ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (Rashtriya Swayamsevak Sangh) ನೋಂದಣಿಗೆ ಪಟ್ಟು ಹಿಡಿದಿರುವ ಗೃಹಸಚಿವ (Home Minister) ಪ್ರಿಯಾಂಕ್ ಖರ್ಗೆಗೆ (Priyank Kharge) ಕೋರ್ಟ್
ಮತ್ತೊಮ್ಮೆ ಸಮನ್ಸ್ (Court Summons) ನೀಡಿದೆ. ಆರ್ಎಸ್ಎಸ್ (RSS) ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪ ಪ್ರಿಯಾಂಕ್ ಖರ್ಗೆ ಮೇಲಿದ್ದು, ಬೆಂಗಳೂರಿನ (Bengaluru) ಸಿದ್ದಾಪುರದ ತೇಜಸ್ ಗೌಡ (Tejas Gowda) ಎಂಬುವರು ಈ ಬಗ್ಗೆ ಪ್ರಿಯಾಂಕ್ ಖರ್ಗೆ ಹಾಗೂ ಮೊಹಮ್ಮದ್ ನಲಪಾಡ್ (Mohammed Nalapad) ವಿರುದ್ಧ ದೂರು ದಾಖಲಿಸಿದ್ದರು. ಈ ಹಿಂದೆ ಸಮನ್ಸ್ ಜಾರಿ ಮಾಡಿದ್ದ ಜನಪ್ರತಿನಿಧಿಗಳ ಕೋರ್ಟ್, ಇದೀಗ ಸಚಿವರ ಖುದ್ದು ಹಾಜರಿಗೆ ಸೂಚನೆ ನೀಡಿದೆ.
ಪ್ರಿಯಾಂಕ್ ಖರ್ಗೆ, ನಲಪಾಡ್ಗೆ ಕೋರ್ಟ್ ಸಮನ್ಸ್
ಆರ್ಎಸ್ಎಸ್ ಅವಹೇಳನ ಆರೋಪದ ಮೇಲೆ ಗೃಹಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ಹ್ಯಾರಿಸ್ ನಲಪಾಡ್ಗೆ ಜನಪ್ರತಿನಿಧಿಗಳ ಕೋರ್ಟ್ ಮತ್ತೆ ಸಮನ್ಸ್ ಜಾರಿ ಮಾಡಿದೆ. ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ಸಮನ್ಸ್ ಜಾರಿ ಮಾಡಿದ್ದು, ಆಗಸ್ಟ್ 1ರಂದು ಖುದ್ದಾಗಿ ಹಾಜರಾಗುವಂತೆ ಸೂಚನೆ ನೀಡಿದೆ.
ಆರ್ಎಸ್ಎಸ್ ವಿರುದ್ಧ ಅವಹೇಳನಕಾರಿ ಪೋಸ್ಟ್
ಆರ್ಎಸ್ಎಸ್ ಕಾರ್ಯಕರ್ತ, ಬೆಂಗಳೂರಿನ ಸಿದ್ದಾಪುರದ ತೇಜಸ್ ಗೌಡ ಎಂಬುವರು ಖಾಸಗಿ ದೂರು ದಾಖಲಿಸಿದ್ದರು. 2025ರ ಅಕ್ಬೋಬರ್ 14 ರಂದು ಪ್ರಿಯಾಂಕ್ ಖರ್ಗೆ ತಮ್ಮ ಟ್ವೀಟ್ನಲ್ಲಿ ಆರ್ಎಸ್ಎಸ್ ವಿರುದ್ದ ಪೋಸ್ಟ್ ಹಾಕಿದ್ದರು. ಅತ್ತ ಮೊಹಮ್ಮದ್ ನಲಪಾಡ್ ಯೂಟ್ಯೂಬ್ ಚಾನಲ್ ಒಂದರಲ್ಲಿ ಆರ್ಎಸ್ಎಸ್ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಆರೋಪ ಇದೆ. ಈ ಇಬ್ಬರ ಹೇಳಿಕೆಯಿಂದ ಸಂಘದ ಘನತೆಗೆ ಧಕ್ಕೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಇದನ್ನೂ ಓದಿ: Prajwal Revanna: ಪ್ರಜ್ವಲ್ ರೇವಣ್ಣಗೆ ಗುಡ್ ನ್ಯೂಸ್! ಅದೊಂದು ಬೇಡಿಕೆಗೆ ಅಸ್ತು ಎಂದ ಕೋರ್ಟ್!
ಆಗಸ್ಟ್ 1ರಂದು ಖುದ್ದು ಹಾಜರಿಗೆ ಸೂಚನೆ
ಈ ಹಿಂದೆಯೂ ಕೋರ್ಟ್ ಇಬ್ಬರಿಗೂ ಸಮನ್ಸ್ ಜಾರಿ ಮಾಡಿತ್ತು. ಇದೀಗ ಸಮನ್ಸ್ ಜಾರಿ ಬಗ್ಗೆ ಪೊಲೀಸರ ಮಾಹಿತಿ ಒಪ್ಪದ ಕೋರ್ಟ್, ಮತ್ತೊಮ್ಮೆ ಪ್ರಿಯಾಂಕ್ ಖರ್ಗೆ ಹಾಗೂ ಮೊಹಮ್ಮದ್ ನಲಪಾಡ್ಗೆ ಸಮನ್ಸ್ ಜಾರಿ ಮಾಡಿದೆ. ಆಗಸ್ಟ್ 1ರಂದು ಖುದ್ದಾಗಿ ಹಾಜರಾಗುವಂತೆ ಕೋರ್ಟ್ ಸೂಚಿಸಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾ. ಸಂದೀಪ್ ಪಾಟೀಲ್ ಅವರು ಸಮನ್ಸ್ ಜಾರಿ ಮಾಡಿ ಆದೇಶ ನೀಡಿದ್ದಾರೆ.














