ಅಯೋಗ್ಯ-2 ಚಿತ್ರದ (Ayogya-2 Movie) ಮತ್ತೊಂದು ಹಾಡನ್ನ ಸತೀಶ್ ನೀನಾಸಂ (Sathish Ninasam) ಹುಬ್ಬಳ್ಳಿಯಲ್ಲಿ (Hubballi) ರಿಲೀಸ್ ಮಾಡಿದ್ದಾರೆ. ಈ ಸಮಯದಲ್ಲಿಯೇ ನಟ ದರ್ಶನ್ ಬಗ್ಗೆ
ಮಾತನಾಡಿದ್ದಾರೆ. ಶಿವಣ್ಣ, ಪುನೀತ್, ಸುದೀಪ್ ಅವರ ಹಾಗೆ ದರ್ಶನ್ (Darshan) ಅವರು ನಮ್ಮ ಚಿತ್ರರಂಗದ ಆಸ್ತಿ ಆಗಿದ್ದಾರೆ. ಇವರು ಆದಷ್ಟು ಬೇಗ ಹೊರಗೆ ಬರಬೇಕು ಅಂತಲೂ ಹೇಳಿದ್ದಾರೆ. ತಮ್ಮ ಈ ಚಿತ್ರದ ಪ್ರಚಾರವನ್ನ ಹುಬ್ಬಳ್ಳಿಯಲ್ಲಿ ಮಾಡಿರೋ ಸತೀಶ್ ನೀನಾಸಂ, ಶ್ರೀಸಿದ್ಧಾರೂಢ ಮಠದಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ. ಇಲ್ಲಿಯ ಪ್ರಮುಖ ಜಾಗದಲ್ಲಿ ಮೆರವಣಿಗೆ ಕೂಡ ಮಾಡಲಾಗಿದೆ. ಹಾಸ್ಯ ನಟರಾದ ದಡಿಯಾ ಗಿರೀಶ್, ಶಿವರಾಜ್ ಕೆ.ಆರ್.ಪೇಟೆ ಹಾಗೂ ಡೈರೆಕ್ಟರ್ ಮಹೇಶ್ ಕುಮಾರ್ ಕೂಡ ಸಾಥ್ ಕೊಟ್ಟಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಅಯೋಗ್ಯ-2 ಅಬ್ಬರ
ಅಯೋಗ್ಯ-2 ಚಿತ್ರಕ್ಕೆ ದರ್ಶನ್ ಫ್ಯಾನ್ಸ್ ಸಾಥ್ ಕೊಟ್ಟಿದ್ದಾರೆ. ಚಿತ್ರದ ಪ್ರಚಾರದ ವಿಚಾರದಲ್ಲಿಯೇ ಇವರು ಸಾಥ್ ಕೊಟ್ಟಿದ್ದಾರೆ. ಇವರ ಈ ಒಂದು ಸಪೋರ್ಟ್ಗೆ ಸತೀಶ್ ನೀನಾಸಂ ಧನ್ಯವಾದ ಕೂಡ ಹೇಳಿದ್ದಾರೆ.
ಶ್ರೀ ಸಿದ್ಧಾರೂಢ ಮಠದಲ್ಲಿ ಪೂಜೆ
ದರ್ಶನ್ ಅವರು ನಮ್ಮ ಚಿತ್ರರಂಗದ ಆಸ್ತಿ ಆಗಿದ್ದಾರೆ. ಇವರು ಆದಷ್ಟು ಬೇಗ ಹೊರಗೆ ಬರಬೇಕು ಅಂತಲೂ ಹೇಳಿದ್ದಾರೆ. ಶಿವಣ್ಣ, ಸುದೀಪ್, ಅಪ್ಪು ಹೇಗೆ ನಮ್ಮ ಚಿತ್ರರಂಗಕ್ಕೆ ಆಸ್ತಿನೋ ಅದೇ ರೀತಿನೆ ದರ್ಶನ್ ಅವರು ನಮ್ಮ ಆಸ್ತಿ ಅಂತಲೂ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Karavali Premiere: ಮಂಗಳೂರಿನಲ್ಲಿ ‘ಕರಾವಳಿ’ ಪ್ರೀಮಿಯರ್ ಶೋ; ಮಿತ್ರಾ ಪಾತ್ರಕ್ಕೆ ಜನ ಫಿದಾ!
ಹುಡ್ಗಿಯರು ಡೇಂಜರಸ್
ಸತೀಶ್ ನೀನಾಸಂ, ದಡಿಯಾ ಗಿರಿ, ಶಿವರಾಜ್ ಕೆ.ಆರ್.ಪೇಟೆ ಅವರು ಚಿತ್ರದ ಹುಡುಗಿಯರು ಡೇಂಜರಸ್ ಅನ್ನುವ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ವೇದಿಕೆ ಮೇಲೆ ಸಖತ್ ಆಗಿಯೇ ಡ್ಯಾನ್ಸ್ ಮಾಡಿ ಖುಷಿಪಟ್ಟಿದ್ದಾರೆ.
