ಜನ ನಾಯಗನ್ ಚಿತ್ರದ (Jana Nayagan) ಕೊನೆಯಾ ಆ ಎರಡು ನಿಮಿಷ ಎಲ್ಲರನ್ನು ಎಮೋಷನಲ್ (Emotional) ಮಾಡಿದೆ. ಕಾರಣ, ಈ ಕೊನೆಯ ಎರಡು ನಿಮಿಷದಲ್ಲಿ ದಳಪತಿ ಸಿ.ಎ.ವಿಜಯ್ (Thalapathy CM
Vijay) ಅಷ್ಟು ಚಿತ್ರಗಳ ಒಂದು ದೃಶ್ಯವೂ ಬಂದು ಹೋಗುತ್ತದೆ. ಯಾರೂ ನಿರೀಕ್ಷೆನೆ ಮಾಡಿರಲಿಲ್ಲ. ಆದರೆ, ಇದು ಚಿತ್ರ ಮುಗಿದ್ಮೇಲೆ ಈ ದೃಶ್ಯ ಬರೋಕೆ ಶುರು ಆಗುತ್ತದೆ. ಹಾಗೆ ಬರೋ ಹೊತ್ತಿಗೆ ವಿಜಯ್ ಫ್ಯಾನ್ಸ್ (Vijay Fans) ಎಮೋಷನಲ್ ಆಗ್ತಾನೆ ಹೋಗಿದ್ದಾರೆ. ಇದು ಕೊನೆಯ ಚಿತ್ರ ಅನ್ನುವ ವಿಷಯ ತಿಳಿದುಕೊಂಡೇ ವಿಜಯ್ ಫ್ಯಾನ್ಸ್ ಎಮೋಷನಲ್ ಆಗಿಯೇ ಹೊರಗೆ ಬಂದಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಜನ ನಾಯಗನ್ ಕೊನೆ ದೃಶ್ಯ
ಜನ ನಾಯಗನ್ ಚಿತ್ರ ವಿಜಯ್ ಕೊನೆಯ ಸಿನಿಮಾ ಅನ್ನೋದು ಗೊತ್ತೇ ಇದೆ. ಆದರೆ, ಈ ನಡುವೆ ವಿಜಯ್ ಬೇರೆ ಚಿತ್ರ ಮಾಡಬಹುದು ಅನ್ನುವ ಮಾತು ಇತ್ತು.
ಕುಳಿತಲ್ಲಿಯೇ ಕಣ್ಣೀರಾದ ಯುವತಿಯರು
ಆದರೆ ಚಿತ್ರದ ಕೊನೆಯಲ್ಲಿ ಬರುವ ಎರಡು ನಿಮಿಷದ ವಿಡಿಯೋ ಅದನ್ನ ಸುಳ್ಳು ಮಾಡಿದೆ. ಚಿತ್ರ ನೋಡಿ ಖುಷಿಪಟ್ಟವರಿಗೆ ಕೊನೆಯ ಎರಡು ನಿಮಿಷದ ವಿಡಿಯೋ ಎಮೋಷನಲ್ ಮಾಡಿದೆ.
ಇದನ್ನೂ ಓದಿ: Toxic Movie: ಟಾಕ್ಸಿಕ್ ಟೈಟಲ್ ಅಲ್ಲೇ ಇದೆ ಒಂದು ಸೀಕ್ರೆಟ್; ನಿರ್ಮಾಪಕ ಕೆವಿಎನ್ ಬಿಚ್ಚಿಟ್ಟ ಮತ್ತೊಂದು ರಹಸ್ಯ
ಇಡೀ ಚಿತ್ರ ಬದುಕಿನಲ್ಲಿ ಅದೆಷ್ಟು ಚಿತ್ರಗಳನ್ನ ವಿಜಯ್ ಮಾಡಿದ್ದಾರೋ, ಆ ಅಷ್ಟು ಚಿತ್ರಗಳ ಪಾತ್ರಗಳು ಈ ಒಂದು ಕೊನೆಯ ಎರಡು ನಿಮಷದ ವಿಡಿಯೋದಲ್ಲಿ ಬಂದು ಹೋಗುತ್ತವೆ ನೋಡಿ.
ವಿಜಯ್ ಫ್ಯಾನ್ಸ್ ಎಮೋಷನಲ್
ವಿಜಯ್ ಫ್ಯಾನ್ಸ್ ಇದನ್ನ ನಿರೀಕ್ಷೆ ಮಾಡಿಯೇ ಇರಲಿಲ್ಲ. ಆದರೆ, ಈ ಒಂದು ವಿಡಿಯೋ ಕೊನೆಗೆ ಬಂದೇ ಬಿಡುತ್ತದೆ. ಇದನ್ನ ನೋಡ್ತಾನೇ ಫ್ಯಾನ್ಸ್ ಎಮೋಷನ್ ಆಗ್ತಿದ್ದಾರೆ.
