ಟಾಕ್ಸಿಕ್ ಚಿತ್ರದ (Toxic Movie) ತಬಾಹಿ ಹಾಡು (Tabaahi Song) ಸಂಚಲನ ಸೃಷ್ಟಿ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಇದರದ್ದೇ ಮಾತಿದೆ. ಯೋಗರಾಜ್ ಭಟ್ರ ಸಂದರ್ಶನಗಳೂ ಹೆಚ್ಚು ಹೆಚ್ಚು ಹರಿದಾಡುತ್ತಿವೆ.
ಆದರೆ, ಈ ಹಾಡಿಗೆ ಸಂಗೀತ ನಿರ್ದೇಶನ ಮಾಡಿರೋ ಬಾಲಿವುಡ್ ಗಾಯಕ (Bollywood Singer) ವಿಶಾಲ್ ಮಿಶ್ರಾ (Vishal Mishra) ಮಾತನಾಡಿದ್ದಾರೆ. ಈ ಹಾಡಿನ ಚಿತ್ರೀರಣದ ವಿಷಯ ಹೇಳಿದ್ದಾರೆ. ಮ್ಯೂಸಿಕೇ ಇಲ್ಲದೆ ಚಿತ್ರೀಕರಿಸಿದ ಹಾಡು ಇದಾಗಿದೆ ಅಂತಲೂ ಹೇಳಿದ್ದಾರೆ. ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.
ತಬಾಹಿ ಹಾಡಿನ ಸೀಕ್ರೆಟ್
ತಬಾಹಿ ಹಾಡಿನ ಒಂದೊಂದೇ ಸೀಕ್ರೆಟ್ ಹೊರ ಬೀಳ್ತೀವೆ. ತಬಾಹಿ ಹಾಡನ್ನ ವಿಷ್ಯೂಲ್ ನೋಡಿಯೇ ಕನ್ನಡದಲ್ಲಿ ಬರೆದಿದ್ದೇನೆ ಅಂತ ಯೋಗರಾಜ್ ಭಟ್ ಹೇಳಿಕೊಂಡಿದ್ದಾರೆ.
ರಾಕಿ ಭಾಯ್ ಫುಲ್ ಹವಾ
(ಚಿತ್ರ ಕೃಪೆ: ವಿಶಾಲ್ ಮಿಶ್ರಾ ಇನ್ಸ್ಟಾಗ್ರಾಮ್)
ತಬಾಹಿ ಅನ್ನುವ ಪದದ ಬದಲು “ನಗಾರಿ” ಅನ್ನುವ ಪದ ಬಳೆ ಮಾಡಿ ಒಂದು ವರ್ಷನ್ ಬರೆದಿದ್ದೇನೆ ಅಂತಲೂ ಹೇಳಿದ್ದಾರೆ. ಆದರೆ, ಚಿತ್ರ ತಂಡ ಮೊದಲೇ ಡಿಸೈಡ್ ಮಾಡಿತ್ತು. ಅದಕ್ಕೇನೆ “ತಬಾಹಿ” ಅನ್ನುವ ಪದ ಬಳಕೆ ಮಾಡಿಯೇ ಇನ್ನೂ ಒಂದು ವರ್ಷನ್ ಬರೆದ ಅಂತಲೇ ಹೇಳಿದ್ದಾರೆ.
ವಿಶಾಲ್ ಮಿಶ್ರಾ ಹೇಳಿದ್ದೇನು
ವಿಶಾಲ್ ಮಿಶ್ರಾ ಬಾಲಿವುಡ್ ಅಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಆದರೆ, ಬಹು ಭಾಷೆಯಲ್ಲಿ ರಿಲೀಸ್ ಆಗ್ತಿರೋ ಈ ಚಿತ್ರದ ತಬಾಹಿ ಹಾಡಿಗೆ ವಿಶಾಲ್ ಮಿಶ್ರಾ ಸಂಗೀತ ಕೊಟ್ಟಿದ್ದಾರೆ.
ಇದನ್ನೂ ಓದಿ: Raj B Shetty: ‘ಕರಾವಳಿ’ಯ ಬಿಗ್ ನ್ಯೂಸ್ ಕೊಟ್ಟ ರಾಜ್ ಬಿ ಶೆಟ್ಟಿ; ಲೈವ್ನಲ್ಲಿ ಹೇಳಿದ್ದೇನು ಗೊತ್ತೇ?
ಈ ಹಾಡನ್ನ ಅಷ್ಟು ಭಾಷೆಯಲ್ಲಿ ಇವರೇ ಹಾಡಿದ್ದಾರೆ. ಆ ರೀತಿಯ ಹಾಡಿನ ಹಿಂದಿನ ಇನ್ನೂ ಒಂದು ವಿಶೇಷವನ್ನ ವಿಶಾಲ್ ಮಿಶ್ರಾ ಹೇಳಿಕೊಂಡಿದ್ದಾರೆ.
ಮ್ಯೂಸಿಕ್ ಇಲ್ಲದೆ ಸಾಂಗ್ ಶೂಟ್
ವಿಶಾಲ್ ಮಿಶ್ರಾ ಈ ಒಂದು ವಿಷಯವನ್ನು ಹೇಳಿಕೊಂಡಿದ್ದಾರೆ. ಈ ಚಿತ್ರದ ತಬಾಹಿ ಹಾಡನ್ನ ಮ್ಯೂಸಿಕ್ ಇಲ್ದೆ ಚಿತ್ರೀಕರಿಸಲಾಗಿದೆ. ಈ ಹಾಡಿನ ಶೂಟಿಂಗ್ ಆದ್ಮೇಲೇನೆ ಈ ಹಾಡಿಗೆ ಮ್ಯೂಸಿಕ್ ಮಾಡಿದ್ದೇನೆ.
