ನವದೆಹಲಿ: ದೆಹಲಿಯ ಜಂತರ್ ಮಂತರ್ನಲ್ಲಿ (Jantar Mantar) ಕಾಕ್ರೋಚ್ ಜನತಾ ಪಕ್ಷದ ಪ್ರತಿಭಟನೆ (Abhijeet Dipke) ನಿನ್ನೆಯತನಕ ಶಾಂತ ರೀತಿಯಲ್ಲೇ ನಡೆಯುತ್ತಿತ್ತು. ಸಿಜೆಪಿ ಬೆಂಬಲಿಗರು
ಕಳೆದ ಹಲವಾರು ದಿನಗಳಿಂದ ಇಲ್ಲಿ ಪ್ರತಿಭಟನೆ (CJP Protest) ನಡೆಸುತ್ತಿದ್ದರು.
ಆದರೆ ನಿನ್ನೆ ಪ್ರತಿಭಟನಾಕಾರರು ಸಂಸತ್ತಿನ ಕಡೆಗೆ ಮೆರವಣಿಗೆ ಜಾಥಾ ನಡೆಸುವಾಗ ಪೊಲೀಸರು ಅಶ್ರುವಾಯು ಸಿಡಿಸಿ, ಲಾಠಿ ಪ್ರಹಾರ ನಡೆಸಿದರು, ಇದರಿಂದಾಗಿ ಹಲವಾರು ಜನರು ಗಾಯಗೊಂಡರು. ಲಾಠಿ ಚಾರ್ಜ್ ವೇಳೆ ಪೊಲೀಸರ ವೇಷದಲ್ಲಿ ಕೆಲವು ಪುಂಡರೂ ಸೇರಿದ್ದರು ಎಂಬ ಆರೋಪವೂ ಕೇಳಿಬರ್ತಿದೆ. ಈತನ್ಮಧ್ಯೆ ಲಾಠಿಚಾರ್ಜ್ ನಡೆದ ಮರುದಿನ ಅಂದರೆ ಇಂದು, ಸಿಜೆಪಿಯ ಮುಖ್ಯಸ್ಥ ಅಭಿಜೀತ್ ದಿಪ್ಕೆ ಕ್ಷಮೆಯಾಚಿಸಿದ್ದಾರೆ.
ಇದನ್ನೂ ಓದಿ: Flood Effect: ಭೀಕರ ಪ್ರವಾಹಕ್ಕೆ ತತ್ತರಿಸಿದ ಅಫ್ಘಾನ್! 20 ಮಂದಿ ಸಾವು, 100ಕ್ಕೂ ಹೆಚ್ಚು ಜನರು ಕಾಣೆ
ಈ ಸಂಬಂಧ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಕಾಕ್ರೋಚ್ ಜನತಾ ಪಕ್ಷದ ಮುಖ್ಯಸ್ಥ ಅಭಿಜೀತ್ ದೀಪ್ಕೆ, ಪ್ರತಿಭಟನೆಯಲ್ಲಿ ಪಾಲ್ಗೊಂಡ ತಮ್ಮ ಬೆಂಬಲಿಗರಿಗೆ ಕ್ಷಮೆಯಾಚಿಸಿದರು, ವಿಶೇಷವಾಗಿ ಪುರುಷ ಪೊಲೀಸ್ ಅಧಿಕಾರಿಗಳಿಂದ ಹಲ್ಲೆಗೊಳಗಾದ ಮಹಿಳಾ ವಿದ್ಯಾರ್ಥಿಗಳನ್ನು ಉಲ್ಲೇಖಿಸಿ ಈ ಕ್ಷಮೆಯನ್ನು ಕೋರಿದ್ದಾರೆ.
ಅಭಿಜೀತ್ ದೀಪ್ಕೆ ಮಂಗಳವಾರ (ಜುಲೈ 21) ಎಕ್ಸ್ನಲ್ಲಿ ಈ ಕುರಿತ ಪೋಸ್ಟ್ ಹಂಚಿಕೊಂಡಿದ್ದಾರೆ. ‘ನನ್ನ ಎಲ್ಲಾ ಬೆಂಬಲಿಗರಿಗೆ, ವಿಶೇಷವಾಗಿ ಪ್ರತಿಭಟನೆಯ ಸಮಯದಲ್ಲಿ ಗಾಯಗೊಂಡ ವಿದ್ಯಾರ್ಥಿನಿಯರಿಗೆ ನಾನು ಕ್ಷಮೆಯಾಚಿಸುತ್ತೇನೆ’ ಎಂದು ಅಭಿಜೀತ್ ದೀಪ್ಕೆ ಬರೆದಿದ್ದಾರೆ. ಪ್ರತಿಭಟನಾಕಾರರನ್ನು ರಕ್ಷಿಸಲು ಉತ್ತಮ ಪ್ರಯತ್ನಗಳನ್ನು ಮಾಡಬಹುದಿತ್ತು ಎಂದು ಹೇಳಿರುವ ಅಭಿಜೀತ್, ‘ನಾವು ಇನ್ನೂ ಉತ್ತಮವಾಗಿ ರಕ್ಷಣೆ ಮಾಡಬಹುದಿತ್ತು. ದೆಹಲಿ ಪೊಲೀಸರ ಅಮಾನವೀಯ ಕ್ರಮಗಳಿಂದ ನಿಮ್ಮನ್ನು ರಕ್ಷಿಸಲು ನಾನು ಇನ್ನೂ ಉತ್ತಮವಾಗಿ ಕೆಲಸ ಮಾಡಬಹುದಿತ್ತು’ ಎಂದು ಅವರು ಬರೆದಿದ್ದಾರೆ.
