ಸ್ಮಾರ್ಟ್ಫೋನ್, ಸೋಶಿಯಲ್ ಮೀಡಿಯಾ ಚೆಕ್ ಇನ್ ಇರುವ (Digital World) ಸಮಯದಲ್ಲಿ ಅಂಚೆಕಚೇರಿ ಸ್ಟಾಂಪ್ ಶೇಖರಣೆಗೆ (Post Office Stamp Collection) ಬೇಡಿಕೆ ಹೆಚ್ಚಾಗುತ್ತಿದೆ. ಇಂಡಿಯಾ
ಪೋಸ್ಟ್ ಕರ್ನಾಟಕದ ಪೋಸ್ಟಲ್ ಸರ್ಕಿಲ್ (Karnataka postal Circle) ನೀಡುತ್ತಿರುವ ‘ಫಿಲಾಟೆಲಿ ಪಾಸ್ಪೋರ್ಟ್’ಗೆ (Philately Passport) ಭಾರೀ ಬೇಡಿಕೆ ಹೆಚ್ಚಾಗುತ್ತಿದೆ. ಪ್ರಯಾಣಿಕರು, ಸ್ಟಾಂಪ್ ಕಲೆಕ್ಟರ್ಗಳಲ್ಲಿ ಹೊಸ ಕ್ರೇಸ್ ಸೃಷ್ಟಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಹೊಸ ಫಿಲಾಟೆಲಿ ಪಾಸ್ಪೋರ್ಟ್ ಗಾಗಿ ಬೆಂಗಳೂರಿನಲ್ಲಿ (Bengaluru) ಜನರಲ್ ಪೋಸ್ಟ್ ಆಫೀಸ್ ಬಳಿ ಜನರು ಕ್ಯೂನಲ್ಲಿ ನಿಂತು ಪಡೆದುಕೊಂಡಿದ್ದಾರೆ.
ಫಿಲಾಟೆಲಿ ಪಾಸ್ಪೋರ್ಟ್ ಅನ್ನು ಮೊದಲು 2024ರಲ್ಲಿ ಆರಂಭ ಮಾಡಲಾಗಿತ್ತು. ಈಗ ಕರ್ನಾಟಕದಾದ್ಯಂತ ಸುಮಾರು 100 ಪ್ರವಾಸಿತಾಣ, ಐತಿಹಾಸಿಕ ಪ್ರದೇಶಗಳನ್ನು ಜೋಡಿಸಿ ಹೊಸ ಫಿಲಾಟೆಲಿ ಪಾಸ್ಪೋರ್ಟ್ ಅನ್ನು ಬಿಡುಗಡೆ ಮಾಡಿದ್ದಾರೆ. ಸುಮಾರು 1,500 ಫಿಲಾಟೆಲಿ ಪಾಸ್ಪೋರ್ಟ್ ಹೊಸ ಬ್ಯಾಚ್ಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ.
ಫಿಲಾಟೆಲಿ ಪಾಸ್ಪೋರ್ಟ್ ಅಂದರೇ ಏನು?
ಹೆಸರಿಗೆ ಪಾಸ್ಪೋರ್ಟ್ ಅಂತ ಕರೆದರೂ, ಇದಕ್ಕೂ ವಿದೇಶಿ ಪ್ರವಾಸಕ್ಕೂ ಯಾವುದೇ ಸಂಬಂಧ ಇಲ್ಲ. ಇದು ಕರ್ನಾಟಕದಲ್ಲಿ ವಿವಿಧ ಪ್ರದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರಿಗಾಗಿ ನೀಡುವ ಒಂದು ಮೆಮೊರಿ ಕಲೆಕ್ಟರ್ ಬುಕ್ಲೆಟ್ ಅಂತ ಹೇಳಬಹುದು. ನೀವು ಕರ್ನಾಟಕದಲ್ಲಿ ನಿಮ್ಮ ಇಷ್ಟದ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿರುವ ಪೋಸ್ಟ್ ಆಫೀಸ್ಗೆ ಭೇಟಿ ನೀಡಿ ಪೋಸ್ಟಲ್ ಸ್ಟಾಂಪ್ ಖರೀದಿ ಮಾಡಿ, ಅಲ್ಲಿ ಮಾತ್ರವೇ ಸಿಗುವ ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಿಲೇಷನ್ (ಪಿಪಿಸಿ) ಮುದ್ರೆಯನ್ನು ಇದರಲ್ಲಿ ನಮೂದಿಸಬಹುದು. ದೇವಾಲಯ, ಕೋಟೆ, ಮ್ಯೂಸಿಯಂ, ಝೂ, ಅಭಯಾರಣ್ಯಗಳು, ಐತಿಹಾಸಿಕ ಪ್ರದೇಶಗಳ ವಿಶೇಷ ಗುರುತುಗಳನ್ನು ಹೊಂದಿರುವ ಮುದ್ರೆ ಇದರಲ್ಲಿ ಲಭ್ಯವಿರುತ್ತದೆ.
ಟ್ರಾವೆಲ್ ಮಾಡುವವರಿಗೆ ವಿಶೇಷ ಆಸಕ್ತಿ!
