ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru) ಜನರ ಜೀವನಾಡಿ ಬಿಎಂಟಿಸಿ (BMTC). ಮೆಟ್ರೋ, ಆಟೋ, ಕ್ಯಾಬ್, ಓಲಾ, ಊಬರ್ ಅಬ್ಬರದ ನಡುವೆಯೂ ಬಿಎಂಟಿಸಿ ಬಸ್ (BMTC Bus) ಜನಪ್ರಿಯತೆ ಕಡಿಮೆಯಾಗಿಲ್ಲ.
ಅನೇಕ ಮಂದಿ ಸಂಚಾರಕಕ್ಕಾಗಿ ನಿತ್ಯವೂ ಬಿಎಂಟಿಸಿ ಬಸ್ಗಳಲ್ಲೇ ಸಂಚರಿಸುತ್ತಾರೆ. ಆದರೆ ಹೀಗೆ ಸಂಚರಿಸೋ ಕೆಲವರು ಬಸ್ನಲ್ಲಿ ಅಕ್ಕಪಕ್ಕದವರಿಗೆ ತೊಂದರೆ ಕೊಡುತ್ತಾರೆ. ತಮ್ಮ ಮೊಬೈಲ್ನಲ್ಲಿ (Mobile) ಜೋರಾಗಿ ಸಾಂಗ್, ಯೂಟ್ಯೂಬ್ ವಿಡಿಯೋ ಪ್ಲೇ ಮಾಡುತ್ತಲೋ, ಧಾರಾವಾಹಿ ನೋಡುತ್ತಲೋ ಅಥವಾ ವಾಟ್ಸಾಪ್ ಸ್ಟೇಟಸ್, ರೀಲ್ಸ್ ನೋಡುತ್ತಲೋ ಜೋರಾಗಿ ಸೌಂಡ್ ಮಾಡ್ತಾರೆ. ಕೆಲವೊಮ್ಮೆ ಕಂಟಕ್ಟರ್ ಹೇಳಿದ್ರೂ ಕೇಳೋದಿಲ್ಲ. ಅಂಥ ಸೌಂಡ್ ಪಾರ್ಟಿಗಳಿಗೆ ಬಿಎಂಟಿಸಿ ಖಡಕ್ ವಾರ್ನ್ ಮಾಡಿದೆ.
ನಮ್ಮ ಮೆಟ್ರೋ ಬಳಿಕ ಎಚ್ಚೆತ್ತುಕೊಂಡ ಬಿಎಂಟಿಸಿ
ನಮ್ಮ ಮೆಟ್ರೋ ಬೆನ್ನಲ್ಲೇ ಬಿಎಂಟಿಸಿ ಕೂಡ ಇದೀಗ ಅಲರ್ಟ್ ಆಗಿದೆ. ಬಿಎಂಟಿಸಿ ಬಸ್ನಲ್ಲಿ ಜೋರಾಗಿ ಮೊಬೈಲ್ ಲೌಡ್ ಸ್ಪೀಕರ್ ಹಾಕದಂತೆ ಪ್ರಯಾಣಿಕರಿಗೆ ಬಿಎಂಟಿಸಿ ಖಡಕ್ ಸೂಚನೆ ನೀಡಿದೆ. ಬಿಎಂಟಿಸಿ ಬಸ್ನಲ್ಲಿ ಸಂಚರಿಸೋ ಯಾವುದೇ ಪ್ರಯಾಣಿಕರು ಅನುಚಿತ ವರ್ತನೆ ತೋರದಂತೆ ಬಿಎಂಟಿಸಿ ಎಚ್ಚರಿಕೆ ನೀಡಿದೆ.
ಬಸ್ನಲ್ಲಿ ಲೌಡ್ ಸ್ಪೀಕರ್ ಹಾಕಿದ್ರೆ ಹುಷಾರ್
ಬಸ್ನಲ್ಲಿ ಪ್ರಯಾಣಿಕರು ಜೋರಾಗಿ ಮೊಬೈಲ್ನಲ್ಲಿ ಲೌಡ್ ಸ್ಪೀಕರ್ ಹಾಕಿ ಹಾಡು ಹಾಕಿದ್ರೆ ಅಂತಹ ಪ್ರಯಾಣಿಕರನ್ನು ಕೂಡಲೇ ಬಸ್ನಿಂದ ಕೆಳಕ್ಕೆ ಇಳಿಸಲು ಬಿಎಂಟಿಸಿ ಸೂಚನೆ ನೀಡಿದೆ. ಈ ಬಗ್ಗೆ ಕಳೆದ ವಾರವೇ ತನ್ನ ಎಲ್ಲಾ ನಿರ್ವಾಹಕರಿಗೆ ಬಿಎಂಟಿಸಿ ಖಡಕ್ ಸೂಚನೆ ನೀಡಿದೆ.