ಚಿತ್ರೀಕರಣ ಆದ್ಮೇಲೇನೆ ನಾನು ಮತ್ತು ಯಶ್ ಕೂತು ಈ ಹಾಡಿಗೆ ಮ್ಯೂಸಿಕ್ ಮಾಡಿದ್ದೇವೆ ಅಂತಲೇ ವಿಶಾಲ್ ಮಿಶ್ರಾ ಅವರು ಹೇಳಿದ್ದಾರೆ. C FOR CINEMA ವೆಬ್ ಸೈಟ್ ವಿಡಿಯೋ ಸಂದರ್ಶನದಲ್ಲಿಯೇ ಇದನ್ನ ಹೇಳಿಕೊಂಡಿದ್ದಾರೆ.
ಆಗಸ್ಟ್-26 ಟಾಕ್ಸಿಕ್ ರಿಲೀಸ್
(ಚಿತ್ರ ಕೃಪೆ: ವಿಶಾಲ್ ಮಿಶ್ರಾ ಇನ್ಸ್ಟಾಗ್ರಾಮ್)
ರಾಕಿ ಭಾಯ್ ಫುಲ್ ಹವಾ
ರಾಕಿಂಗ್ ಸ್ಟಾರ್ ಯಶ್ ಹವಾ ಎಲ್ಲೆಡೆ ಇದೆ. ಮುಂಬೈಯಲ್ಲಿ ಮಿನಿ ಕರ್ನಾಟಕವನ್ನೆ ಸೃಷ್ಟಿ ಮಾಡಿದ್ದಾರೆ. ಯಶ್ ಆಫೀಸ್ ಅಲ್ಲಿ ಕೆಲಸ ಮಾಡಿರೋ ಹುಡುಗರು ಇಲ್ಲಿ ಯಶ್ ಜೊತೆಗೆ ಕೆಲಸ ಮಾಡುತ್ತಿದ್ದಾರೆ.
ಇದನ್ನ ನೋಡಿದ ಯೋಗರಾಜ್ ಭಟ್ರು ತುಂಬಾನೆ ಖುಷಿಪಟ್ಟಿದ್ದಾರೆ. ಇವರು ಮುಂಬೈಗೆ ಹಾಡು ಬರೆಯಲು ಹೋದಾಗ ಅಲ್ಲಿ ಮುದ್ದೆ ಕೂಡ ಬಂದಿತ್ತು. ಅದನ್ನ ಬೆಂಗಳೂರಿನಿಂದ ರಾಧಿಕಾ ಪಂಡಿತ್ ಮಾಡಿ ಕಳಿಸಿದ್ದರು. ಅದನ್ನ ಸವಿದ ಭಟ್ರು ತುಂಬಾನೆ ಖುಷಿನೂ ಪಟ್ಟಿದ್ದಾರೆ.
ಇದನ್ನೂ ಓದಿ: Daali Dhananjaya Movie: ‘ಮದರ್ ಪ್ರಾಮಿಸ್’ 20 ನಿಮಿಷ ಕಟ್; ಇಂದಿನಿಂದ ಹೊಸ ವರ್ಷನ್ ಪ್ರದರ್ಶನ!
ಆಗಸ್ಟ್-26 ಟಾಕ್ಸಿಕ್ ರಿಲೀಸ್
ಟಾಕ್ಸಿಕ್ ಚಿತ್ರ ಆಗಸ್ಟ್-26 ರಂದು ರಿಲೀಸ್ ಆಗುತ್ತಿದೆ. ಕನ್ನಡ ಮತ್ತು ಇಂಗ್ಲಿಷ್ ಅಲ್ಲಿ ಈ ಚಿತ್ರ ತಯಾರಾಗಿದೆ. ಆದರೆ, ಇತರ ಭಾಷೆಯಲ್ಲಿ ಈ ಚಿತ್ರ ಡಬ್ ಆಗುತ್ತದೆ.
ಹೀಗೆ ಕನ್ನಡದ ಟಾಕ್ಸಿಕ್ ಚಿತ್ರ ಬಹು ಭಾಷೆಯಲ್ಲಿಯೇ ಎಲ್ಲೆಡೆ ರಿಲೀಸ್ ಆಗುತ್ತಿದೆ. ಗೀತು ಮೋಹನ್ದಾಸ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಕತೆಯ ವಿಚಾರದಲ್ಲಿ ಯಶ್ ಕೂಡ ಸಾಥ್ ಕೊಟ್ಟಿದ್ದಾರೆ.
ರಾಜೀವ್ ರವಿ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಮಾಡಿದ್ದಾರೆ. ಕೆವಿಎನ್ ಹಾಗೂ ಯಶ್ ಈ ಬಹು ಕೋಟಿ ಚಿತ್ರವನ್ನ ನಿರ್ಮಿಸುತ್ತಿದ್ದಾರೆ ಅಂತಲೂ ಹೇಳಬಹುದು.














