ರಾಕಿಂಗ್ ಸ್ಟಾರ್ ಯಶ್ (Yash) ಕ್ರೇಜ್ ಎಲ್ಲೆಡೆ ಇದೆ. ಅಮೆರಿಕಾದಲ್ಲೂ ರಾಕಿ ಭಾಯ್ (Rocky Bhai) ಅಂತ ಕೂಗಿದವರೇ ಹೆಚ್ಚು ನೋಡಿ. ಭಾರತದಲ್ಲಿ ಓಕೆ ಬಿಡಿ. ಆದರೆ, ಅಲ್ಲೂ ಈ ರೀತಿಯ ಕ್ರೇಜ್ ಇರೋಕೆ
ಸಾಧ್ಯವೇ ಈ ಪ್ರಶ್ನೆಗೆ ಕಾಮಿಕ್ ಕಾನ್-2026 ರಲ್ಲಿಯೇ ಉತ್ತರ ಸಿಕ್ಕಿದೆ. ರಾಮಾಯಣ ಚಿತ್ರದ (Ramayana Movie) ಪ್ರಮೋಷನ್ಗೆ ರಾಕಿಂಗ್ ಸ್ಟಾರ್ ಯಶ್ ಇಲ್ಲಿಗೆ ಆಗಮಿಸಿದ್ರು. ಚಿತ್ರದ ಪ್ರಥಮ ಟ್ರೈಲರ್ ಕೂಡ ಇಲ್ಲಿ ಪ್ರದರ್ಶನ ಆಯಿತು. ಆ ಬಳಿಕ ಸಿನಿಮಾ ರಾಮನ ಪಾತ್ರಧಾರಿ ರಣಬೀರ್ ಕಪೂರ್ (Ranbir Kapoor) ಬಂದ್ರು. ಜೊತೆಗೆ ರಾಕಿಂಗ್ ಸ್ಟಾರ್ ಯಶ್ ಕೂಡ ಇದ್ದರು. ಆಗಲೇ ಇಲ್ಲಿ ಅಭಿಮಾನಿಗಳು ಮೊದಲು ಡ್ಯಾಡಿಸ್ ಹೋಮ್ ಅಂತಲೇ ಕೂಗಿದರು. ಮುಂದೆ ಏನಾಯಿತು ಅನ್ನೋದು ಇಲ್ಲಿದೆ ಓದಿ.
ಸೆಲ್ಫಿಗೆ ಮುಗಿ ಬಿದ್ದ ಜನ
ಯಶ್ ಸುಮ್ನೆ ಅಲ್ಲ ಬಿಡಿ. ಕಾಮಿಕ್ ಕಾನ್ ಅಲ್ಲಿ ತುಂಬಾನೆ ಗೌರವ ಸಿಕ್ಕಿದೆ. ಯಶ್ ಸ್ಟೇಜ್ ಮೇಲೆ ಬಂದಾಗ ರಾಮಾಯಣದ ರಣಬೀರ್, ಡೈರೆಕ್ಟರ್ ನಿತೇಶ್ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ಎಲ್ಲರೂ ಎದ್ದು ನಿಂತು ಗೌರವಿಸಿದ್ದಾರೆ. ಆ್ಯಂಕರ್ ಕೂಡ ಇಲ್ಲಿ ಯಶ್ ಅವರ ಕೆಜಿಎಫ್ ಗೆಲುವಿನ ಕತೆ ಹೇಳಿದ್ದಾರೆ.
ಸೆಲ್ಫಿಗೆ ಮುಗಿ ಬಿದ್ದ ಜನ
ಇದನ್ನ ಹೇಳಿದ್ಮೇಲೇನೆ ಯಶ್ ಅವರನ್ನ ವೇದಿಕೆಗೆ ಸ್ವಾಗತಿಸಿದ್ದಾರೆ. ಆ ರೀತಿನೇ ಯಶ್ ಅವರನ್ನ ಕಾಮಿಕ್ ಕಾನ್ ಅಲ್ಲಿ ಗೌರವಿಸಲಾಗಿದೆ. ಯಶ್ ಕೂಡ ಅಷ್ಟೆ ಗೌರವದೊಂದಿಗೆ ಇಲ್ಲಿ ಸಿನಿಮಾ ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ರಾಮನ ಪಾತ್ರಧಾರಿ ರಣಬೀರ್ ಕಪೂರ್ ಅವರನ್ನ ಕೊಂಡಾಡಿದ್ದಾರೆ.
ರಾವಣನ ಪಾತ್ರಕ್ಕೆ ತಯಾರಿ
ಯಶ್ ಇಲ್ಲಿ ರಾವಣನ ಪಾತ್ರದ ಕುರಿತು ಹೇಳಿಕೊಂಡಿದ್ದಾರೆ. ರಾವಣನ ಪಾತ್ರವನ್ನ ಅರ್ಥ ಮಾಡಿಕೊಂಡಿದ್ದೇನೆ. ಯಾವ ಸಂದರ್ಭದಲ್ಲಿ ಹೇಗೆ ರಾವಣ ಇರ್ತಾ ಇದ್ದ ಅನ್ನೋದನ್ನು ತಿಳಿದುಕೊಂಡಿದ್ದೇನೆ ಅಂತಲೂ ಹೇಳಿದ್ದಾರೆ.