ಇದನ್ನೂ ಓದಿ: Car Colors: ನಿಮ್ಮ ಕಾರಿನ ಬಣ್ಣವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಕೆಂಪು, ಬಿಳಿ, ಕಪ್ಪು ಕಾರಿನ ಅರ್ಥವೇನು?
ಕೂಡಲೇ ಬಸ್ನಿಂದ ಇಳಿಸುವಂತೆ ಸೂಚನೆ
ಇಂತಹ ಪ್ರಯಾಣಿಕರಿಗೆ ಮೋಟಾರ್ ವೆಹಿಕಲ್ ಆ್ಯಕ್ಟ್ ಪ್ರಕಾರ ದಂಡ ಹಾಕಲು, ಹೆಚ್ಚುವರಿ ದಂಡ ಹಾಕಲು ಅವಕಾಶ ಇಲ್ಲ. ಹೀಗಾಗಿ ಯಾರಾದರೂ ಬಸ್ನಲ್ಲಿ ಅನುಚಿತವಾಗಿ ವರ್ತಿಸಿದ್ರೆ, ಸಹ ಪ್ರಯಾಣಿಕರಿಗೆ ತೊಂದರೆ ಕೊಟ್ರೆ, ಲೌಡ್ ಸ್ಪೀಕರ್ನಲ್ಲಿ ಹಾಡು ಹಾಕಿ ಕಿರಿಕಿರಿ ಮಾಡಿದ್ರೆ ಮೊದಲಿಗೆ ವಾರ್ನಿಂಗ್ ಕೊಡಲು ನಿರ್ವಾಹಕರಿಗೆ ಬಿಎಂಟಿಸಿ ಸೂಚನೆ ಕೊಟ್ಟಿದೆ. ವಾರ್ನಿಂಗ್ಗೆ ಬಗ್ಗದಿದ್ರೆ ಅಂತಹ ಪ್ರಯಾಣಿಕರನ್ನು ಕೂಡಲೇ ಬಸ್ನಿಂದ ಕೆಳಕ್ಕೆಇಳಿಸಲು ಸೂಚನೆ ನೀಡಲಾಗಿದೆ.
ಬೆಂಗಳೂರಲ್ಲಿ 25 ಲಕ್ಷಕ್ಕಿಂತ ಹೆಚ್ಚಾಯ್ತು ಕಾರುಗಳು
ಇನ್ನು ಇದರ ನಡುವೆ ಬೆಂಗಳೂರಲ್ಲಿ ಖಾಸಗಿ ಕಾರುಗಳ ಸಂಖ್ಯೆ 25 ಲಕ್ಷ ದಾಟಿದೆ ಎಂಬ ಮಾಹಿತಿ ಲಭ್ಯವಾಗದೆ. ವರದಿಯ ಪ್ರಕಾರ ಸದ್ಯ ಬೆಂಗಳೂರಿನಲ್ಲಿ 25 ಲಕ್ಷದ 20 ಸಾವಿರದ 535 ಕಾರುಗಳು ಓಡಾಟ ನಡೆಸುತ್ತಿವೆ. ಈ ಪೈಕಿ ಜೂನ್ ತಿಂಗಳಲ್ಲಿ 13,519 ಕಾರುಗಳು ನೋಂದಣಿಯಾಗಿವೆ.
ಖಾಸಗಿ ವಾಹನಗಳಿಂದ ಟ್ರಾಫಿಕ್ ಜಾಮ್ ಹೆಚ್ಚಳ
ಇದರ ಹೊರತಾಗಿ ಜೂನ್ ತಿಂಗಳಲ್ಲಿ ಒಟ್ಟು 78,000 ವಾಹನಗಳ ನೋಂದಣಿಯಾಗಿದೆ. ಈ ಪೈಕಿ ನೋಂದಣಿಯಾಗಿರೋ ಕಾರುಗಳ ಸಂಖ್ಯೆಯೇ 13,519ರಷ್ಟಿದೆ. ಬೆಂಗಳೂರಲ್ಲಿ ಸದ್ಯ ವಾಹನಗಳಸಂಖ್ಯೆ 1 ಕೋಟಿ 28 ಲಕ್ಷ ಇದೆ. ಈ ರೀತಿ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗಿದ್ರಿಂದ ನಗರದಾದ್ಯಂತ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಾಗ್ತಿದೆ ಅಂತ ವರದಿ ಹೇಳಿದೆ.
(ವರದಿ: ಶರಣು ಹಂಪಿ, ನ್ಯೂಸ್ 18 ಕನ್ನಡ, ಬೆಂಗಳೂರು)