ಥಿಯೇಟರ್ ಅಲ್ಲಿಯೇ ಕುಳಿತು ಕಣ್ಣೀರಾಗಿದ್ದಾರೆ. ಚಿತ್ರ ಮುಗಿದು ಸ್ಕ್ರೀನ್ ಆಫ್ ಆದರೂ ಅಷ್ಟೇನೆ, ಕಣ್ಣೀರು ಹಾಕುತ್ತಲೆ ಕುಳಿತ ದೃಶ್ಯಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಚಿತ್ರದ ಕೊನೆಯ ದೃಶ್ಯ ಲೀಕ್
ಫ್ಯಾನ್ಸ್ ವಿಡಿಯೋ ವೈರಲ್
ಜನ ನಾಯಗನ್ ಚಿತ್ರ ನೋಡಿದ ಫ್ಯಾನ್ಸ್ ವಿಡಿಯೋ ವೈರಲ್ ಆಗಿವೆ. ಅದರಲ್ಲೂ ಕೊನೆಯ ದೃಶ್ಯ ನೋಡಿಯೇ ಹೊರ ಬಂದವರ ವಿಡಿಯೋ ಹೆಚ್ಚು ಶೇರ್ ಆಗಿವೆ.
ಇದನ್ನೂ ಓದಿ: Karavali Movie: ಕರಾವಳಿ ಸಿನಿಮಾ ರಿಲೀಸ್, ಮೂವಿ ನೋಡಿ ಜನ ಏನಂದ್ರು? ಫಸ್ಟ್ ಡೇ ಫಸ್ಟ್ ಶೋ ಪಬ್ಲಿಕ್ ರಿಯಾಕ್ಷನ್
ಯಾರೆಲ್ಲ ಕಣ್ಣೀರು ಹಾಕಿದ್ದಾರೋ ಅವರೆಲ್ಲ ತಮ್ಮ ತಮ್ಮ ಇನ್ಸ್ಟಾಗ್ರಾಮ್ ಅಲ್ಲಿ ತಮ್ಮ ಈ ಎಮೋಷನಲ್ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇವು ಜುಲೈ-23 ರಂದು ಚಿತ್ರ ರಿಲೀಸ್ ಆದ ದಿನವೇ ಎಲ್ಲರ ಗಮನ ಸೆಳೆದು ಬಿಟ್ಟಿವೆ ನೋಡಿ.
ಚಿತ್ರದ ಕೊನೆಯ ದೃಶ್ಯ ಲೀಕ್
ಜನರು ಚಿತ್ರದ ಕೊನೆಯ ದೃಶ್ಯ ನೋಡಿ ಎಮೋಷನಲ್ ಆಗಿದ್ದಾರೆ. ಇದೆನೋ ಸರಿ ಬಿಡಿ. ಆದರೆ, ಸ್ಕ್ರೀನ್ ಮೇಲೆ ಬರೋ ದೃಶ್ಯವನ್ನ ಫ್ಯಾನ್ಸ್ ಶೂಟ್ ಮಾಡಿದ್ದಾರೆ.
ತಮ್ಮ ಎಮೋಷನಲ್ ವಿಡಿಯೋ ಜೊತೆಗೆ ಚಿತ್ರದ ಕೊನೆಯ ಈ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಇದರಿಂದ ಕೊನೆಯಲ್ಲಿ ಬರುವ ದೃಶ್ಯ ಏನು ಅನ್ನೋದು ಎಲ್ಲರಿಗೂ ಗೊತ್ತಾಗಿದೆ. ಚಿತ್ರ ನೋಡದೇ ಇರೋರಿಗೂ ಇದು ಈಗಲೇ ಗೊತ್ತಾಗಿದೆ.
ಕೊನೆಯ ಸಿನಿಮಾ
ಹಾಗೇನೆ ಜನ ನಾಯಗನ್ ಚಿತ್ರ ಸಿ.ಎಂ. ವಿಜಯ್ ಅವರ ಚಿತ್ರ ಜೀವನದಲ್ಲಿ ಕೊನೆಯ ಸಿನಿಮಾ ಅನ್ನೋದು ಈಗ ಗೊತ್ತಾಗಿದೆ. ಸಿ.ಎಂ.ಆಗಿದ್ದರು ನಡುವೆ ಸಿನಿಮಾ ಮಾಡಬಹುದು ಅನ್ನುವ ನಿರೀಕ್ಷೆ ಇತ್ತು. ಆದರೆ, ಅದು ಸುಳ್ಳಾಗಿದೆ ಅಂತಲು ಹೇಳಬಹುದು.














