ಬೆಂಗಳೂರು (ಜು.21): ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಧರ್ಮಪತ್ನಿ ಚೆನ್ನಮ್ಮನವರ ಅಂತ್ಯಸಂಸ್ಕಾರ ಹಾಸನ ಜಿಲ್ಲೆಯ ಹೊಳೆನರಸೀಪುರದ ಮಾವಿನಕೆರೆಯಲ್ಲಿ ನೆರವೇರಿತು. ಚೆನ್ನಮ್ಮ (Chennamma)
ಅವರ ನಿಧನದಿಂದ ದೊಡ್ಡಗೌಡ ಮನೆ ಶೋಕಸಾಗರದಲ್ಲಿ ಮುಳುಗಿದೆ. ಮನೆಗೆ ಶಕ್ತಿಯಾಗಿದ್ದ ಚೆನ್ನಮ್ಮ ಅವರನ್ನ ಕಳೆದುಕೊಂಡು 6 ಮಕ್ಕಳು ಕಣ್ಣೀರು ಹಾಕಿದ್ದಾರೆ. ಇನ್ನು ಕೇಂದ್ರ ಸಚಿವ ಕುಮಾರಸ್ವಾಮಿ (Kumaraswmay) ಅವರು ತಾಯಿ ಅಂತ್ಯಕ್ರಿಯೆ ವೇಳೆ ಭಾವುಕರಾಗಿ ದಿಟ್ಟ ಸಂಕಲ್ಪವೊಂದನ್ನ ಕೂಡ ಮಾಡಿದ್ದಾರೆ.
ತಾಯಿ ನೆನೆದು ಕುಮಾರಸ್ವಾಮಿ ಭಾವುಕ
72 ವರ್ಷ ಜೊತೆ ಜೊತೆಯಾಗಿ ಬದುಕಿದ್ದ ಪತ್ನಿ ಚೆನ್ನಮ್ಮ ಅವರನ್ನು ಕಳೆದುಕೊಂಡ ದೇವೇಗೌಡ್ರು ಕಣ್ಣೀರು ಹಾಕಿದ್ದಾರೆ. ಪತ್ನಿಯ ಪಾರ್ಥಿವ ಶರೀರದ ಪಕ್ಕದಲ್ಲೇ ಕೂತು, ದೇವೇಗೌಡರು ಕಣ್ಣೀರು ಹಾಕುತ್ತಿದ್ದ ದೃಶ್ಯ ಜನರ ಮನಕಲುಕುವಂತಿತ್ತು. ಅಂತಿಮ ಸಂಸ್ಕಾರದ ಎಲ್ಲಾ ವಿಧಿವಿಧಾನ ಮುಗಿದ ನಂತರ ಕುಮಾರಸ್ವಾಮಿ ಮಾತಾಡುತ್ತಾ ತಾಯಿ ನೆನೆದು ಭಾವುಕರಾದ್ರು.
ಅಮ್ಮನ ಅಂತ್ಯಕ್ರಿಯೆ ವೇಳೆ ಕುಮಾರಸ್ವಾಮಿ ಸಂಕಲ್ಪ
ಯಾವುದೋ ಒಂದು ಕಾರಣಕ್ಕೆ ನಾನು ಅಮ್ಮನ ಮನಸ್ಸನ್ನು ನೋಯಿಸಿಬಿಟ್ಟೆ. ಇನ್ಮುಂದೆ ಯಾವುದೇ ತಪ್ಪು ಆಗೋದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕಣ್ಣೀರು ಹಾಕುತ್ತಾ ಸಂಕಲ್ಪ ಮಾಡಿದ್ದಾರೆ. ಅಂದು ಅಮ್ಮ ನಿಮ್ಮ ತಂದೆಗೆ ನೋವು ಕೊಡಬೇಡ ಅಂದ್ರಿದ್ರು. ನನ್ನಿಂದ ತಪ್ಪಾಗಿದ್ರೆ ಕ್ಷಮಿಸು ತಾಯಿ ಅಂತ ಕೇಳಿಕೊಳ್ತೀನಿ. ನಾನು ಮಣ್ಣಿಗೆ ಹೋಗೋವರೆಗೂ ನನ್ನ ತಾಯಿಗೆ ಸಣ್ಣ ಚ್ಯುತಿ ಇರಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಡಿಕೆ ಶಿವಕುಮಾರ್ಗೆ ಧನ್ಯವಾದ ಹೇಳಿದ HDK
ಜೊತೆಗೆ, ತಾಯಿಯ ನಿಧನದ ಸಮಯದಿಂದ, ಅಂತಿಮ ಸಂಸ್ಕಾರದವರೆಗೆ, ಸರ್ಕಾರ ಕೊಟ್ಟ ಸಹಕಾರಕ್ಕೆ, ವಿಶೇಷವಾಗಿ ಮುಖ್ಯಮಂತ್ರಿಗಳಿಗೆ ಕುಮಾರಸ್ವಾಮಿ ಧನ್ಯವಾದ ಸಲ್ಲಿಸಿದ್ದಾರೆ.
