ಟಾಕ್ಸಿಕ್ಸ್ ಚಿತ್ರದ (Toxic Movi) ಮನಮೋಹಕ ಹಾಡು (Manamohaka Song) ರಿಲೀಸ್ ಆಗಿದೆ. ಇದರಲ್ಲಿ ತಾರಾ ಸುತಾರಿಯಾ (Tara Sutaria) ಹಾಗೂ ಯಶ್ (Yash) ಮೋಡಿ ಇದೆ. ಇಲ್ಲೂ ಪ್ರೀತಿ
ಮತ್ತು ಪ್ರೇಮ ಧಗ ಧಗ ಎನ್ನುತ್ತಿದೆ. ಕನ್ನಡ, ತೆಲಗು, ತಮಿಳು, ಹಿಂದಿ ಹೀಗೆ ಐದು ಭಾಷೆಯಲ್ಲಿಯೇ ಈ ಗೀತೆ ಬರ್ತಿದೆ. ಇದನ್ನ ಯಾರು ಹಾಡಿದ್ದಾರೆ. ಕನ್ನಡದಲ್ಲಿ ಯಾರು ಬರೆದಿದ್ದಾರೆ. ಈ ಗೀತೆಯಲ್ಲಿ ಇನ್ನು ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ.
ಮನಮೋಹಕ…
ಟಾಕ್ಸಿಕ್ ಚಿತ್ರದ ಮನಮೋಹಕ ಹಾಡು ಬೇರೆ ಅನಿಸುತ್ತದೆ. ಆದರೆ, ಪ್ರೀತಿ ಇಲ್ಲೂ ಧಗ ಧಗ ಎನ್ನುತ್ತದೆ. ನಟಿ ತಾರಾ ಸುತಾರಿಯಾ ಹಾಗೂ ಯಶ್ ಜೋಡಿಯ ಮೋಡಿ ಇಲ್ಲು ಪ್ರೇಮದ ಉತ್ತುಂಗದ ಕತೆ ಹೇಳುತ್ತದೆ.
ಮನಮೋಹಕ…
ಸಿದ್ದಾರ್ಥ್ ಬಸ್ರೂರು ಹಾಡಿರೋ ಈ ಹಾಡಿನಲ್ಲಿ ಪವರ್ ಇದೆ. ಪ್ರಮೋದ್ ಮರವಂತೆ ಸಾಹಿತ್ಯ ಇಲ್ಲಿ ಮೋಹಕವಾದ ಭಾವನೆಗಳನ್ನ ಕಟ್ಟಿಕೊಡುತ್ತದೆ.
ಮ್ಯೂಸಿಕ್ ಯಾರದು
ಈ ಹಾಡನ್ನ ತನಿಷ್ಕ್ ಬಾಗ್ಚಿ, ಫಹೀಮ್ ಅಬ್ದುಲ್ಲಾ ಮತ್ತು ಅರ್ಸಲಾನ್ ನಿಜಾಮಿ ಇಷ್ಟು ಜನ ಸೇರಿಯೇ ಈ ಒಂದು ಗೀತೆಯನ್ನ ಕಂಪೋಸ್ ಮಾಡಿದ್ದಾರೆ.
ಇದನ್ನೂ ಓದಿ: Toxic Manamohaka Song: ಯಶ್-ತಾರಾ ಬಾತ್ ಟಬ್ ರೊಮ್ಯಾನ್ಸ್, ಮನಮೋಹಕ ಸಾಂಗ್ ಹೇಗಿದೆ?
ಆದರೆ, ಇದು ನಿಧಾನವಾಗಿಯೇ ಇದೆ. ಕೇಳುವ ಮನಸ್ಸಿಗೆ ನಿಧಾನವಾಗಿಯೇ ಮೋಹಕವಾದ ಕತೆ ಹೇಳುತ್ತದೆ. ಇಲ್ಲೊಂದು ಸ್ಯಾಡ್ ಸ್ಟೋರಿನು ಇದ್ದಂತೆ ಇದೆ. ತಾರಾ ಸುತಾರಿಯಾ ಕಣ್ಣೀರಿನಲ್ಲಿಯೇ ಅದು ತಿಳಿಯುತ್ತದೆ ನೋಡಿ.