ಇದನ್ನೂ ಓದಿ: Yash: ಅಮೆರಿಕಾ ಕಾಮಿಕ್-ಕಾನ್ನಲ್ಲಿ ಯಶ್! ರಾವಣ ರಹಸ್ಯ ಬಿಚ್ಚಿಟ್ಟ ರಾಕಿ ಭಾಯ್
ರಾವಣನ ತರ ನಾವು ನಿಜ ಜೀವನದಲ್ಲಿಇರೋಕೆ ಆಗೋದಿಲ್ಲ. ಆದರೆ, ಇಲ್ಲಿ ಆ ಪಾತ್ರವನ್ನ ಜೀವಿಸಲು ಪ್ರಯತ್ನಿಸಿದ್ದೇನೆ. ಒಬ್ಬ ಕಲಾವಿದನಾಗಿ ಫಿಜಿಕಲ್ ತಯಾರಿ ಏನ್ಬೇಕು ಅದನ್ನು ಮಾಡಿಕೊಂಡಿದ್ದೇನೆ ಅಂತಲೂ ಹೇಳಿದ್ದಾರೆ.
ಸೆಲ್ಫಿಗೆ ಮುಗಿ ಬಿದ್ದ ಜನ
ಯಶ್ ಬಂದಾಗ ಹಲವು ಫ್ಯಾನ್ಸ್ ಡ್ಯಾಡಿಸ್ ಹೋಮ್ ಅಂತಲೂ ಕೂಗಿದ್ದಾರೆ. ಇದನ್ನ ಕೇಳಿದ ಯಶ್ ಸಂತೋಷಪಟ್ಟಿರೋದು ಇದೆ. ಅಭಿಮಾನಿಗಳತ್ತ ಕೈಬೀಸಿರೋದು ಇದೆ.
ರಾಕಿ ಭಾಯ್ ಏನ್ ಮಾಡಿದ್ರು ಗೊತ್ತಾ?
ಇದಾದ್ಮೇಲೆ ಯಶ್ ಕಾರ್ಯಕ್ರಮದ ಕೊನೆಗೆ ಹೊರಟು ನಿಂತರು. ಆಗಲೇ ಫ್ಯಾನ್ಸ್ ಮುಗಿ ಬಿದ್ದರು. ಸೆಲ್ಫಿ ಬೇಕು ಅಂತ ನಿಂತರು. ಹಾಗಂತ ಯಶ್ ಯಾರಿಗೂ ಬೇಸರ ಮಾಡಲಿಲ್ಲ. ಎಲ್ಲರ ಜೊತೆಗೂ ಸೆಲ್ಫಿ ತೆಗೆಸಿಕೊಂಡರು. ಈ ಒಂದು ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ ಅಂತ ಹೇಳಬಹುದು.
ಇದನ್ನೂ ಓದಿ: Rocking Star Yash: ಕಾಮಿಕ್ ಕಾನ್ನಲ್ಲಿ ಯಶ್ ಹವಾ, ‘ಡ್ಯಾಡಿಸ್ ಹೋಮ್’ ಎಂದ ಫ್ಯಾನ್ಸ್!
ಟಾಕ್ಸಿಕ್ ರಿಲೀಸ್ ಡೇಟ್
ಟಾಕ್ಸಿಕ್ ಚಿತ್ರ ರಾಮಾಯಣ ಮುಂಚೇನೆ ಬರ್ತಿದೆ. ಆಗಸ್ಟ್-24 ರಂದು ಈ ಚಿತ್ರ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಕನ್ನಡ ಮತ್ತು ಇಂಗ್ಲಿಷ್ ಅಲ್ಲಿ ಇದು ತಯಾರಾಗಿದೆ.
ಆದರೆ, ಇತರ ಭಾಷೆಗೆ ಇದು ಡಬ್ ಆಗಿದೆ. ಆಯಾ ಭಾಷೆಯಲ್ಲಿಯೇ ಇದು ತೆರೆ ಕಾಣುತ್ತಿದೆ. ಗೀತು ಮೋಹನ್ದಾಸ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ.
ಯಶ್ ಮತ್ತು ಗೀತು ಒಟ್ಟಿಗೆ ಸೇರಿಯೇ ಈ ಚಿತ್ರಕ್ಕೆ ಕತೆ ಬರೆದಿದ್ದಾರೆ. ರವಿ ಬಸ್ರೂರು ಮ್ಯೂಸಿಕ್ ಮಾಡಿದ್ದಾರೆ. ಈ ಚಿತ್ರದ ನಿರೀಕ್ಷೆ ದೊಡ್ಡಮಟ್ಟದಲ್ಲಿಯೇ ಇದೆ ಅಂತಲೇ ಹೇಳಬಹುದು.