I apologise to all our supporters, especially the girls who were brutally beaten by male police officers.
We could have done better. I could have done better to protect you from the inhumane actions of the Delhi Police.
To protect one Dharmendra Pradhan, who is responsible for…
— Abhijeet Dipke (@abhijeet_dipke) July 21, 2026
ಧರ್ಮೇಂದ್ರ ಪ್ರಧಾನ್ ಮತ್ತು ಕೇಂದ್ರದ ವಿರುದ್ಧ ಕಿಡಿ
ಕೇಂದ್ರ ಸರ್ಕಾರ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನೂ ಗುರಿಯಾಗಿಸಿಕೊಂಡಿರುವ ಅಭಿಜೀತ್ ದೀಪ್ಕೆ, 20 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಾವಿಗೆ ಕಾರಣರಾದ ಧರ್ಮೇಂದ್ರ ಪ್ರಧಾನ್ ಅವರನ್ನು ರಕ್ಷಿಸಲು ಸರ್ಕಾರ ಇನ್ನೂ ಅನೇಕ ವಿದ್ಯಾರ್ಥಿಗಳ ರಕ್ತವನ್ನು ಚೆಲ್ಲಲು ಸಿದ್ಧವಾಗಿದೆ ಎಂದು ಅವರು ಪೋಸ್ಟ್ನಲ್ಲಿ ಗಂಭೀರವಾಗಿ ಆರೋಪಿಸಿದ್ದಾರೆ.
ಇದನ್ನೂ ಓದಿ: Hunger Strike Effect: ಮೆದುಳಾ? ಕಿಡ್ನಿನಾ? ನಿರಂತರ ಉಪವಾಸದಿಂದ ದೇಹದ ಯಾವ ಅಂಗ ಬೇಗನೆ ಹಾನಿಗೊಳಗಾಗುತ್ತದೆ?
ದೆಹಲಿಯಲ್ಲಿ ಯುವಜನರು ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದು ಗಮನಾರ್ಹ. ಪ್ರತಿಭಟನೆಯ ಸಮಯದಲ್ಲಿ, ಹಲವಾರು ಸ್ಥಳಗಳಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆಗಳು ನಡೆದವು. ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಬಲಪ್ರಯೋಗ ಮಾಡಿದರು, ಇದರ ಪರಿಣಾಮವಾಗಿ ಹಲವಾರು ವಿದ್ಯಾರ್ಥಿಗಳು ಗಾಯಗೊಂಡರು ಎಂದು ಆರೋಪಿಸಿದ್ದಾರೆ. ಪ್ರತಿಭಟನೆಯ ಸಮಯದಲ್ಲಿ 118 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ವರದಿ ಮಾಡಿದ್ದಾರೆ.
ಗಾಯಗೊಂಡವರು ನನಗೆ ನೇರವಾಗಿ ಸಂದೇಶ ಕಳುಹಿಸಬೇಕು: ಅಭಿಜೀತ್ ದೀಪ್ಕೆ
ಪ್ರತಿಭಟನೆಯ ಸಮಯದಲ್ಲಿ ಗಾಯಗೊಂಡ ಯಾರಾದರೂ ತಮಗೆ ನೇರವಾಗಿ ಸಂದೇಶ ಕಳುಹಿಸುವಂತೆ ಅಭಿಜೀತ್ ದೀಪ್ಕೆ ಮನವಿ ಮಾಡಿದ್ದಾರೆ. ಜೊತೆಗೆ, ವಿದ್ಯಾರ್ಥಿಗಳ ಹಕ್ಕುಗಳು ಮತ್ತು ನ್ಯಾಯಕ್ಕಾಗಿ ಹೋರಾಟ ಮುಂದುವರಿಯುತ್ತದೆ ಎಂದು ಅವರು ಹೇಳಿದ್ದಾರೆ.














