ರಾಮಾಯಣ ಚಿತ್ರದ (Ramayana Movie) ಟ್ರೈಲರ್ ರಿಲೀಸ್ (Trailer Release) ಆಗುತ್ತಿದೆ. ಇದೇ ತಿಂಗಳು ಅದು ಬಿಡುಗಡೆ ಆಗುತ್ತಿದೆ. ವಿಶ್ವದಾದ್ಯಂತ ಈ ಟ್ರೈಲರ್ ರಿಲೀಸ್ ಆಗುತ್ತಿದೆ. ಈ ವಿಷಯವನ್ನ
ಚಿತ್ರ ತಂಡ ದೆಹಲಿಯಲ್ಲಿ ನಡೆದ ಪ್ರಥಮ ಸಂಕಲ್ಪ ಕಾರ್ಯಕ್ರಮದಲ್ಲಿಯೇ ಹೇಳಿಕೊಂಡಿದೆ. ರಾಕಿಂಗ್ ಸ್ಟಾರ್ ಯಶ್, (Rocking Star Yash) ಸಾಯಿ ಪಲ್ಲವಿ, ರಣಬೀರ್ ಕಪೂರ್, (Ranbir Kapoor) ಡೈರಕ್ಟರ್ ನಿತೇಶ್ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ತಮ್ಮ ಈ ಮಹತ್ವಾಕಾಂಕ್ಷಿ ಪ್ರಾಜೆಕ್ಟ್ನ ಸುಮಾರು ವಿಚಾರಗಳನ್ನ ಹೇಳಿಕೊಂಡಿದ್ದಾರೆ. ಅದರಲ್ಲಿ ಟ್ರೈಲರ್ ರಿಲೀಸ್ ಮ್ಯಾಟರ್ ಕೂಡ ಇದೆ. ಈ ವರ್ಷ ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗ್ತಿರೋ ಈ ಚಿತ್ರದ ಇನ್ನಷ್ಟು ವಿಷಯ ಇಲ್ಲಿದೆ ಓದಿ.
ಜುಲೈ-24 ರಂದು ಚಿತ್ರ ರಿಲೀಸ್
ರಾಮಾಯಣ ಚಿತ್ರದ ನಿರೀಕ್ಷೆ ಜಾಸ್ತಿ ಇದೆ. ಈ ಚಿತ್ರದ ಕತೆ ಎಲ್ಲರಿಗೂ ಗೊತ್ತಿದೆ. ಆದರೂ ಈ ಚಿತ್ರದ ಕತೆ ನಮ್ಮ ಜೀವನದ ಒಂದು ಭಾಗವೇ ಆಗಿದೆ. ಇದರಲ್ಲಿರೋ ಮೌಲ್ಯವನ್ನ ಮತ್ತೆ ಮತ್ತೆ ತಿಳಿಸುವ ಕೆಲಸವು ಇಲ್ಲಾಗುತ್ತಿದೆ.
ನಿತೇಶ್ ತಿವಾರಿ ಸಿನಿಮಾ
500 ಶಾಲೆಯ ಮಕ್ಕಳಿಗೆ ಇದರ ಮೌಲ್ಯವನ್ನ ತಿಳಿಸುವ ಕೆಲಸವು ಆಗಿದೆ. ಇದೊಂದು ಸಿನಿಮಾ ಅಲ್ಲ. ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿದೆ ಅನ್ನೋದನ್ನ ಶಾಲಾ ಮಕ್ಕಳಿಗೆ ವಿಶೇಷವಾಗಿಯೇ ಹೇಳುವ ಕೆಲಸ ಮಾಡಿದೆ.
ವಿಶ್ವದಾದ್ಯಂತ ಟ್ರೈಲರ್ ರಿಲೀಸ್
ರಾಮಾಯಣ ಚಿತ್ರದ ಟ್ರೈಲರ್ ಇನ್ನು ರಿಲೀಸ್ ಆಗಿಲ್ಲ. ಆದರೆ, ಇದನ್ನ ವಿಶ್ವಮಟ್ಟದಲ್ಲಿಯೇ ರಿಲೀಸ್ ಮಾಡುವ ಪ್ಲಾನ್ ಇದೆ. ಅದನ್ನ ಚಿತ್ರದ ‘ಪ್ರಥಮ ಸಂಕಲ್ಪ’ ಕಾರ್ಯಕ್ರಮದಲ್ಲಿಯೇ ಹೇಳಲಾಗಿದೆ.
ಇದನ್ನೂ ಓದಿ: 72nd National Film Awards: ಕನ್ನಡಿಗನ ಸಿನಿಮಾ ಕೃತಿಗೆ ಅತ್ಯುತ್ತಮ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ! ಯಾವುದದು ಗೊತ್ತಾ?