ಬಾತ್ ಟಬ್ ಅಲ್ಲಿ ಲವ್
ಈ ಒಂದು ಹಾಡಿನ ಆರಂಭದಲ್ಲಿ ವೈನ್ ಹಿಡಿದು ಯಶ್ ಬರ್ತಾರೆ. ನೇರವಾಗಿಯೇ ತಾರಾ ಸುತಾರಿಯಾ ಸ್ನಾನ ಮಾಡ್ತಿರೋ ಬಾತ್ ಟಬ್ಗೆ ಬರ್ತಾರೆ.
ಏನೂ ಯೋಚನೆ ಮಾಡೋದೇ ಇಲ್ಲ. ವೈನ್ ಬಾಟಲ್ ಓಪನ್ ಮಾಡ್ತಾರೆ. ಮುಂದೆ ಆಗೋದೆಲ್ಲ ರಸಗಳಿಗೇನೆ ಬಿಡಿ. ಆದರೆ, ಇಲ್ಲಿ ಮೋಹಕತೆ ಇದ್ದರೂ ಪ್ರೀತಿಯ ಸೆಳತ ಕಾಣಿಸುತ್ತದೆ. ನಾಯಕನ ಕಣ್ಣಲ್ಲಿ ಹಸಿವಿದೆ. ಆದರೆ, ತಾರಾ ಸುತಾರಿಯಾ ಕಣ್ಣುಗಳು ಪ್ರೀತಿಯನ್ನ ನಿರೀಕ್ಷೆ ಮಾಡುತ್ತವೆ ಅನಿಸುತ್ತದೆ.
ಯಶ್ ಸೂಪರ್ ಲುಕ್
ವಿಷ್ಯೂಲಿ ತುಂಬಾ ಚೆಂದ
ಈ ಹಾಡಿನಲ್ಲಿ ನಿಧಾನವಾಗಿಯೇ ಪ್ರೀತಿಯ ಕತೆಯನ್ನ ಹೇಳಲಾಗಿದೆ. ಆದರೆ, ಇದೇ ಹಾಡಿನ ಕೊನೆಯಲ್ಲಿ ನಟಿ ನಯನತಾರಾ ಬರ್ತಾರೆ.
ಇದನ್ನೂ ಓದಿ: Raj B Shetty: ಕರಾವಳಿ ಸಿನಿಮಾ ನೋಡಿ ಶಿವಮೊಗ್ಗ ಜನ ಏನಂದ್ರು? ಪ್ರೀಮಿಯರ್ ಶೋಗೆ ಪ್ರತಿಕ್ರಿಯೆ ಹೇಗಿತ್ತು?
ಯಶ್ ಬಳಿ ಬರೋ ನಯನತಾರಾ ಆತ್ಮೀಯವಾಗಿಯೇ ಯಶ್ ಕೈ ಹಿಡಿದುಕೊಳ್ಳುತ್ತಾರೆ. ಯಶ್ ಸೇದಿ ಕೊಟ್ಟ ಸಿಗರೇಟ್ ಅನ್ನ ತಾವು ಸೇದಿ ಮುಗಿಸುತ್ತಾರೆ. ಆದರೆ, ಇವರ ಕಣ್ಣಲ್ಲೂ ಅದೇನೋ ನೋವು ಕಾಣಿಸುತ್ತಿದೆ. ಹಾಗೆ ಈ ಹಾಡಿನ ವಿಷ್ಯೂವಲ್ ಕೂಡ ಅದ್ಭುತ ಅನಿಸುತ್ತದೆ.
ಯಶ್ ಸೂಪರ್ ಲುಕ್
ಈ ಹಾಡಿನಲ್ಲಿ ಯಶ್ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ. ಧರಿಸಿರೋ ಕಾಸ್ಟೂಮ್ ಕೂಡ ಇಂಟ್ರಸ್ಟಿಂಗ್ ಆಗಿಯೇ ಇವೆ. ಅದಕ್ಕೂ ಹೆಚ್ಚಾಗಿ ಯಶ್ ಇಲ್ಲಿ ಸುಂದರವಾಗಿಯೇ ಕಾಣಿಸುತ್ತಾರೆ. ಗೀತು ಮೋಹನ್ ದಾಸ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಚಿತ್ರದಲ್ಲಿ ನಟಿಮಣಿಯರ ದೊಡ್ಡ ದಂಡೇ ಇದೆ ಅಂತಲೂ ಹೇಳಬಹುದು.














