ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ (Independence Day) ಸಂಭ್ರಮದಲ್ಲಿ ಬೆಂಗಳೂರಿನ (Bengaluru) ಪ್ರಸಿದ್ಧ ಲಾಲ್ಬಾಗ್ನಲ್ಲಿ ಆಯೋಜಿಸಲಾಗಿರುವ 220ನೇ ಫಲಪುಷ್ಪ ಪ್ರದರ್ಶನವು (Flower
Show) ಕೇವಲ ಹೂವುಗಳ ಹಬ್ಬವಷ್ಟೇ ಅಲ್ಲ, ಕರ್ನಾಟಕವನ್ನು (Karnataka) ದೀರ್ಘಕಾಲ ಆಳಿದ ಪಶ್ಚಿಮ ಗಂಗರ ರೋಮಾಂಚಕ ಇತಿಹಾಸವನ್ನು ತೆರೆದಿಡಲಿದೆ. ಆಗಸ್ಟ್ 6 ರಿಂದ 17ರವರೆಗೆ ನಡೆಯಲಿರುವ ಈ ವಿಶೇಷ ಪ್ರದರ್ಶನದಲ್ಲಿ ಗಂಗರ ಕಾಲದ ವೈಭವವನ್ನು ಕಣ್ಣಾರೆ ಕಂಡು ಆನಂದಿಸಬಹುದಾಗಿದೆ.
ಗಂಗರ ಇತಿಹಾಸ ಅನಾವರಣ
ಕಿ.ಶ. 350 ರಿಂದ 1004 ರವರೆಗೆ ಆಡಳಿತ ನಡೆಸಿದ ಪ್ರಮುಖ ರಾಜವಂಶವಾದ ಪಶ್ಚಿಮ ಗಂಗರ ಆಡಳಿತ, ವಾಸ್ತುಶಿಲ್ಪ, ಶಿಕ್ಷಣ ಮತ್ತು ಸಂಸ್ಕೃತಿಯ ಅನಾವರಣ ಇಲ್ಲಿಯ ಪ್ರಮುಖ ಆಕರ್ಷಣೆಯಾಗಿದೆ.
ಅದ್ಭುತ ಕಲಾಕೃತಿಗಳು
ಲಾಲ್ಬಾಗ್ನ ಗಾಜಿನ ಮನೆಯ ಮುಂದೆ ಬೆಂಗಳೂರಿನ ಬೇಗೂರಿನಲ್ಲಿರುವ 1300 ವರ್ಷಗಳಷ್ಟು ಹಳೆಯದಾದ ನಾಗನಾಥೇಶ್ವರ ದೇವಸ್ಥಾನದ ಪ್ರತಿಕೃತಿಯನ್ನು ನಿರ್ಮಿಸಲಾಗುತ್ತಿದೆ.
ಐತಿಹಾಸಿಕ ಪ್ರತಿಕೃತಿಗಳು
ನಂದಿ ಬೆಟ್ಟದ ಯೋಗ ನಂದೀಶ್ವರ ದೇವಸ್ಥಾನ, ಕೋಣಾರ್ಕ್, ರಾಷ್ಟ್ರಕೂಟರ ಮೇಲಿನ ಯುದ್ಧದ ಸನ್ನಿವೇಶಗಳು ಹಾಗೂ ಗೊಮ್ಮಟೇಶ್ವರ ಪ್ರತಿಮೆಯ ಅರ್ಧಭಾಗದ ಮಾದರಿಗಳನ್ನು ಪ್ರದರ್ಶನದಲ್ಲಿ ಕಾಣಬಹುದು.
ರಾಜರುಗಳ ಪ್ರತಿಮೆಗಳು
ಗಂಗ ರಾಜವಂಶದ ಸ್ಥಾಪಕ ದಡಿಗ ಅಥವಾ ಕೊಂಗುಣಿವರ್ಮ, ಶ್ರೀಪುರುಷ, ರಾಜಮಲ್ಲ, ಮಾರಸಿಂಹ ಮುಂತಾದ ಪ್ರಮುಖ ರಾಜರುಗಳ ಪ್ರತಿಮೆಗಳು ಹಾಗೂ ಗಂಗರ ಕಾಲದ ಶಾಸನಗಳು ಮತ್ತು ವೀರಗಲ್ಲುಗಳ ಮಾದರಿಗಳನ್ನು ಇಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ: Dam Water Level: ನಿಮ್ಮೂರಿನ ಡ್ಯಾಂ ಭರ್ತಿಯಾಗಿದೆಯೇ? ಇಲ್ಲಿದೆ ಇಂದಿನ ನೀರಿನ ಮಟ್ಟದ ಲೈವ್ ರಿಪೋರ್ಟ್!
ಕನ್ನಡ ಭಾಷೆ, ಶಿಕ್ಷಣ, ನೀರಾವರಿ ಮತ್ತು ಸಾಹಿತ್ಯಕ್ಕೆ ಗಂಗ ಅರಸರು ನೀಡಿರುವ ಕೊಡುಗೆಗಳನ್ನು ಪ್ರತಿಯೊಬ್ಬ ಕನ್ನಡಿಗನೂ ತಿಳಿದುಕೊಳ್ಳಲು ಇದೊಂದು ಅತ್ಯುತ್ತಮ ಅವಕಾಶವಾಗಿದೆ. ಕೇವಲ 12 ದಿನಗಳ ಕಾಲ ಮಾತ್ರ ಲಭ್ಯವಿರುವ ಈ ಅಪರೂಪದ ಪ್ರದರ್ಶನವನ್ನು ತಪ್ಪಿಸಿಕೊಳ್ಳದಿರಿ.














