ಬೆಂಗಳೂರು (ಜು.23): ಕಾಕ್ರೋಚ್ ಹೋರಾಟದ ಎಫೆಕ್ಟ್ ಸಚಿವ ಸಂಪುಟ ವಿಸ್ತರಣೆ ಮೇಲೂ ಆಗಿದೆ. ರಾಹುಲ್ ಗಾಂಧಿ ನೀಟ್ ಪ್ರತಿಭಟನೆಯಲ್ಲಿ ಬ್ಯುಸಿ ಆಗಿದ್ದು, ಸಂಪುಟ ವಿಸ್ತರಣೆ (Cabinet Expansion)
ವಿಚಾರ ಮುಂದೂಡಿದ್ದಾರೆ. ಸಚಿವಾಕಾಂಕ್ಷಿಗಳು ಸಚಿವಾಕಾಂಕ್ಷಿಗಳಿ ಬರೀಗೈನಲ್ಲೇ ನಗರಕ್ಕೆ ವಾಪಸ್ ಆಗಿದ್ದು, ಮತ್ತೆ ಭಾನುವಾರ ಕಾಂಗ್ರೆಸ್ (Congress) ರಾಜ್ಯ ನಾಯಕತ್ವ ದೆಹಲಿ ದಂಡಯಾತ್ರೆ ನಡೆಸುವ ಸಾಧ್ಯತೆಯಿದೆ. ಜುಲೈ 26ರಂದೇ ಸಂಪುಟ ಫೈನಲ್ ಆಗಲಿದ್ದು, 27ಕ್ಕೆ ಪ್ರಮಾಣವಚನ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಇನ್ನು ಈ 19 ಮಂದಿಗೆ ಮಂತ್ರಿಫಿಕ್ಸ್ ಆಗಿದ್ಯಾ? ಇಲ್ಲಿದೆ ಸಂಪೂರ್ಣ ಲಿಸ್ಟ್.
ಸೋಮವಾರ ಪದಗ್ರಹಣ ಫಿಕ್ಸ್?
ಕಕ್ರೋಜ್ ಹೋರಾಟದ ಸದ್ದು ಕಡಿಮೆ ಆಗಿ ಎಲ್ಲಾ ಅಂದುಕೊಂಡಂತೆ ನಡೆದ್ರೆ ಜುಲೈ 29 ಸೋಮವಾರ ನೂತನ ಸಚಿವರ ಪದಗ್ರಹಣ ನಡೆಯುವ ಸಾಧ್ಯತೆಯಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಲುವಾಗಿ ಹೈಕಮಾಂಡ್ ಜತೆ ಚರ್ಚೆಗೆ ತೆರಳಿದ ಕಾಂಗ್ರೆಸ್ ನಾಯಕರು ಕಾಕ್ರೋಜ್ ಹೋರಾಟದ ಪರಿಣಾಮವಾಗಿ ಖಾಲಿ ಕೈಯಲ್ಲಿ ವಾಪಸ್ ಬರುವಂತೆ ಆಗಿದೆ.
ಮತ್ತೆ ದೆಹಲಿಗೆ ತ್ರಿಮೂರ್ತಿಗಳು
ಶನಿವಾರ ಮತ್ತೆ ಮುಖ್ಯಮಂತ್ರಿ, ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮತ್ತೆ ದೆಹಲಿಗೆ ತೆರಳು ಸಾಧ್ಯತೆಯಿದೆ ಇದ್ದು, ಭಾನುವಾರ ಹೈಕಮಾಂಡ್ ವರಿಷ್ಟರೊಂದಿಗೆ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಲಿದ್ದು, ನೂತನ ಸಂಪುಟದ ಪಟ್ಟಿಗೆ ಫೈನಲ್ ಮಾಡಿಕೊಂಡೆ ಬರಲಿದ್ದಾರೆ.
