ಟಾಕ್ಸಿಕ್ ಚಿತ್ರದ (Toxic Movie) ತಬಾಹಿ ಹಾಡಿನ (Tabaahi Song) ಮೋಡಿ ಬೇರೆಯೇ ಇದೆ. ರೋಮ್ಯಾಂಟಿಕ್ (Romantic Song) ಅನಿಸೋ ಈ ಹಾಡಿನಲ್ಲಿ ಆಳವಾದ ಪ್ರೀತಿನೂ ಇದೆ. ಅಷ್ಟೆ ಅತೀಯಾದ
ರೋಮ್ಯಾನ್ಸ್ ಕೂಡ ಇದೆ ಅನಿಸುತ್ತದೆ. ಮುತ್ತುಗಳ ಸುರಿಮಳೆನೂ ಆಗಿದೆ. ಎಷ್ಟೆಲ್ಲ ಪ್ರಯಣದ ಉತ್ತುಂಗ ಇದೆ ಅನ್ನೋದು ತಿಳಿದೆೇ ಇದೆ. ಆದರೆ, ಡ್ಯಾನ್ಸರ್ ಕಿಶನ್ ಬಿಳಗಲಿ ಈ ಹಾಡನ್ನು ರೀಕ್ರಿಯೇಟ್ (Recreate) ಮಾಡಿದ್ದಾರೆ. ಇದು ಅಷ್ಟೆ ಸುಂದರವಾಗಿಯೇ ಬಂದಿದೆ. ಇದರಲ್ಲಿ ಇನ್ನು ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ.
ತಬಾಹಿ ಹಾಡಿನ ಸುಂದರ ರೂಪ
ತಬಾಹಿ ಹಾಡಿನ ಸುಂದರ ರೂಪವು ಇದೆ. ಇದನ್ನ ಯಶ್ ಯೋಚನೆ ಮಾಡ್ಲಿಲ್ಲ ಅನಿಸುತ್ತದೆ. ಆದರೆ, ಡ್ಯಾನ್ಸರ್ ಕಿಶನ್ ಬಿಳಗಲಿ ಈ ಕಲ್ಪನೆಯಲ್ಲಿಯೆ ತಬಾಹಿ ಹಾಡಿಗೆ ಹೊಸ ಸ್ಪರ್ಶ ಕೊಟ್ಟಿದ್ದಾರೆ.
ಕಿಶನ್ ತಬಾಹಿ ಸಂಚಲನ
(ಚಿತ್ರ ಕೃಪೆ: ಕಿಶನ್ ಬಿಳಗಲಿ ಇನ್ಸ್ಟಾಗ್ರಾಮ್)
ಈ ಹಾಡಿನಲ್ಲಿ ಮೋಹಕತೆ ಇದೆ. ಆದರೆ, ಅದು ಅತಿ ಅನಿಸೋದಿಲ್ಲ. ಪ್ರೇಮದ ಉತ್ತುಂಗವೂ ಇದೆ. ಅದು ಇಲ್ಲಿ ಜಾಸ್ತಿ ಆಗಿದೆ ಅನಿಸೋದಿಲ್ಲ. ಅದಕ್ಕೂ ಹೆಚ್ಚಾಗಿ ಇಲ್ಲಿ ಅದ್ಭುತ ಲೋಕೇಶನ್ಗಳಿವೆ. ತಬಾಹಿ ಹಾಡಿನಲ್ಲೂ ಇಲ್ವೆ ಅನಿಸಬಹುದು. ಆದರೆ, ಇದು ಅತಿ ಹೆಚ್ಚು ಬ್ಯೂಟಿಫುಲ್ ಅನಿಸುತ್ತಿದೆ.
ಇದನ್ನೂ ಓದಿ: Nitesh Tiwari: “ರಾವಣ-ಜಟಾಯು ಯುದ್ಧ” ಹೇಗಿರುತ್ತೆ? ನಿತೇಶ್ ಬಿಚ್ಚಿಟ್ರು ಒಂದಷ್ಟು ಸೀಕ್ರೆಟ್!
ಕಿಶನ್ ಕಲ್ಪನೆಯ ತಬಾಹಿ
ಕಿಶನ್ ಕಲ್ಪನೆಯ ಈ ತಬಾಹಿ ಹಾಡು ಸಂಚಲನ ಸೃಷ್ಟಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಇದರದ್ದೆ ಸದ್ದಿದೆ. ಇದನ್ನ ನೋಡ್ತಾ ಹೋದಂತೆ ಬ್ಯೂಟಿಫುಲ್ ಫೀಲ್ ಕೂಡ ಆಗುತ್ತದೆ.
ಈ ಒಂದು ಹಾಡಿಗೆ ಸಮುದ್ರ ತೀರದ ಬಳಕೆ ಆಗಿದೆ. ಸಮುದ್ರದ ಮೇಲೆ ತೇಲುವ ಕ್ರೂಸ್ ಅಲ್ಲೂ ಈ ಹಾಡನ್ನು ಕೂಡ ಚಿತ್ರೀಕರಿಸಲಾಗಿದೆ ಅನಿಸುತ್ತದೆ. ಎಲ್ಲೂ ಇಡೀ ಹಾಡು ಅತಿ ಆಯ್ತು ಅನಿಸೋದೇ ಇಲ್ಲ.
ಲಿಫ್ಟ್ ಮಾಡಿರುವ ಸ್ಟೈಲ್
ತಬಾಹಿ ಹಾಡಿನಲ್ಲಿ ಒಂದು ಸ್ಟೈಲ್ ಇದೆ. ಇದು ಅಷ್ಟೆ ವೈರಲ್ ಆಗಿದೆ. ಕಿಯಾರಾ ಅಡ್ವಾಣಿ ಅವರನ್ನ ಎತ್ತಿಕೊಂಡು ಸಾಗುವ ಸ್ಟೈಲ್ ಇದಾಗಿದೆ. ಕಿಶನ್ ಬಿಳಗಲಿ ಕೂಡ ಇದನ್ನ ಮಾಡಿದ್ದಾರೆ.
