ಬೆಂಗಳೂರು (ಜು.21): ಬೆಳಗ್ಗೆ ಕೆಲಸಕ್ಕೆ ಹೋಗಲು ಮೆಟ್ರೋ ನಿಲ್ದಾಣದಕ್ಕೆ ಹೋದ ಜನರು ಪರದಾಡುವಂತಾಗಿದ್ದು, ಪಿಂಕ್ ಅವರ್ನಲ್ಲೇ ಮತ್ತೆ ಮೆಟ್ರೋ (Metro) ಕೈ ಕೊಟ್ಟಿದೆ. ಹಸಿರು ಮಾರ್ಗದ
(Green Line) ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಬೆಳಗ್ಗೆ 8 ಗಂಟೆಯಿಂದ ವಿದ್ಯುತ್ ವ್ಯತ್ಯಯದ (Power Outage) ಪರಿಣಾಮ ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದೆ.
ಮೆಟ್ರೋ ಸಂಚಾರ ತಾತ್ಕಾಲಿಕ ಸ್ಥಗಿತ
ವಿದ್ಯುತ್ ವ್ಯತ್ಯಯ ಉಂಟಾದ ಹಿನ್ನೆಲೆ ಗ್ರೀನ್ಲೈನ್ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಬಿಎಂಆರ್ಸಿಎಲ್ ಮಾಹಿತಿ ನೀಡಿದೆ. ಯಶವಂತಪುರದಿಂದ ನಾಗಸಂದ್ರ ನಡುವೆ ಮೆಟ್ರೋ ಸಂಚಾರ ತಾತ್ಕಾಲಿಕ ಸ್ಥಗಿತಗೊಂಡಿದೆ. ಸಿಲ್ಕ್ ಬೋರ್ಡ್ ನಿಂದ ಯಶವಂತಪುರ ನಡುವೆ ಮಾತ್ರ ಶಾರ್ಟ್-ಲೂಪ್ ಸೇವೆ ಮುಂದುವರಿದೆ.
ತಾಂತ್ರಿಕ ತಂಡಗಳ ತುರ್ತು ಕಾರ್ಯಾಚರಣೆ
ಯಶವಂತಪುರ–ನಾಗಸಂದ್ರ ನಡುವೆ ಮೆಟ್ರೋ ಸಂಚಾರ ತಾತ್ಕಾಲಿಕ ಸ್ಥಗಿತಗೊಂಡಿದ್ದು, ಸೇವೆ ಪುನಃ ಆರಂಭಿಸಲು ತಾಂತ್ರಿಕ ತಂಡಗಳ ತುರ್ತು ಕಾರ್ಯಾಚರಣೆ ನಡೆದಿದ್ದು, ಪ್ರಯಾಣಿಕರ ಅನಾನುಕೂಲತೆಗೆ ಬಿಎಂಆರ್ಸಿಎಲ್ ವಿಷಾದ ವ್ಯಕ್ತಪಡಿಸಿದೆ.
ಬಿಎಂಆರ್ಸಿಎಲ್ ಸ್ಪಷ್ಟನೆ
ಸೇವೆ ಪುನರಾರಂಭವಾದ ಕೂಡಲೇ ಮಾಹಿತಿ ನೀಡುವುದಾಗಿ ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.














