72 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು(National Film Awards) ಶನಿವಾರ (ಜುಲೈ 18, 2026) ಘೋಷಿಸಲಾಯಿತು. ಭಾರತೀಯ ವಿವಿಧ ಭಾಷೆಗಳಲ್ಲಿ ಚಲನಚಿತ್ರಗಳು, ಕಥೆ, ನಿರ್ದೇಶನ, ನಟನೆ
ಮತ್ತು ಸಿನಿಮಾದ ಬರವಣಿಗೆಯಲ್ಲಿನ ಶ್ರೇಷ್ಠತೆಯನ್ನು ಗುರುತಿಸಿ ಕಲಾವಿದರನ್ನು ಗೌರವಿಸಲಾಯಿತು. 2024ರಲ್ಲಿ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ (CBFC) ಪ್ರಮಾಣೀಕರಣವನ್ನು ಪಡೆದ ಚಲನಚಿತ್ರಗಳನ್ನು ಇಲ್ಲಿ ಗೌರವಿಸಲಾಗಿತ್ತು.
‘ಬ್ರಹ್ಮಯುಗಂ’ ಸಿನಿಮಾಗಾಗಿ ಮಮ್ಮುಟ್ಟಿ ತಮ್ಮ ನಾಲ್ಕನೇ ನ್ಯಾಷನಲ್ ಅವಾರ್ಡ್ ಪಡೆದರು. ತಮಿಳು ಚಿತ್ರ ‘ಮೇಯಾಝಗನ್’ ಧ್ವನಿ ಮಿಶ್ರಣಕ್ಕಾಗಿ ವಿಶೇಷ ಉಲ್ಲೇಖವನ್ನು ಪಡೆಯಿತು. ‘ಆರ್ಟಿಕಲ್ 370’ ಚಿತ್ರದಲ್ಲಿ ನಟಿಸಿದ ಯಾಮಿ ಗೌತಮ್ ‘ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ’ ಪ್ರಶಸ್ತಿಯನ್ನು ಪಡೆದರು.
ಮಲಯಾಳಂ ಸೂಪರ್ಸ್ಟಾರ್ ಮಮ್ಮುಟ್ಟಿ ಮತ್ತು ಕಾರ್ತಿಕ್ ಆರ್ಯನ್ ‘ಬ್ರಹ್ಮಯುಗಂ’ (ಮಲಯಾಳಂ) ಮತ್ತು ‘ಚಂದು ಚಾಂಪಿಯನ್’ (ಹಿಂದಿ) ಚಿತ್ರಗಳಲ್ಲಿನ ಪ್ರಮುಖ ಪಾತ್ರಗಳಿಗಾಗಿ ಕ್ರಮವಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಂಚಿಕೊಂಡರು.
ಪ್ರಶಸ್ತಿಗಳನ್ನು ಘೋಷಿಸಿದ ಕೇಂದ್ರ ತೀರ್ಪುಗಾರರ ಅಧ್ಯಕ್ಷ ಜಯರಾಜ್, ತೆಲುಗು ಚಿತ್ರ “ಕಲ್ಕಿ 2898 AD” ಆರೋಗ್ಯಕರ ಮನರಂಜನೆಗಾಗಿ ಅತ್ಯುತ್ತಮ ಜನಪ್ರಿಯ ಚಿತ್ರಕ್ಕಾಗಿ ಟ್ರೋಫಿಯನ್ನು ಪಡೆದುಕೊಂಡಿದೆ ಎಂದು ಹೇಳಿದರು.
ಭ್ರಮಯುಗಂ ಸಿನಿಮಾ
ಭ್ರಮಯುಗಂ ಸಿನಿಮಾ ಮಾಲಿವುಡ್ನ ಫೇಮಸ್ ಸಿನಿಮಾಗಳಲ್ಲಿ ಒಂದಾಗಿದೆ. ಇದು ಸಂಪೂರ್ಣವಾಗಿ ಬ್ಲ್ಯಾಕ್ & ವೈಟ್ ಸಿನಿಮಾ ಆಗಿದೆ.
