ಹಾಸನ (ಜು.21): ಮಾಜಿ ಪ್ರಧಾನಿ HD ದೇವೇಗೌಡರ ಪತ್ನಿ ಚೆನ್ನಮ್ಮ ಅಂತ್ಯಸಂಸ್ಕಾರ ಹಾಸನದ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಬೆಟ್ಟದ ತಪ್ಪಲಿನ ಜಮೀನಿನಲ್ಲಿ ಸೋಮವಾರ ನಡೆದಿದೆ. ಇಂದು ಸಮಾಧಿ
ಸ್ಥಳಕ್ಕೆ ಚೆನ್ನಮ್ಮ ಪುತ್ರ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹಾಗೂ ಕುಟುಂಬಸ್ಥರು ಭೇಟಿ ನೀಡಿದ್ರು. ಸಮಾಧಿ ಮುಂದೆ ವಾಗ್ದಾನ ಮಾಡಿದ ಕುಮಾರಸ್ವಾಮಿ ಅವರು, ಡಿಕೆ ಶಿವಕುಮಾರ್ ಕುರಿತ ಈ ಒಂದು ವಿಚಾರಕ್ಕೂ ಸ್ಪಷ್ಟನೆ ನೀಡಿದ್ದಾರೆ.
ಚೆನ್ನಮ್ಮ ಸಮಾಧಿ ಬಳಿ ಮಕ್ಕಳ ಮಾತುಕತೆ
ಬೆಳಗ್ಗೆಯೇ ಪತ್ನಿ ಸಮಾಧಿ ಬಳಿ ಬಂದ ದೇವೇಗೌಡ್ರು ಮಗುವಿನಂತೆ ಕಣ್ಣೀರು ಹಾಕಿದ್ರು. ಈ ವೇಳೆ ತಂದೆ ಮಕ್ಕಳು ಧೈರ್ಯ ತುಂಬಿದ್ದಾರೆ. ಬಳಿ ಸಮಾಧಿ ಇರುವ ಜಾಗದಲ್ಲಿ ರುದ್ರ, ಚಮಕ, ಗಾಯಿತ್ರಿ ಮಂತ್ರ ಹಾಗೂ ವಿಷ್ಣು ಸಹಸ್ರನಾಮ ಪಠಣ ಮಾಡಲಾಗಿದೆ. 11ನೇ ದಿನ ಕಾರ್ಯದ ಬಗ್ಗೆ ಕೂಡ ಸಮಾಧಿ ಬಳಿಯೇ ಅಣ್ಣ-ತಮ್ಮಂದಿರು ಮಾತುಕತೆ ನಡೆಸಿದ್ದಾರೆ.
ನಾಳೆ ಸಮಾಧಿ ಬಳಿ ಹಾಲು-ತುಪ್ಪ ಕಾರ್ಯ
ಮಾತುಕತೆ ಬಳಿಕ ಮಾಧ್ಯಮಗಳ ಜೊತೆ ಮಾತಾಡಿದ ಕುಮಾರಸ್ವಾಮಿ, ತಾಯಿಯ ಅಂತ್ಯಕ್ರಿಯೆ ಕಾರ್ಯಕ್ರಮ ನಿನ್ನೆ ನೆಡೆದಿದ್ದು, ಇಂದು ನಮ್ಮ ತಂದೆಯವರ ಉಪಸ್ಥಿತಿಯಲ್ಲಿ ನಮ್ಮ ಕುಟುಂಬಸ್ಥರು ಸೇರಿದ್ದೇವೆ. ನಮ್ಮ ತಾಯಿ ದೈವ ಭಕ್ತೆ ಅವರಿಗೆ ಚಿರಶಾಂತಿ ಸಿಗ್ಬೇಕು. ಹನ್ನೊಂದನೇ ದಿನದ ಕಾರ್ಯದವರೆಗೂ ಶಾಸ್ತ್ರೋಕ್ತವಾಗಿ ಶ್ಲೋಕ ಪಠಿಸಲು ಸೂಚಿಸಲಾಗಿದ್ದು, ನಾಳೆ ಹಾಲು ತುಪ್ಪ ಬಿಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದ್ರು.