ಜುಲೈ-24 ರಂದು ಈ ಚಿತ್ರದ ಪ್ರಥಮ ಟ್ರೈಲರ್ ರಿಲೀಸ್ ಆಗುತ್ತದೆ ಅನ್ನೋದನ್ನ ಇಲ್ಲಿ ಹೇಳಲಾಗಿದೆ. ಇದರೊಟ್ಟಿಗೆ ಶುಕ್ರವಾರ ರಾಮಾಯಣದ ಈ ಟ್ರೈಲರ್ ವಿಷಯ ಅತಿ ಹೆಚ್ಚು ಗಮನ ಸೆಳೆಯುವ ಸಾಧ್ಯತೆನೂ ಇದೆ. ಕೇವಲ ಟೀಸರ್ಗಳು ಇಲ್ಲಿವರೆಗೂ ರಿಲೀಸ್ ಆಗಿವೆ. ಆದರೆ, ಇದೀಗ ಸಿನಿಮಾ ಟ್ರೈಲರ್ ಬೇರೆ ಕುತೂಹಲವನ್ನು ಹುಟ್ಟಿಸುವ ಸಾಧ್ಯತೆನೂ ಇದೆ.
ನಿತೇಶ್ ತಿವಾರಿ ಸಿನಿಮಾ
ನಿತೇಶ್ ತಿವಾರಿ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಇವರ ಕಲ್ಪನೆಯ ಈ ಚಿತ್ರ ಒಂದಲ್ಲ ಎರಡು ಭಾಗದಲ್ಲಿ ಬರ್ತಿದೆ. ಮೊದಲ ಭಾಗ ಈ ವರ್ಷ ದೀಪಾವಳಿಗೆ ಬರ್ತಿದೆ. ಇನ್ನೊಂದು ಭಾಗ 2027 ರಲ್ಲಿ ದೀಪಾವಳಿ ಹಬ್ಬಕ್ಕೇನೆ ಬರ್ತಿದೆ.
ಈ ಚಿತ್ರದ ಬಗ್ಗೆ ಇವರು ಹೀಗೆ ಹೇಳಿಕೊಳ್ಳುತ್ತಾರೆ. ರಾಮಾಯಣದ ಮೌಲ್ಯಗಳು ಸಾರ್ವತ್ರಿಕವಾಗಿಯೇ ಇವೆ. ಈ ಹಿನ್ನೆಲೆಯಲ್ಲಿಯೇ ಚಿತ್ರದ ಪ್ರತಿಯೊಂದು ದೃಶ್ಯವನ್ನು ನಾವು ಪ್ರಾಮಾಣಿಕವಾಗಿಯೇ ಮತ್ತು ಗೌರವದಿಂದಲೇ ಚಿತ್ರೀರಿಸಿದ್ದೇವೆ ಅಂತಲೇ ಹೇಳಿದ್ದಾರೆ.
ಆಸ್ಕರ್ ವಿನ್ನರ್ ಮ್ಯೂಸಿಕ್ ಡೈರೆಕ್ಟರ್
ಹೊಸ ಅನುಭವ ನೀಡುವ ಸಿನಿಮಾ
ರಾಯಾಮಾಯಣ ಚಿತ್ರವು ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ. ಕಲಾವಿದರ ಶ್ರೇಷ್ಠ ಅಭಿನಯ ಹಾಗೂ ತಂಡದ ಪರಿಶ್ರಮ ಈ ಒಂದು ಅನುಭವನ್ನ ಕಟ್ಟಿಕೊಡುತ್ತದೆ.
ಇದನ್ನೂ ಓದಿ: Yash-Ramayana: ‘ರಾಮಾಯಣ’ ಭಾರತದ ಕನಸು ಎಂದ ಯಶ್; ಭಾರತ್ ಮಂಟಪ್ನಲ್ಲಿ ರಾಕಿಂಗ್ ಸ್ಟಾರ್ ಹವಾ!
ಹಾಗೆ ಈ ಚಿತ್ರವನ್ನ ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿ-ನೆಗ್ (DNEG) ಮತ್ತು ನಟ ಯಶ್ ಒಡೆತನದ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ಈ ಸಿನಿಮಾ ರೂಪುಗೊಳ್ಳುತ್ತಿದೆ. ಹಾಗೂ ಇದು ಅತ್ಯಂತ ಮಹತ್ವಾಕಾಂಕ್ಷೆಯ ಪ್ರಯತ್ನವಾಗಿದೆ ಅಂತಲೂ ಹೇಳಿಕೊಂಡಿದ್ದಾರೆ.
ಆಸ್ಕರ್ ವಿನ್ನರ್ ಮ್ಯೂಸಿಕ್ ಡೈರೆಕ್ಟರ್
ಈ ರಾಮಾಯಣ ಚಿತ್ರಕ್ಕೆ ಆಸ್ಕರ್ ವಿನ್ನರ್ ಹ್ಯಾನ್ಸ್ ಝಿಮ್ಮರ್ ಮತ್ತು ಎ.ಆರ್. ರೆಹಮಾನ್ ಅವರು ಸಂಗೀತ ನೀಡಿದ್ದಾರೆ. ಇದು ಚಿತ್ರ ಬಗೆಗಿನ ನಿರೀಕ್ಷೆಯನ್ನ ಇನ್ನಷ್ಟು ಹೆಚ್ಚಿಸಿದೆ.
ಜುಲೈ-24 ರಂದು ಬರ್ತಿರೋ ಚಿತ್ರದ ಟ್ರೈಲರ್ ಕೂಡ ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸುವ ಸಾಧ್ಯತೆನೂ ಇದೆ ಅಂತ ಹೇಳಬಹುದು.