ಮಲಯಾಳಂನ ಮೆಗಾ ಸ್ಟಾರ್ ಮಮ್ಮುಟ್ಟಿಯ ಸಿನಿಮಾ ಆಯ್ಕೆ, ಅವರು ಕಥೆಗೆ ಕೊಡುವ ಪ್ರಿಫರೆನ್ಸ್ ಎಂತದ್ದು ಎಂಬುದಕ್ಕೆ ಈ ಸಿನಿಮಾ ಸಾಕ್ಷಿ. ಇದು ರೆಗ್ಯುಲರ್ ಫಾರ್ಮೆಟ್ ಸಿನಿಮಾನೇ ಅಲ್ಲ. ಇಲ್ಲಿ ಹಾಡಿಲ್ಲ, ಫೈಟ್ ಇಲ್ಲ. ಯಾವುದೇ ಮಸಾಲ ಅಂಶಗಳಿಲ್ಲ. ಆದರೂ 2 ಗಂಟೆ 19 ನಿಮಿಷಗಳು ನಿಮ್ಮನ್ನ ಸೀಟಿನ ತುದಿಯಲ್ಲಿ ಕೂರಿಸಿ ನೋಡಿಸಿಕೊಂಡು ಹೋಗುತ್ತೆ.
ಕಥೆಯ ಬಗ್ಗೆ ಹೇಳೋದಾದ್ರೆ ತೇವನ್ ಎಂಬಾತ ಹಸಿರು ದಟ್ಟ ಕಾಡಿನಲ್ಲಿ ದಿಕ್ಕುತಪ್ಪಿದ್ದಾನೆ. ಕೊನೆಗೊಂದು ಮಹಲಿನ ಒಳಗೆ ಆಚಾನಕ್ಕಾಗಿ ಎಂಟ್ರಿಕೊಡುತ್ತಾನೆ. ಅಲ್ಲಿನ ಯಜಮಾನ ತೇವನ್ ಹಿನ್ನೆಲೆಯನ್ನ ವಿಚಾರಿಸಿ, ಈತನಿಗೆ ಕುಡಿಯಲು ಗಂಜಿ, ಇರಲು ಜಾಗ ಕೊಡುತ್ತಾನೆ.
ಇದನ್ನೂ ಓದಿ: Ramayana: ಅಂತೂ ಇಂತೂ ಹಿಂದಿ ಕಲಿತ ರಾಕಿಭಾಯ್, ಸಿನಿಮಾ ಹೊಸ ಭಾಷೆ ಕಲಿಸಿತು ಎಂದ ಯಶ್
ಹೊಟ್ಟೆ ತುಂಬಿದ ತೇವನ್ ದೇವರಿಗೆ ಧನ್ಯವಾದ ಹೇಳಿದಾಗ, ಗಂಜಿ ಕೊಟ್ಟಿದ್ದು ನಾನು, ದೇವರಿಗೆ ಹೇಗೆ ಧನ್ಯವಾದ ಹೇಳಿದೆ ಅಂತ ಯಜಮಾನ ಸಿಟ್ಟಾಗುತ್ತಾನೆ. ಕಲಿಯುಗದಲ್ಲಿ ಮಾತ್ರ ದೇವರು ದಿಂಡಿರು. ಇದು ಭ್ರಮಾಯುಗ ಇಲ್ಲಿ ದೇವರಿಲ್ಲ ಎನ್ನುತ್ತಾನೆ ಯಜಮಾನ.
ಇದನ್ನೂ ಓದಿ: Ramayana: ಅಂತೂ ಇಂತೂ ಹಿಂದಿ ಕಲಿತ ರಾಕಿಭಾಯ್, ಸಿನಿಮಾ ಹೊಸ ಭಾಷೆ ಕಲಿಸಿತು ಎಂದ ಯಶ್
ಈ ಸಿನಿಮಾ ಸೋನಿ ಲೈವ್ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇದನ್ನು ನೀವು ಮನೆಯಲ್ಲೇ ಕುಳಿತು ನೋಡಬಹುದು. ಕ್ಷಣ ಕ್ಷಣಕ್ಕೂ ಬೆಚ್ಚಿ ಬೀಳಿಸೋ ಮೂವಿಯನ್ನು ಮನೆಯಲ್ಲೇ ಕುಳಿತು ನೋಡಬಹುದು.














