ಬಾಲಿವುಡ್ನ ಆರ್ಟಿಕಲ್ 370 ಚಿತ್ರಕ್ಕೆ (Article 370 Movie) ಒಂದಲ್ಲ ಎರಡಲ್ಲ, ಮೂರು ಮೂರು ಪ್ರಶಸ್ತಿಗಳು (Three Awards) ಬಂದಿವೆ. ಅತ್ಯುತ್ತಮ ನಟಿ ಪ್ರಶಸ್ತಿಯನ್ನ ನಟಿ ಯಾಮಿ ಗೌತಮ್
(Yami Gautam) ಅವರಿಗೆ ಘೋಷಣೆ ಆಗಿದೆ. ಅತ್ಯುತ್ತಮ ಚಿತ್ರದ ವಿಚಾರದಲ್ಲೂ ಇದಕ್ಕೆ ಪ್ರಶಸ್ತಿ ಬಂದಿದೆ. ಅತ್ಯುತ್ತಮ ಸಂಗೀತ ನಿರ್ದೇಶಕ (Music Director) ಚಿತ್ರ ಪ್ರಶಸ್ತಿನೂ ಇದೇ ಚಿತ್ರಕ್ಕೇನೆ ಬಂದಿದೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಅತ್ಯುತ್ತಮ ನಟಿ ಯಾಮಿ ಗೌತಮ್
ಆರ್ಟಿಕಲ್ 370 ಚಿತ್ರಕ್ಕೆ ಮೂರು ಮೂರು ಪ್ರಶಸ್ತಿಗಳು ಘೋಷನೆ ಆಗಿವೆ. 2024 ಫೆಬ್ರವರಿ-23 ರಂದು ರಿಲೀಸ್ ಆದ ಈ ಚಿತ್ರ ಸೂಪರ್ ಹಿಟ್ ಆಗಿತ್ತು.
ಈ ಚಿತ್ರದ ಡೈರೆಕ್ಟರ್ ಯಾರು
(ಚಿತ್ರ ಕೃಪೆ: ಆದಿತ್ಯ ರಾಜ್ ಕೌಲ್ ಟ್ವಿಟರ್ ಪೇಜ್)
ಇದರಲ್ಲಿ ಯಾಮಿ ಗೌತಮ್ NIA ಅಧಿಕಾರಿ ಝೂನಿ ಹಕ್ಸರ್ ಹೆಸರಿನ ಪಾತ್ರ ಮಾಡಿದ್ರು. ಇದು ಪಾಲಿಟಿಕಲ್ ಆ್ಯಕ್ಷನ್ ಥ್ರಿಲ್ಲರ್ ಚಿತ್ರವೇ ಆಗಿತ್ತು. ಇದನ್ನ ಜನ ಮೆಚ್ಚಿದರು. ಈ ಪಾತ್ರದ ಅಭಿನಯಕ್ಕೇನೆ ಯಾಮಿ ಗೌತಮ್ ಅವರಿಗೆ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿ ಘೋಷಣೆ ಆಗಿದೆ.
ಇದನ್ನೂ ಓದಿ: 72nd National Film Awards: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ! ಅತ್ಯುತ್ತಮ ಕನ್ನಡ ಸಿನಿಮಾ ಯಾವುದು ಗೊತ್ತಾ?
ಈ ಚಿತ್ರದಲ್ಲಿ ನಟಿ ಪ್ರಿಯಾಮಣಿ ಕೂಡ ನಟಿಸಿದ್ದರು. ಇವರು ಪಿಎಂಒ ಜಂಟಿ ಕಾರ್ಯದರ್ಶಿ ರಾಜೇಶ್ವರಿ ಸ್ವಾಮಿನಾಥನ್ ಪಾತ್ರವನ್ನೆ ಮಾಡಿದ್ರು.
ಈ ಚಿತ್ರದ ಡೈರೆಕ್ಟರ್ ಯಾರು
ಈ ಚಿತ್ರವನ್ನ ಆದಿತ್ಯ ಸುಹಾಸ್ ಜಂಭಲೆ ಡೈರೆಕ್ಷನ್ ಮಾಡಿದ್ದಾರೆ. ಈ ಚಿತ್ರಕ್ಕೆ ಯಾಮಿ ಗೌತಮ್ ಪತಿ ನಿರ್ಮಾಪಕ ಆದಿತ್ಯ ಧರ್ ಚಿತ್ರಕತೆ ಬರೆದಿದ್ದಾರೆ.