ಬೇರೆ ಬೇರೆ ಪ್ರದೇಶಗಳಿಗೆ ಭೇಟಿ ನೀಡುವ ಜನರಿಗೆ ಇದು ಆ ಪ್ರದೇಶಕ್ಕೆ ಹೋದ ಬಗ್ಗೆ ಒಂದು ಗುರುತನ್ನು ನೀಡುತ್ತದೆ. ಆದ್ದರಿಂದ ಈ ಪಾಸ್ಪೋರ್ಟ್ ಅನ್ನು ಹಲವು ‘ಟ್ರಾವೆಲ್ ಚಾಲೆಂಜ್’ ಆಗಿ ಪಡೆದುಕೊಳ್ಳುತ್ತಾರೆ. ಈ ಬುಕ್ನಲ್ಲಿರುವ ಎಲ್ಲಾ ಸ್ಥಳಗಳಿಗೆ ಭೇಟಿ ನೀಡಿ, ಅದರ ಅನುಭವವನ್ನು ಪಡೆದುಕೊಂಡು, ಕರ್ನಾಟಕದ ಅನ್ವೇಷಣೆಯನ್ನು ಮಾಡುವ ಅವಕಾಶವನ್ನು ಪಡೆದುಕೊಳ್ಳುತ್ತಾರೆ.
ಈ ಫಿಲಾಟೆಲಿ ಪಾಸ್ಪೋರ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ವಿವಿಧ ಪ್ರದೇಶಗಳಲ್ಲಿ ಅಲ್ಲಿನ ವಿಶೇಷ ಪೋಸ್ಟಲ್ ಮುದ್ರೆಗಳನ್ನು ಸಂಗ್ರಹಿಸಿ ಆ ವಿಡಿಯೋಗಳನ್ನು ರೀಲ್ಸ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ರೀಲ್ಸ್ ಗಳು ಸಖತ್ ವೈರಲ್ ಆಗುತ್ತಿದ್ದು, ಇದಕ್ಕೂ ಮುನ್ನ ಪೋಸ್ಟ್ ಆಫೀಸ್ ಸ್ಟಾಂಪ್ ಕಲೆಕ್ಟ್ ಮಾಡುವ ಹವ್ಯಾಸವನ್ನು ಹೊಂದಿದ್ದವರು ಮಾತ್ರ ಮಾಡುತ್ತಿದ್ದ ಈ ಕಾರ್ಯವನ್ನು ಈಗ ಟ್ರಾವೆಲರ್ಸ್ ಹಾಗೂ ಇತಿಹಾಸ ಹಾಗೂ ಪ್ರವಾಸ ಮಾಡುವುದನ್ನು ಹವ್ಯಾಸವಾಗಿ ಹೊಂದಿರುವ ಹಲವರನ್ನು ಆಕರ್ಷಣೆ ಮಾಡಿದೆ.
ಇದನ್ನೂ ಓದಿ: Toll Hike: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ವಾಹನ ಸವಾರರಿಗೆ ಬಿಗ್ ಶಾಕ್! ಮೂರೇ ತಿಂಗಳಲ್ಲಿ 2ನೇ ಬಾರಿ ಟೋಲ್ ದರ ಹೆಚ್ಚಳ
ಹಳೆ ಹವ್ಯಾಸಕ್ಕೆ ಹೊಸ ರೂಪ!
ಫಿಲಾಟೆಲಿ ಅಂದರೆ ಸ್ಟಾಂಪ್ ಶೇಖರಣೆ ಮಾಡುವುದನ್ನು ಪ್ರೋತ್ಸಾಹಿಸಲು ಇಂಡಿಯಾ ಪೋಸ್ಟ್ ಈಗಾಗಲೇ ವಿಶೇಷ ಕವರ್, ಸ್ಮಾರಕ ಸ್ಟಾಂಪ್ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿ ಮಾಡಿದೆ. ಈಗ ಫಿಲಾಟೆಲಿ ಪಾಸ್ಪೋರ್ಟ್ ಮೂಲಕ ಹಳೆ ಹವ್ಯಾಸವನ್ನು ಹೊಸ ರೂಪದಲ್ಲಿ ನೀಡಿದೆ ಎಂದು ಹೇಳಬಹುದು. ಅದರಲ್ಲೂ ಡಿಜಿಟಲ್ ಯುಗದಲ್ಲಿ ಪ್ರಯಾಣಕ್ಕೆ ಫೋಟೋ, ವಿಡಿಯೋ ಮಾತ್ರವಲ್ಲದೇ, ಭೌತಿಕ ಗುರುತು ನೀಡುವ ವಿಶೇಷ ಪ್ರಯತ್ನಕ್ಕೆ ಕರ್ನಾಟಕದಲ್ಲಿ ಭಾರೀ ಬೇಡಿಕೆ ಬಂದಿರೋದು ಸಕಾರಾತ್ಮಕ ಬೆಳವಣಿಗೆ ಅಂತ ಹೇಳಬಹುದಾಗಿದೆ.














