ಪಾಕಿಸ್ತಾನದ (Pakistan) ಬುದ್ದಿ ದಿನದಿಂದ ದಿನಕ್ಕೆ ಎಲ್ಲಾ ದೇಶಗಳ ಮುಂದೆ ಬಯಲಾಗುತ್ತಿದೆ. ಇದೀಗ ಪಾಕಿಸ್ತಾನ ತನ್ನ ‘ದಲ್ಲಾಳಿತನ’ದಿಂದ (Brokerage) ಖಜಾನೆ ತುಂಬಿಸಿಕೊಳ್ಳಲು ಪ್ಲಾನ್
ಮಾಡುತ್ತಿರುವುದು ಬಯಲಾಗಿದೆ. ಇರಾನ್ ಮತ್ತು ಅಮೆರಿಕದ (Iran US War) ನಡುವಿನ ಯುದ್ಧದಲ್ಲಿ ಮಧ್ಯಸ್ಥಿಕೆ ವಹಿಸಿ ತನ್ನ ಆರ್ಥಿಕ ಲಾಭವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂಬುದು ಈಗ ಸ್ಪಷ್ಟವಾಗಿದೆ. ಇದಕ್ಕಾಗಿ ಅಮೆರಿಕಾದ ಮುಂದೆ ಪಾಕಿಸ್ತಾನ ಭಾರೀ ಮೊತ್ತದ ಹಣಕ್ಕೆ ಡಿಮ್ಯಾಂಡ್ ಇಟ್ಟಿದೆ.
ರಾಯಿಟರ್ಸ್ ವರದಿ ಪ್ರಕಾರ, ಈ ಮಧ್ಯಸ್ಥಿಕೆಯ ನಂತರ ಪಾಕಿಸ್ತಾನ ಅಮೆರಿಕದಿಂದ 10 ಬಿಲಿಯನ್ ಡಾಲರ್ (ಸುಮಾರು 68,000 ಕೋಟಿ ರೂಪಾಯಿ) ಕರೆನ್ಸಿ ಬೆಂಬಲ ಸೌಲಭ್ಯ (Currency Support Facility) ಕೋರಿದೆ. ಇದು ಪಾಕಿಸ್ತಾನದ ಸಂಕಷ್ಟದಲ್ಲಿರುವ ಆರ್ಥಿಕತೆಗೆ ದೊಡ್ಡ ನೆರವಾಗುವ ಸಾಧ್ಯತೆ ಇದೆ.
ಆರ್ಥಿಕ ಲಾಭಕ್ಕಾಗಿ ಬಳಸಿಕೊಳ್ತಾ ಪಾಕಿಸ್ತಾನ?
ಪಾಕಿಸ್ತಾನ ಯಾವಾಗಲೂ ತನ್ನ ಲಾಭಕ್ಕಾಗಿ ಕಾರ್ಯನಿರ್ವಹಿಸುತ್ತದೆ ಎಂಬ ಅನುಮಾನ ಇದ್ದೇ ಇತ್ತು. ಇರಾನ್-ಅಮೆರಿಕ ಸಂಘರ್ಷದಲ್ಲಿ ಅದು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದು ಈಗ ಆರ್ಥಿಕ ಲಾಭಕ್ಕಾಗಿ ಎಂದು ಕಾಣುತ್ತಿದೆ. ಇಡೀ ಜಗತ್ತು “ಭಯೋತ್ಪಾದನೆಗೆ ಹೆಸರಾದ ಪಾಕಿಸ್ತಾನ ಯುದ್ಧ ನಿಲ್ಲಿಸಲು ಏಕೆ ಇಷ್ಟೊಂದು ಉತ್ಸುಕ?” ಎಂದು ಆಶ್ಚರ್ಯ ಪಡುತ್ತಿತ್ತು. ಈಗ ಅದರ ನಿಜವಾದ ಉದ್ದೇಶ ಬೆಳಕಿಗೆ ಬಂದಿದೆ.
ಬೇಡಿಕೆಯ ವಿವರಗಳು!
ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರಿಗೆ ಪಾಕಿಸ್ತಾನವು ಈ ಬೇಡಿಕೆ ಸಲ್ಲಿಸಿದೆ. ಇದನ್ನು ದ್ವಿಪಕ್ಷೀಯ ವಿನಿಮಯ ಸ್ಥಿರೀಕರಣ ಬೆಂಬಲ ಸೌಲಭ್ಯ (BISF) ಎಂದು ಕರೆಯಲಾಗಿದೆ. ಗರಿಷ್ಠ 5 ವರ್ಷಗಳ ಅವಧಿಗೆ ಈ ಸೌಲಭ್ಯ ಇರುತ್ತದೆ. ಇದರ ಮುಖ್ಯ ಉದ್ದೇಶ, ವಿದೇಶಿ ವಿನಿಮಯ ಮೀಸಲುಗಳನ್ನು (Foreign Exchange Reserves) ಬಲಪಡಿಸುವುದು. ಪಾಕಿಸ್ತಾನಿ ರೂಪಾಯಿಯ ಮೌಲ್ಯವನ್ನು ಸ್ಥಿರಗೊಳಿಸುವುದು. ಆರ್ಥಿಕ ಒತ್ತಡವನ್ನು ಕಡಿಮೆ ಮಾಡುವುದು ಎಂದು ಹೇಳಲಾಗಿದೆ.
ಈ ಸೌಲಭ್ಯ ಅನುಮೋದನೆಯಾದರೆ, ಪಾಕಿಸ್ತಾನದ ಆರ್ಥಿಕತೆಗೆ ದೊಡ್ಡ ಉಡುಗೊರೆ ಸಿಗುತ್ತದೆ. ಅದು IMF (ಅಂತರರಾಷ್ಟ್ರೀಯ ಹಣಕಾಸು ನಿಧಿ) ಮೇಲಿನ ಅವಲಂಬನೆಯನ್ನೂ ಕಡಿಮೆ ಮಾಡುತ್ತದೆ. ಪ್ರಸ್ತುತ ಪಾಕಿಸ್ತಾನ $7 ಬಿಲಿಯನ್ IMF ಕಾರ್ಯಕ್ರಮದಡಿ ಕಾರ್ಯನಿರ್ವಹಿಸುತ್ತಿದೆ. ಇದಕ್ಕಾಗಿ ತೆರಿಗೆ ಹೆಚ್ಚಿಸುವುದು, ಸರ್ಕಾರಿ ಖರ್ಚು ಕಡಿಮೆ ಮಾಡುವುದು ಮುಂತಾದ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಇವು ರಾಜಕೀಯವಾಗಿ ಸಹ ಕಷ್ಟಕರವಾಗಿವೆ.
ಇದನ್ನೂ ಓದಿ: Sonam Wangchuk: ಮಾತುಕತೆ ಆರಂಭಿಸಿದ ಸರ್ಕಾರ, ರಾತ್ರಿ ವಾಂಗ್ಚುಕ್ ಭೇಟಿಯಾದ ಇಬ್ಬರು ಕೇಂದ್ರ ಸಚಿವರು
ಆರ್ಥಿಕ ಸ್ಥಿತಿ ಮತ್ತು ಅವಲಂಬನೆ
ಪಾಕಿಸ್ತಾನದ ವಿದೇಶಿ ವಿನಿಮಯ ಮೀಸಲುಗಳು ಬಹುತೇಕ ಚೀನಾ, ಸೌದಿ ಅರೇಬಿಯಾ ಮುಂತಾದ ದೇಶಗಳ ಠೇವಣಿ ಮತ್ತು ಸಾಲಗಳ ಮೇಲೆ ಅವಲಂಬಿತವಾಗಿವೆ. 2023ರಲ್ಲಿ IMFನಿಂದ $3 ಬಿಲಿಯನ್ ಸ್ಟ್ಯಾಂಡ್ಬೈ ಪ್ಯಾಕೇಜ್ ಪಡೆದು ಸಾಲ ಮರುಪಾವತಿ ಸಮಸ್ಯೆಯನ್ನು ತಪ್ಪಿಸಿತು. ನಂತರ ಹವಾಮಾನ ಬದಲಾವಣೆಗೆ ಸಂಬಂಧಿಸಿದ $7 ಬಿಲಿಯನ್ ಸಾಲವನ್ನೂ ಪಡೆಯಿತು. ಆದರೆ ಇನ್ನೂ ಆರ್ಥಿಕ ಸ್ಥಿರತೆ ಪೂರ್ಣವಾಗಿ ಬಂದಿಲ್ಲ.