ಅಮ್ಮ ಸಮಾಧಿ ಮುಂದೆ ವಾಗ್ದಾನ
ನಮ್ಮನ ನಾಡಿನ ಲಕ್ಷಾಂತರ ಜನರು ನನ್ನ ತಾಯಿಯ ದರ್ಶನ ಮಾಡಿ ಪ್ರೀತಿ ತೋರಿಸಿದ್ದಾರೆ. ಅವರ ಪ್ರೀತಿ ಋಣ ತೀರಿಸಬೇಕಿದೆ, ಜನರ ಸೇವೆ ಮಾಡೋದೆ ನಮ್ಮ ಧ್ಯೇಯವಾಗಿರುತ್ತೆ ಎಂದ ಕುಮಾರಸ್ವಾಮಿ ಅವ್ರು, ನನ್ನ ತಾಯಿಯ ಸಮಾಧಿ ಮುಂದೆ ಕೂತು ಹೇಳುತ್ತೇನೆ. ನನ್ನ ಕೊನೆ ಉಸಿರು ಇರೋ ತನಕ ಜನರ ಸೇವೆ ಮಾಡುತ್ತೇನೆ ಎಂದು HDK ವಾಗ್ದಾನ ಮಾಡಿದ್ದಾರೆ.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೆಸರೇಳಲಿಲ್ಲ ಯಾಕೆ?
ಇನ್ನು ಅಂತಿಮ ದರ್ಶನದ ವೇಳೆ ನಾನು ಮೈಕ್ ಹಿಡಿದು ಮಾತನಾಡಿದೆ. ನಾನು ಮಾತಾಡ್ಬೇಕು ಅನ್ನೊ ಉದ್ದೇಶ ಇರಲಿಲ್ಲ. ಮೈಕ್ ಹಿಡಿದ ವೇಳೆ ನನ್ನ ತಾಯಿಯೇ ನನ್ನನ್ನು ಮಾತನಾಡಿಸಿದಂತಾಗಿದೆ. ಆ ವೇಳೆ ನಾನು ಕೇಂದ್ರ ಸರ್ಕಾರದ ಮಂತ್ರಿಯ ಹೆಸರನ್ನ ಹೇಳಿದೆ. ಆದ್ರೆ ರಾಜ್ಯದ ಮುಖ್ಯಮಂತ್ರಿ ಹೆಸರನ್ನ ಹೇಳಲಿಲ್ಲ ಅನ್ನೋ ಮಾತು ಕೇಳಿ ಬಂದಿದೆ ಎಂದ ಕುಮಾರಸ್ವಾಮಿ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.
‘ಅಂತಹ ಮಟ್ಟಕ್ಕೆ ನಾನು ಹೋಗೋದಿಲ್ಲ’
ನಾನು ಯಾವುದೋ ಉದ್ದೇಶ ಇಟ್ಟುಕೊಂಡು ಶಿವಕುಮಾರ್ ಅವರ ಹೆಸರು ಹೇಳಿಲ್ಲ ಎಂದು ತಪ್ಪು ಭಾವಿಸಬಾರದು. ಉದ್ದೇಶ ಪೂರ್ವಕವಾಗಿ ನಾನು ಅದನ್ನ ಮಾತನಾಡಿಲ್ಲ. ಅಂತಹ ಮಟ್ಟಕ್ಕೆ ನಾನು ಹೋಗೋದೂ ಇಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾನೆ.
ನಮ್ಮ ತಾಯಿ ಯಾವ ರೀತಿ ಬದುಕಿದ್ದಾರೆ ಎಂಬುದನ್ನ ಮಾಧ್ಯಮ ಮಿತ್ರರು ತೋರಿಸಿದ್ದೀರಿ. ಕೆಲವು ಬಾರಿ ನಮ್ಮನ್ನ ತಿದ್ದಿದ್ದೀರಿ. ನನ್ನ ತಾಯಿ ಎಂದಿಗೂ ಮಾಧ್ಯಮದ ಮುಂದೆ ಬಂದವರಲ್ಲ. ಅವರನ್ನ ಅನ್ನಪೂರ್ಣೇಶ್ವರಿ ಎಂದು ವರ್ಣಿಸಿದ್ದೀರಿ. ಹನ್ನೊಂದನೇ ದಿನದ ಕಾರ್ಯಕ್ರಮದಲ್ಲಿ ಲಕ್ಷಾಂತರ ಬಂಧುಗಳು ಸೇರಲಿದ್ದಾರೆ. ಈ ಸ್ಥಳದಲ್ಲಿ ಏನು ಮಾಡಬೇಕು ಅನ್ನೋದನ್ನ ಹನ್ನೊಂದನೇ ದಿನದ ಕಾರ್ಯದ ವೇಳೆ ಹೇಳುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: HD Kumaraswamy: ಅಮ್ಮನ ಮನಸ್ಸು ನೋಯಿಸಿಬಿಟ್ಟೆ, ತಾಯಿ ಅಂತ್ಯಕ್ರಿಯೆ ವೇಳೆ ಕಣ್ಣೀರಿಡುತ್ತಾ ಕುಮಾರಸ್ವಾಮಿ ದಿಟ್ಟ ಸಂಕಲ್ಪ!
(ವರದಿ: ಕೃಷ್ಣ, ನ್ಯೂಸ್18 ಕನ್ನಡ, ಹಾಸನ)