‘ನನ್ನ ತಾಯಿಯಂತೆ ಅದೇ ಮಾರ್ಗದಲ್ಲಿ ನಡೆಯುವೆ’
ಹಿಂದಿನ ದಿನಗಳಲ್ಲಿ ಕೆಲವು ವಿಚಾರದಲ್ಲಿ ನನ್ನ ತಾಯಿಗೆ ನೋವು ಕೊಟ್ಟಿರಬಹುದು. ನನಗೆ ಭಗವಂತ ಕೊಟ್ಟ ವಯಸ್ಸು ಇರುವವರೆಗೂ, ಪ್ರತೀದಿನ ಪ್ರತೀ ಕ್ಷಣ, ನನ್ನ ತಾಯಿ ಯಾವ ರೀತಿ ಬದುಕ್ಕಿದ್ದರೋ, ಅದೇ ಮಾರ್ಗದಲ್ಲಿ ನಡೆಯುವ ಸಂಕಲ್ಪವನ್ನು ನಾನು ಮಾಡಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಚಿರನಿದ್ರೆಗೆ ಜಾರಿದ ಅಮ್ಮನಿಗೆ ಭಾವಪೂರ್ಣ ಬೀಳ್ಕೊಟ್ಟ
ತಾಯಿಯ ನಿಧನದ ನಂತರ ಟ್ವೀಟ್ ಮಾಡಿದ್ದ ಕುಮಾರಸ್ವಾಮಿ, ಮಾವಿನಕೆರೆ ಶ್ರೀ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಚಿರನಿದ್ರೆಗೆ ಜಾರಿದ ಅಮ್ಮನನ್ನು ಭಾವಪೂರ್ಣವಾಗಿ ಬೀಳ್ಕೊಟ್ಟ ಭಾರದ ಕ್ಷಣಗಳು ಎಂದು ಬರೆದಿದ್ದಾರೆ.
ಮಾವಿನಕೆರೆ ಶ್ರೀ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಚಿರನಿದ್ರೆಗೆ ಜಾರಿದ ಅಮ್ಮನನ್ನು ಭಾವಪೂರ್ಣವಾಗಿ ಬೀಳ್ಕೊಟ್ಟ ಭಾರದ ಕ್ಷಣಗಳು.
ನನ್ನ ಪಾಲಿಗೆ ಅಮ್ಮ ಎಂದೆಂದಿಗೂ ಅನಂತವೇ. ಭೌತಿಕವಾಗಿ ಅವರು ಇಲ್ಲವಷ್ಟೇ, ಆದರೆ ಅವರು ಕೊಟ್ಟು ಹೋದ ಸಂಸ್ಕಾರ, ಕಲಿಸಿಕೊಟ್ಟ ಮಾನವೀಯ ಮೌಲ್ಯಗಳು, ಅಂತಃಕರ್ಣಪೂರ್ವಕ ಬದುಕು.. ಎಲ್ಲವೂ ನನ್ನ ತಾಯಿ ನೀಡಿದ… pic.twitter.com/0jigTv1wAn
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) July 20, 2026
ನನ್ನ ಪಾಲಿಗೆ ಅಮ್ಮ ಎಂದೆಂದಿಗೂ ಅನಂತವೇ. ಭೌತಿಕವಾಗಿ ಅವರು ಇಲ್ಲವಷ್ಟೇ, ಆದರೆ ಅವರು ಕೊಟ್ಟು ಹೋದ ಸಂಸ್ಕಾರ, ಕಲಿಸಿಕೊಟ್ಟ ಮಾನವೀಯ ಮೌಲ್ಯಗಳು, ಅಂತಃಕರ್ಣಪೂರ್ವಕ ಬದುಕು.. ಎಲ್ಲವೂ ನನ್ನ ತಾಯಿ ನೀಡಿದ ಆಸ್ತಿ ಎಂದೇ ನಂಬಿದ್ದೇನೆ. ಇಡೀ ಜೀವನದುದ್ದಕ್ಕೂ ನಾನು ನಂಬಿರುವ ಮೌಲ್ಯಗಳು, ನನ್ನಲ್ಲಿರುವ ಮಾತೃಹೃದಯ ಅಮ್ಮನಿಂದ ದೊರೆತ ಬಳುವಳಿ ಎಂದು ಟ್ವೀಟ್ನಲ್ಲಿ ಕುಮಾರಸ್ವಾಮಿ ಬರೆದಿದ್ದಾರೆ.