ಅಮೆರಿಕದೊಂದಿಗೆ ಈ ಹೊಸ ಸಂಬಂಧ ಪಾಕಿಸ್ತಾನಕ್ಕೆ ಆರ್ಥಿಕ ಭದ್ರತೆಯೊಂದಿಗೆ ರಾಜಕೀಯ ಸಂದೇಶವನ್ನೂ ನೀಡುತ್ತದೆ. US ಖಜಾನೆಯ Exchange Stabilization Facility (ESF) ಕಡಿಮೆ ದೇಶಗಳಿಗೆ ಮಾತ್ರ ನೀಡುವ ವಿಶೇಷ ಸಹಾಯ. ಇದು ಡಾಲರ್ ಸ್ವಾಪ್ ಅಥವಾ ಖಾತರಿಗಳ ರೂಪದಲ್ಲಿ ಬರುತ್ತದೆ.
ಏಕೆ ಮುಖ್ಯವಾಗಿದೆ ಈ ಬೇಡಿಕೆ?
ಇರಾನ್-ಅಮೆರಿಕ ಮಾತುಕತೆಗಳಲ್ಲಿ ಪಾಕಿಸ್ತಾನದ ಪಾತ್ರವು ಅದರ ರಾಜತಾಂತ್ರಿಕ ಸ್ಥಾನವನ್ನು ಬಲಪಡಿಸಿದೆ. ಈಗ ಅದನ್ನು ಆರ್ಥಿಕ ಲಾಭಕ್ಕೆ ಬಳಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇದು ಪಾಕಿಸ್ತಾನದ ಸರ್ಕಾರಕ್ಕೆ (ಪ್ರಧಾನಿ ಶಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಅಸಿಮ್ ಮುನೀರ್) ಒಳಗಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಆದರೆ ವಿಶ್ಲೇಷಕರು ಇದನ್ನು “ದಲ್ಲಾಳಿ” ಪಾತ್ರ ಎಂದು ವಿಮರ್ಶಿಸುತ್ತಿದ್ದಾರೆ.
ಪಾಕಿಸ್ತಾನದ ಆರ್ಥಿಕ ಸುಧಾರಣೆಗಳು ಸ್ವಲ್ಪ ಸ್ಥಿರತೆ ತಂದಿದ್ದರೂ, ಸಾಮಾನ್ಯ ಜನರಿಗೆ ಹೆಚ್ಚುವರಿ ತೆರಿಗೆ, ಕಡಿಮೆ ಅಭಿವೃದ್ಧಿ ಖರ್ಚುಗಳು ಸಮಸ್ಯೆಯಾಗಿವೆ. ಈ ಅಮೆರಿಕದ ಸಹಾಯವು ಅವರಿಗೆ ಉಸಿರಾಡಲು ಸಹಾಯ ಮಾಡುತ್ತದೆ. ಕೊನೆಯಲ್ಲಿ, ಪಾಕಿಸ್ತಾನದ ಈ ನಡವಳಿಕೆ ಅಂತರರಾಷ್ಟ್ರೀಯ ರಾಜಕೀಯದಲ್ಲಿ ಆರ್ಥಿಕ ಲಾಭಕ್ಕಾಗಿ ಮಧ್ಯಸ್ಥಿಕೆ ಬಳಸುವ ಉದಾಹರಣೆಯಾಗಿದೆ. ಅಮೆರಿಕ ಈ ಬೇಡಿಕೆಗೆ ಏನು ಉತ್ತರ ನೀಡುತ್ತದೆ ಎಂಬುದು ಈಗ ಎಲ್ಲರ ಕಣ್ಣು. ಇದು ಪಾಕಿಸ್ತಾನದ ಭವಿಷ್ಯದ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.