ಚಿತ್ರ ನಿರ್ಮಾಣಪಕರಲ್ಲಿ ಆದಿತ್ಯ ಧರ್ ಕೂಡ ಇದ್ದಾರೆ. ಇವರ ಈ ಚಿತ್ರದ ನಿರೂಪಣೆಯನ್ನ ನಟ ಅಜಯ್ ದೇವಗನ್ ಮಾಡಿದ್ದಾರೆ. ಇವರೆಲ್ಲ ಈ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಕೂಡ ಘೋಷಣೆ ಆಗಿದೆ.
ಅತ್ಯುತ್ತಮ ನಟಿ ಯಾಮಿ ಗೌತಮ್
(ಚಿತ್ರ ಕೃಪೆ: ಯಾಮಿ ಗೌತಮ್ ಇನ್ಸ್ಟಾಗ್ರಾಮ್)
ಅತ್ಯುತ್ತಮ ಸಂಗೀತ ನಿರ್ದೇಶಕ
ಈ ಚಿತ್ರದ ಸಂಗೀತಕ್ಕೂ ಗೌರವ ಸಿಕ್ಕಿದೆ. ಹಾಗೆ ಈ ಚಿತ್ರಕ್ಕೆ ಶಾಶ್ವತ್ ಸಚ್ದೇವ್ ಸಂಗೀತ ಕೊಟ್ಟಿದ್ದಾರೆ. ಇವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ರಾಷ್ಟ್ರೀಯ ಪ್ರಶಸ್ತಿ ಬಂದಿದೆ.
ಹೀಗೆ ಈ ಚಿತ್ರಕ್ಕೆ ಒಟ್ಟು ಮೂರು ಪ್ರಶಸ್ತಿ ಬಂದಿವೆ. ಇದನ್ನ ಇಡೀ ಚಿತ್ರ ತಂಡ ಸೆಲೆಬ್ರೇಟ್ ಮಾಡಿದ್ದಾರೆ. ಅನೇಕರು ಚಿತ್ರ ತಂಡಕ್ಕೆ ವಿಶ್ ಮಾಡಿದ್ದಾರೆ.
ಇದನ್ನೂ ಓದಿ: Prajwal Devaraj: ಕೊರಗಜ್ಜ ಸನ್ನಿಧಾನದಲ್ಲಿ ಪ್ರಜ್ವಲ್ ದೇವರಾಜ್; ನವಿಲು ನರ್ತನ ಕಂಡು ಬೆರಗಾದ ಕರಾವಳಿ ಹೀರೋ!
ಆದಿತ್ಯ ರಾಜ್ ಕೌಲ್ ವಿಶ್
ಆದಿತ್ಯ ರಾಜ್ ಕೌಲ್ ಅವರು ತಮ್ಮ ಟ್ವಿಟರ್ ಮೂಲಕ ಈ ಚಿತ್ರ ತಂಡಕ್ಕೆ ವಿಶ್ ಮಾಡಿದ್ದಾರೆ. ನಿರ್ಮಾಪಕ ಆದಿತ್ಯ ಧರ್ ಅವರ ಆತ್ಮೀಯರು ಆಗಿರೋ ಇವರು NDTV ಹಿರಿಯ ಕಾರ್ಯನಿರ್ವಾಹಕ ಸಂಪಾದಕ-ನಿರೂಪಕ ಆಗಿದ್ದಾರೆ.
ಈ ಚಿತ್ರಕ್ಕೆ ಮೂರು ಪ್ರಶಸ್ತಿ ಬಂದಿರೋದಕ್ಕೆ ಆದಿತ್ಯ ರಾಜ್ ಕೌಲ್ ವಿಶ್ ಮಾಡಿದ್ದಾರೆ. ನನ್ನ ಸ್ನೇಹಿತರಾದ ಯಾಮಿ ಗೌತಮ್, ಆದಿತ್ಯ ಧರ್ ಅವರಿಗೆ Congratulations ಅಂತಲೂ ಹೇಳಿದ್ದಾರೆ ಅಂತಲೇ ಹೇಳಬಹುದು.