ಚಿತ್ರದ ಈ ಒಂದು ಪ್ರಚಾರ ಕಾರ್ಯಕ್ರಮದಲ್ಲಿ ಸಾಕಷ್ಟು ಜನ ಆಗಮಿಸಿದ್ದರು. ದರ್ಶನ್ ಫ್ಯಾನ್ಸ್ ಕೂಡ ಈ ಚಿತ್ರವನ್ನ ಪ್ರಮೋಟ್ ಮಾಡಿದ್ದಾರೆ ನೋಡಿ.
ಶ್ರೀ ಸಿದ್ಧಾರೂಢ ಮಠದಲ್ಲಿ ಪೂಜೆ
ಶ್ರೀ ಸಿದ್ಧಾರೂಢ ಮಠದಲ್ಲಿ ಅಯೋಗ್ಯ -2 ಚಿತ್ರ ತಂಡ ವಿಶೇಷ ಪೂಜೆ ಮಾಡಿದೆ. ಚಿತ್ರದ ಡೈರೆಕ್ಟರ್ ಮಹೇಶ್ ಕುಮಾರ್, ನಾಯಕ ನಟ ಸತೀಶ್ ನೀನಾಸಂ, ಹಾಸ್ಯ ನಟರಾದ ಗಿರೀಶ್ ಹಾಗೂ ಶಿವರಾಜ್ ಕುಮಾರ್ ಕೆ.ಆರ್.ಪೇಟೆ ಈ ಪೂಜೆಯಲ್ಲಿ ಭಾಗಿ ಆಗಿದ್ದಾರೆ.
ದರ್ಶನ್ ಬಗ್ಗೆ ಸತೀಶ್ ಹೇಳಿದ್ದೇನು?
ಈ ಚಿತ್ರದ ಆಗಸ್ಟ್-7 ರಂದು ರಿಲೀಸ್ ಆಗುತ್ತಿದೆ. ರಾಜ್ಯದೆಲ್ಲೆಡೆ ಈ ಚಿತ್ರ ತೆರೆ ಕಾಣುತ್ತಿದೆ. ಅಯೋಗ್ಯ ಚಿತ್ರವನ್ನ ಜನ ಮೆಚ್ಚಿದ್ದರು. ಆದರೆ, ಅಯೋಗ್ಯ-2 ಚಿತ್ರವನ್ನ ಕೂಡ ಜನ ಸ್ವೀಕರಿಸುತ್ತಾರೆ ಅನ್ನುವ ನಂಬಿಕೆ ಚಿತ್ರ ತಂಡಕ್ಕೆ ಇದೆ.
ಇದನ್ನೂ ಓದಿ: Director Srini Movie: ಎ ಫಾರ್ ಆನಂದ್ ಟೈಟಲ್ ಇಟ್ಟಿದ್ಯಾರು? ಚಿತ್ರದ ಐಡಿಯಾ ಕೊಟ್ಟಿದ್ಯಾರು?
ಅರ್ಜುನ್ ಜನ್ಯ ಮ್ಯೂಸಿಕ್
ಅಯೋಗ್ಯ-2 ಚಿತ್ರದಲ್ಲೂ ರಚಿತಾ ರಾಮ್ ಇದ್ದಾರೆ. ಸತೀಶ್ ನೀನಾಸಂ ಅವರಿಗೆ ಜೋಡಿ ಆಗಿದ್ದಾರೆ. ಅಯೋಗ್ಯ ಒನ್ ಅಲ್ಲಿ ಏನಮ್ಮಿ ಹಾಡಿತ್ತು. ಅಯೋಗ್ಯ-2 ಚಿತ್ರದಲ್ಲಿ ಮುದ್ದು ಮುದ್ದು ಪುಟ್ಟಲಕ್ಷ್ಮಿ ಅನ್ನುವ ಹಾಡಿದೆ.
ಇದು ಜನರನ್ನ ಸೆಳೆಯುವ ಕೆಲಸ ಮಾಡಿದೆ. ಇದಲ್ಲದೆ ಚಿತ್ರದ ನಾಯಕ ಇಂಟ್ರಡಕ್ಷನ್ ಸಾಂಗ್ ಕೂಡ ರಿಲೀಸ್ ಆಗಿದೆ. ಇದರ ನಡುವೆ ಇದೀಗ ಹುಡುಗಿಯರು ಡೇಂಜರಸ್ ಅನ್ನುವ ಗೀತೆನೂ ಹೊರಗೆ ಬಂದಿದೆ ಅಂತಲೂ ಹೇಳಬಹುದು.