18 ಮಂದಿ ಪ್ರಮಾಣವಚನ ಸ್ವೀಕಾರ
ಈ ಮೂಲಗಳ ಪ್ರಕಾರ ಸೋಮವಾರ ಅಥವಾ ಬುಧವಾರ ನಡೆಯಲಿರುವ ನೂತನ ಸಚಿವರ ಪದಗ್ರಹಣ ಸಮಾರಂಭದಲ್ಲಿ ಬಹುತೇಕ 18 ಮಂದಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಉಳಿದ ಎರಡು ಸ್ಥಾನಗಳನ್ನು ಖಾಲಿ ಇಟ್ಟುಕೊಳ್ಳಲು ಡಿಕೆ ಶಿವಕುಮಾರ್ ಚಿಂತನೆ ನಡೆಸಿದ್ದಾರೆ ಎಂದು ಕನ್ನಡ ಪ್ರಭ ವರಿದ ಮಾಡಿದೆ.
ಮತ್ತೆರಡು ಡಿಸಿಎಂ ಹುದ್ದೆಗೆ ಮತ್ತೆ ಒತ್ತಡ
ಸಂಪುಟ ವಿಸ್ತರಣೆ ಚರ್ಚೆ ನಡುವೆ ಹಠಾತ್ ಆಗಿ ಡಾ.ಜಿ. ಪರಮೇಶ್ವರ್ ಜತೆ ಮತ್ತೆರಡು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಚರ್ಚೆ ಮುನ್ನೆಲೆಗೆ ಬಂದಿದೆ. ಕಾಂಗ್ರೆಸ್ ಹೈಕಮಾಂಡ್ ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎಸ್ಟಿ ಸಮುದಾಯದ ಸತೀಶ್ ಜಾರಕಿಹೊಳಿ, ಹಾಗೂ ಲಿಂಗಾಯತ ಸಮುದಾಯದ ಒಬ್ಬರಿಗೆ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಇವರಿಗೆಲ್ಲಾ ಮಂತ್ರಿಗಿರಿ ಫಿಕ್ಸಾ?
1. ಲಕ್ಷ್ಮಣ ಸವದಿ
2. ಪುಟ್ಟರಂಗಶೆಟ್ಟಿ
3. ಸಲೀಂ ಅಹ್ಮದ್
4. ಎಂ. ಕೃಷ್ಣಪ್ಪ
5. ಚೆಲುವರಾಯಸ್ವಾಮಿ
6. ಎಸ್.ಎಸ್ ಮಲ್ಲಿಕಾರ್ಜುನ್
7. ರಘುಮೂರ್ತಿ
8. ರುದ್ರಪ್ಪ ಲಮಾಣಿ
9. ಮಧು ಬಂಗಾರಪ್ಪ
10. ಅಜಯ ಸಿಂಗ್
11. ಅಪಾಜಿ ನಾಡಗೌಡ/ ಯಶವಂಶ ರಾಯಗೌಡ ಪಾಟೀಲ್
12. ಬಸವರಾಜ ರಾಯರೆಡ್ಡಿ/ಶಿವರಾಜ ತಂಗಡಗಿ
13 ಶ್ರೀನಿವಾಸ ಮಾನೆ / ಸಂತೋಷ ಲಾಡ್
14. ಜಮೀರ್ ಅಹ್ಮದ್ / ತನ್ನೀರ್ ಸೇವ್ / ರಿಜ್ವಾನ್ ಅರ್ಷದ್
15. ತರೀಕೆರೆ ಶ್ರೀನಿವಾಸ್ / ಆರತಿ ಕೃಷ್ಣ
16. ಆನೇಕಲ್ ಶಿವಣ್ಣ/ ನರೇಂದ್ರ ಸ್ವಾಮಿ/ಎಚ್.ಸಿ. ಮಹದೇವಪ್ಪ
17. ಅನ್ನಪೂರ್ಣ ತುಕಾರಾಂ /ಬಿ. ನಾಗೇಂದ್ರ
18. ಗುಬ್ಬಿ ವಾಸು / ಶಿವಲಿಂಗೇಗೌಡ / ಶರತ್ ಬಚ್ಚೇಗೌಡ
19 ದಿನೇಶ್ ಗುಂಡೂರಾವ್ /