ತಬಾಹಿ ಹಾಡಿನಲ್ಲಿರೋದು ಯಾರು
(ಚಿತ್ರ ಕೃಪೆ: ಕಿಶನ್ ಬಿಳಗಲಿ ಇನ್ಸ್ಟಾಗ್ರಾಮ್)
ಇವರ ಈ ಒಂದು ಲಿಫ್ಟಿಂಗ್ ಸ್ಟೈಲ್ ಅಲ್ಲಿ ನಾಟ್ಯದ ರೂಪ ಹೊಳೆಯುತ್ತದೆ. ಮೋಹಕತೆನೂ ಇಣುಕುತ್ತದೆ. ಆದರೆ, ಎಲ್ಲೂ ಅತಿಯಾದ ಸೆಳೆತ ಇದೆ ಅನಿಸೋದಿಲ್ಲ ನೋಡಿ.
ಇದನ್ನೂ ಓದಿ: Sunny Deol: ನಾನು ರಾಮಾಯಣ ಸಿನಿಮಾದ ಕೆಲಸ ಪೂರ್ತಿ ಶುರು ಮಾಡಿಯೇ ಇಲ್ಲ! ಸನ್ನಿ ಡಿಯೋಲ್ ಹೀಗೆ ಹೇಳಿದ್ಯಾಕೆ?
ತಬಾಹಿ ಹಾಡಿನಲ್ಲಿರೋದು ಯಾರು
ಈ ತಬಾಹಿ ಹಾಡಿನಲ್ಲಿ ನಟಿ ವಂಶಿ ಉದಯ್ ಇದ್ದಾರೆ. ಕಿಶನ್ ಕಲ್ಪನೆಗೆ ಸರಿಯಾಗಿಯೇ ಸಾಥ್ ಕೊಟ್ಟಿದ್ದಾರೆ. ಅದಕ್ಕೇನೆ ಕಿಶನ್ ಮತ್ತು ವಂಶಿ ಉದಯ್ ಅವರ ಈ ತಬಾಹಿ ಹಾಡು ನಿಜಕ್ಕೂ ಅದ್ಭುತ ಅನಿಸುತ್ತದೆ.
ಈ ತಬಾಹಿ ಹಾಡಿನಲ್ಲಿ ಕೆಂಪು ಬಣ್ಣದ ಕಾರ್ ಇದೆ. ಆದರೆ, ಇದು ಓಪನ್ ಆಗಿದೆ. ಇದನ್ನೆ ಅಷ್ಟೆ ಚೆನ್ನಾಗಿಯೇ ಬಳಕೆ ಮಾಡಿದ್ದಾರೆ. ಅದಕ್ಕೇನೆ ಇದು ಇನ್ನಷ್ಟು ಇಂಟ್ರಸ್ಟಿಂಗ್ ಆಗಿಯೇ ಇದೆ ಅನಿಸುತ್ತದೆ.
ಇದು ಅದೆಷ್ಟು ರೋಮ್ಯಾಂಟಿಕ್ ಗೊತ್ತಾ?
ಚಿತ್ರ ಕೃಪೆ: ಕಿಶನ್ ಬಿಳಗಲಿ ಇನ್ಸ್ಟಾಗ್ರಾಮ್)
ತಬಾಹಿ ಹಾಡು ವೈರಲ್ ಆಗಿರೋದೇ ತಡ, ಅನೇಕರು ರೀಲ್ಸ್ ಮಾಡ್ತಾನೇ ಇದ್ದಾರೆ. ಎಲ್ಲರೂ ಟಾಕ್ಸಿಕ್ ಚಿತ್ರದ ಹಾಡನ್ನೆ ಅನುಕರಣೆ ಮಾಡುತ್ತಿದ್ದಾರೆ. ಆದರೆ, ಕಿಶನ್ ತಮ್ಮದೇ ಟಚ್ ಕೊಟ್ಟಿದ್ದಾರೆ. ಇದನ್ನ ಅಷ್ಟ ಸುಂದರವಾಗಿಯೇ ಕಟ್ಟಿಕೊಟ್ಟಿದ್ದಾರೆ.
ಕಿಶನ್ ತಬಾಹಿ ಸಂಚಲನ
ಈ ಒಂದು ಹಾಡನ್ನ ಕಿಶನ್ ತಮ್ಮ ಹೆಸರಿನ kishenbilagali_danceacademy ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಹಂಚಿಕೊಂಡಿದ್ದಾರೆ. ಇದನ್ನ ನೋಡಿದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರತಿ ಹಾಡಿನಲ್ಲೂ ಕಿಶನ್ ಜೊತೆಗೆ ಹೊಸ ನಟಿನೇ ಇರ್ತಾರೆ. ಅದಕ್ಕೇನೆ ಅದ್ಯಾರೋ ನೀವು ಹುಟ್ಟಿದ ನಕ್ಷತ್ರವಾದರೂ ಯಾವುದು ಕಿಶನ್ ಸರ್ ಅಂತಲೂ ಕೇಳಿದ್ದಾರೆ. ಒಟ್ಟಾರೆ, ಈ ಹಾಡು ಎಲ್ಲರಿಗೂ ಇಷ್ಟವಾಗಿದೆ ಅಂತಲೇ ಹೇಳಬಹುದು.














