ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಅವರು ಕಳೆದ 20 ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. 21ನೇ ದಿನ ದೆಹಲಿ ಪೊಲೀಸರು
ಅವರನ್ನು ಬಲವಂತವಾಗಿ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ದರು. ಇದರ ನಡುವೆ ಜನರು ಅವರ ವೈಯಕ್ತಿಕ ಜೀವನ, ಸಂಪಾದನೆ ಮತ್ತು ಒಟ್ಟು ಆಸ್ತಿ ಬಗ್ಗೆ ತುಂಬಾ ಕುತೂಹಲ ಹೊಂದಿದ್ದಾರೆ. ಸೋನಮ್ ತಮ್ಮ ಆಸ್ತಿ ವಿವರಗಳನ್ನು ಎಂದೂ ಹೇಳದಿದ್ದರೂ, ಅವರ ಆದಾಯ ಮತ್ತು ಹಣ ಬರುವ ಮೂಲಗಳ ಬಗ್ಗೆ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಸೋನಮ್ ವಾಂಗ್ಚುಕ್ ತಮ್ಮ ವೈಯಕ್ತಿಕ ಸಂಪತ್ತು ಅಥವಾ ನಿವ್ವಳ ಮೌಲ್ಯವನ್ನು ಅಧಿಕೃತವಾಗಿ ಇನ್ನೂ ಬಹಿರಂಗಪಡಿಸಿಲ್ಲ. ಅವರು ಹಲವು ಮೂಲಗಳಿಂದ ಆದಾಯ ಗಳಿಸುತ್ತಾರೆ ಎಂದು ಎಕನಾಮಿಕ್ ಟೈಮ್ಸ್ ವರದಿಯಲ್ಲಿದೆ.
ಆದಾಯ ಎಷ್ಟು?
ಸೋನಮ್ ಅವರದು “ವಾಂಗ್ಚುಕ್ ವರ್ಲ್ಡ್” ಎಂಬ ಯೂಟ್ಯೂಬ್ ಚಾನಲ್ ಇದೆ. ಈ ಚಾನಲ್ಗೆ ಲಕ್ಷಾಂತರ ಚಂದಾದಾರರು ಇದ್ದಾರೆ. ಇದರಿಂದ ಅವರು ಪ್ರತಿ ತಿಂಗಳು ಸುಮಾರು 3 ಲಕ್ಷದಿಂದ 7 ಲಕ್ಷ ರೂ. ವರೆಗೆ ಗಳಿಸುತ್ತಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ದೇಶೀಯ ಮತ್ತು ವಿದೇಶಿ ವೇದಿಕೆಗಳಲ್ಲಿ ಭಾಷಣ ಮಾಡಿದಾಗಲೂ ಅವರಿಗೆ ಪಾವತಿ ಸಿಗುತ್ತದೆ. ಅವರ ನಿವ್ವಳ ಮೌಲ್ಯ ಸುಮಾರು 7.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: Insurance Tips: ಹೆಲ್ತ್ ಇನ್ಶೂರೆನ್ಸ್ ಮಾಡೋ ಮುಂಚೆ ಹುಷಾರ್! ಈ 5 ತಪ್ಪುಗಳು ನಿಮ್ಮ ಹಣವನ್ನು ವ್ಯರ್ಥ ಮಾಡಬಹುದು
ಆದಾಯ ಎಲ್ಲಿಂದ ಬರುತ್ತದೆ?
ಯೂಟ್ಯೂಬ್ ಚಾನೆಲ್: ಸೋನಮ್ ವಾಂಗ್ಚುಕ್ ಅವರು ವಾಂಗ್ಚುಕ್ ವರ್ಲ್ಡ್ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಅಲ್ಲಿ ಅವರು ಶಿಕ್ಷಣ, ಪರಿಸರ, ಹವಾಮಾನ ಬದಲಾವಣೆ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಸರಳ ವೀಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇದರಿಂದ ಅವರಿಗೆ ತಿಂಗಳಿಗೆ ಸಾಕಷ್ಟು ಹಣ ಬರುತ್ತದೆ.
ಸಾರ್ವಜನಿಕ ಉಪನ್ಯಾಸಗಳು: ಸೋನಮ್ ವಾಂಗ್ಚುಕ್ ಭಾರತ ಮತ್ತು ವಿದೇಶಗಳ ವಿಶ್ವವಿದ್ಯಾಲಯಗಳು, ಸಮ್ಮೇಳನಗಳು ಮತ್ತು ಸಂಸ್ಥೆಗಳಿಗೆ ಹೋಗಿ ಪ್ರೇರಕ ಭಾಷಣಗಳನ್ನು ನೀಡುತ್ತಾರೆ. ಈ ಭಾಷಣಗಳಿಗೆ ಅವರು ಶುಲ್ಕ ಪಡೆಯುತ್ತಾರೆ.
ಶಿಕ್ಷಣ ಮತ್ತು ಸಾಮಾಜಿಕ ಸಂಸ್ಥೆಗಳು: ಸೋನಮ್ ವಾಂಗ್ಚುಕ್ ಲಡಾಖ್ನ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಸಂಸ್ಕೃತಿ ಚಳವಳಿಯನ್ನು ಆರಂಭಿಸಿದವರಲ್ಲಿ ಒಬ್ಬರು. ಅವರು ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್ ಎಂಬ ಸಂಸ್ಥೆಯನ್ನು ಶುರುಮಾಡುವಲ್ಲಿ ಬಹಳ ಮುಖ್ಯ ಕಾಣಿಕೆ ನೀಡಿದ್ದಾರೆ. ಇದು ಕೂಡ ಅವರ ಆದಾಯದ ಮೂಲ ಎಂದು ವರದಿ ಹೇಳಿದೆ.
ಸರಳ ಜೀವನ?
ಸೋನಮ್ ವಾಂಗ್ಚುಕ್ ಬಹಳ ಸರಳ ಜೀವನ ನಡೆಸುತ್ತಾರೆ. ಅವರ ಬಳಿ ದುಬಾರಿ ಕಾರುಗಳು ಅಥವಾ ಐಷಾರಾಮಿ ಮನೆ ಇದೆಯೋ ಇಲ್ಲವೋ ಗೊತ್ತಿಲ್ಲ. ಈ ಬಗ್ಗೆ ಎಲ್ಲಿಯೂ ಅಧಿಕೃತ ಮಾಹಿತಿ ಇಲ್ಲ. ಆದರೆ ಅವರು ತಮ್ಮ ಗಳಿಕೆಯ ಬಹುಪಾಲು ಹಣವನ್ನು ಶಿಕ್ಷಣ ಮತ್ತು ಸಾಮಾಜಿಕ ಕೆಲಸಗಳಿಗೆ ಖರ್ಚು ಮಾಡುತ್ತಾರೆ ಎಂದು ತಿಳಿದು ಬಂದಿದೆ.
ವಾಂಗ್ಚುಕ್ ಸುದ್ದಿಯಲ್ಲಿರುವುದ್ದೇಕೆ?
ಸೋನಮ್ ವಾಂಗ್ಚುಕ್ ಅವರು ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಾ ದೆಹಲಿಯ ಜಂತರ್ ಮಂತರ್ನಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರು. 21ನೇ ದಿನ ಅವರ ಆರೋಗ್ಯ ಹದಗೆಟ್ಟಿದ್ದರಿಂದ ದೆಹಲಿ ಪೊಲೀಸರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು.














