ಅಮಿತಾಬ್ ಬಚ್ಚನ್ (Amitabh Bachchan) ತಮ್ಮ ಇತ್ತೀಚಿನ ಬ್ಲಾಗ್ನಲ್ಲಿ ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದಾಗಿ ಬಹಿರಂಗಪಡಿಸಿದ್ದಾರೆ. ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ,
ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರದ ಸಮಯವು ಅವರ ಇದುವರೆಗಿನ ಪ್ರಯಾಣದ ಅತ್ಯಂತ ಕಠಿಣ ಹಂತವಾಗಿತ್ತು ಎಂದು ತಡರಾತ್ರಿ ಭಾವನಾತ್ಮಕ ವ್ಲಾಗ್ನಲ್ಲಿ ಬರೆದಿದ್ದಾರೆ.
ಅಮಿತಾಬ್ ಬಚ್ಚನ್ ಅವರು ಯಾವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂಬುದನ್ನು ಬಹಿರಂಗಪಡಿಸಿಲ್ಲ, ಆದರೆ ಶಸ್ತ್ರಚಿಕಿತ್ಸೆಯ ನಂತರದ ಪ್ರಕ್ರಿಯೆಯ ದೈಹಿಕ ಮತ್ತು ಭಾವನಾತ್ಮಕ ಅಂಶಗಳನ್ನು ಚರ್ಚಿಸಿದರು. ಜನ ಸ್ಟ್ರಾಂಗ್ ಆಗಿರಬೇಕು ಎಂದರು.
ಅಮಿತಾಬ್ ಬಚ್ಚನ್ ತಮ್ಮ ಬ್ಲಾಗ್ನಲ್ಲಿ ಈ ಕುರಿತು ಬರೆದು “…ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾ ಆಸ್ಪತ್ರೆಯಲ್ಲಿ ಐಸಿಯುನಲ್ಲಿ, ಸಮರ್ಥ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಆರೈಕೆಯಲ್ಲಿ… ಡಿಸ್ಚಾರ್ಜ್ ಆಗುತ್ತಾ… ಮನೆಗೆ ಮರಳುತ್ತಾ… ಮನೆಗೆ ಹಿಂದಿರುಗಿದ ನಂತರದ ಸಮಯವು ಅತ್ಯಂತ ಕಠಿಣ ಹಂತವಾಗಿದೆ… ದೈಹಿಕವಾಗಿ, ಮಾನಸಿಕವಾಗಿ ಮತ್ತು ಪ್ರಾಯೋಗಿಕವಾಗಿ…” ಎಂದು ಬರೆದಿದ್ದಾರೆ.
ಅಮಿತಾಬ್ ಬಚ್ಚನ್ ತಮ್ಮ ಶಸ್ತ್ರಚಿಕಿತ್ಸೆಗೆ ಕಾರಣವನ್ನು ಬಹಿರಂಗಪಡಿಸಲಿಲ್ಲ, ಆದರೆ ಮನೆಗೆ ಮರಳುವ ಮೊದಲು ಅವರು ಐಸಿಯುನಲ್ಲಿ ಇರಬೇಕಾಯಿತು ಎಂದು ಸುಳಿವು ನೀಡಿದರು.
ಜೀವನದಲ್ಲಿ ಕಷ್ಟಗಳನ್ನು ಅಥವಾ ಸೋಲನ್ನು ಎದುರಿಸುವ ಬಗ್ಗೆ ಅವರು ತಾತ್ವಿಕ ಚಿಂತನೆಯನ್ನು ಹಂಚಿಕೊಂಡರು. ನೀವು ಎಂಥಾ ಚಾಂಪಿಯನ್ ಆಗಿದ್ದರೂ ಜೀವನ ಒಂದು ದಿನ ನಮ್ಮನ್ನೂ ಸೋಲಿಸುತ್ತದೆ, ಆ ಕ್ಷಣ ಗಟ್ಟಿಯಾಗಿರಬೇಕು ಎಂದಿದ್ದಾರೆ.
ಕೆಲವರು ಅಂತಹ ಕ್ಷಣಗಳಿಂದ ಚೇತರಿಸಿಕೊಂಡರೆ, ಇನ್ನು ಕೆಲವರು ಹಿಂದಿನ ಯಶಸ್ಸಿನ ನೆನಪುಗಳಲ್ಲಿ ಬದುಕುತ್ತಲೇ ಇರುತ್ತಾರೆ ಎಂದು ಅಮಿತಾಬ್ ಬಚ್ಚನ್ ವಿವರಿಸಿದರು. “ಕೆಲವರು ಧೈರ್ಯ ತೋರಿಸುತ್ತಾರೆ… ಕೆಲವರು ಬಿಟ್ಟುಕೊಡುತ್ತಾರೆ… ಧೈರ್ಯ ತೋರಿಸಲು ಪ್ರಯತ್ನಿಸುವವರು ಶಾಶ್ವತವಾಗಿ ಚಾಂಪಿಯನ್ಗಳಾಗಿ ಉಳಿಯುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ: Sandalwood Actor: ಕನ್ನಡದ ಈ ಸ್ಟಾರ್ ನಟನ ಮನೆಮುಂದೆ ಕೈಕುಯ್ದುಕೊಂಡಿದ್ದ ಯುವತಿ!
ರಾಜಿ ಮಾಡಿಕೊಳ್ಳದವರು ಹಿಂದಿನ ವೈಭವದ ನೆನಪುಗಳಲ್ಲಿ ಬದುಕುತ್ತಾರೆ… ಇದು ಎಲ್ಲರ ಆಯ್ಕೆ…” ಎಂದು ಅವರು ಬರೆದಿದ್ದಾರೆ.
ಶಸ್ತ್ರಚಿಕಿತ್ಸೆಯ ಬಗ್ಗೆ ಅಮಿತಾಬ್ ಬಚ್ಚನ್ ಬಹಿರಂಗಪಡಿಸಿಲ್ಲ.
“ಆರೋಗ್ಯವಾಗಿರಿ, ಸಂತೋಷವಾಗಿರಿ…” ಎಂದು ಅಮಿತಾಬ್ ಬಚ್ಚನ್ ತಮ್ಮ ಬ್ಲಾಗ್ ಅನ್ನು ಮುಗಿಸಿದ್ದಾರೆ.
ಇದನ್ನೂ ಓದಿ: Actors Life: ಈ ಸ್ಯಾಂಡಲ್ವುಡ್ ನಟನ ಶರ್ಟ್ ಹರಿದು ಪರಚಿದ್ರು ಕಾಲೇಜ್ ಹುಡುಗಿಯರು! ಅಂಥಾ ಕ್ರೇಜ್
ಅಮಿತಾಬ್ ಬಚ್ಚನ್ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸದಿದ್ದರೂ, ಅಭಿಮಾನಿಗಳು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳಿಂದ ತುಂಬಿದ್ದಾರೆ.














