಜ್ಗಾಗಿಯೇ ಬಂದೆ
ಕರಾವಳಿ ಚಿತ್ರವನ್ನ ರಾಜ್ ಬಿ ಶೆಟ್ಟಿಗಾಗಿಯೇ ನೋಡಿದವರು ಇದ್ದಾರೆ. ಅದನ್ನ ಒಬ್ಬ ಯುವತಿ ಹೇಳಿಕೊಳ್ತಾರೆ. ನಾನು ಈ ಚಿತ್ರವನ್ನ ರಾಜ್ ಬಿ ಶೆಟ್ಟಿ ಅವರು ಇದರಲ್ಲಿ ಇದ್ದಾರೆ ಅಂತಲೇ ನೋಡೋಕೆ ಬಂದೆ ಅಂತಲೇ ಹೇಳಿಕೊಂಡಿದ್ದಾರೆ.
ಕರಾವಳಿ ಸಿನಿಮಾ ಹೇಗಿದೆ
ಚಿತ್ರದ ಫಸ್ಟ್ ಹಾಫ್ ಒಂದು ರೀತಿ ಇಷ್ಟ ಆಗಿದೆ. ಸಿನಿಮಾದ ಸೆಕೆಂಡ್ ಹಾಫ್ ಅಂತಲೂ ಅಷ್ಟೆ ಖುಷಿಕೊಟ್ಟಿದೆ. ಚಿತ್ರದ ಡೈರೆಕ್ಷನ್ಗೂ ಮೆಚ್ಚುಗೆ ವ್ಯಕ್ತವಾಗಿದೆ.
ಚಿತ್ರ ನೋಡಿ ಎಮೋಷನಲ್
ಕರಾವಳಿ ಚಿತ್ರ ಎಮೋಷನಲ್ ಕೂಡ ಮಾಡಿದೆ. ಸಿನಿಮಾ ನೋಡ್ತಾನೆ ಕೆಲವರು ಕಣ್ಣೀರಾಗಿರೋದು ಇದೆ. ಇದನ್ನು ಪ್ರೀಮಿಯರ್ ಶೋದ ವಿಡಿಯೋದಲ್ಲಿ ನೋಡಬಹುದು.
ಇದನ್ನೂ ಓದಿ: Prajwal Devaraj: ಪ್ರಜ್ವಲ್ ದೇವರಾಜ್ ಕರ್ಲಿ ಹೇರ್ ಲುಕ್, ಚಂದನವನದಲ್ಲಿ ಹೊಸ ಟ್ರೆಂಡ್
ಕರಾವಳಿ ಚಿತ್ರದಲ್ಲಿ ಮಹಾಬಲ ಮತ್ತು ಮಹಾವೀರ ಹೆಚ್ಚು ಗಮನ ಸೆಳೆದಿದ್ದಾರೆ. ಇವರ ಪಾತ್ರವನ್ನ ಕಂಡು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ತಂಡ ಹಂಚಿಕೊಂಡಿರೋ ಪ್ರೀಮಿಯರ್ ಶೋದ ವಿಡಿಯೋದಲ್ಲಿ ಹೆಚ್ಚಾಗಿ ಮಹಾಬಲ ಮತ್ತು ಮಹಾವೀರ ಪಾತ್ರದ ಮಾತುಗಳೇ ಹೆಚ್ಚಾಗಿವೆ ಅಂತಲೇ ಹೇಳಬಹುದು.
ಜುಲೈ-24 ರಂದು ರಿಲೀಸ್
ಕರಾವಳಿ ಚಿತ್ರ ಜುಲೈ-24 ರಂದು ರಿಲೀಸ್ ಆಗುತ್ತಿದೆ. ರಾಜ್ಯದೆಲ್ಲೆಡೆ ಇದು ಈ ದಿನ ತೆರೆ ಕಾಣುತ್ತಿದೆ. ಪ್ರಜ್ವಲ್ ದೇವರಾಜ್ ಮತ್ತು ಸಂಪದ ಅಭಿನಯದ ಈ ಚಿತ್ರದಲ್ಲಿ ಮಹಾಬಲ ಪಾತ್ರದಲ್ಲಿ ಮಿತ್ರ ನಟಿಸಿದ್ದಾರೆ.
ಮಹಾವೀರ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಅಭಿನಯಿಸಿದ್ದಾರೆ. ಸಚಿನ್ ಬಸ್ರೂರು ಈ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದಾರೆ. ಇವರ ಈ ಚಿತ್ರವನ್ನ ಗುರುದತ್ತ ಗಾಣಿಗ ಡೈರೆಕ್ಷನ್ ಮಾಡಿದ್ದಾರೆ. ನಿರ್ಮಾಪಕರಲ್ಲಿ ಇವರೂ ಒಬ್ಬರಾಗಿದ್ದಾರೆ ಅಂತ ಹೇಳಬಹುದು.














