ಭಾರತೀಯ ಸಿನಿರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ರಾಮಾಯಣ’ (Ramayana) ಬಿಡುಗಡೆಯ ಮುನ್ನವೇ ಜಾಗತಿಕ ಮಟ್ಟದಲ್ಲಿ ಭಾರೀ ಕುತೂಹಲ ಮೂಡಿಸಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಮಹತ್ವಾಕಾಂಕ್ಷೆಯ
ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ (Rocking Star Yash) ರಾವಣನ ಪಾತ್ರದಲ್ಲಿ ನಟಿಸುತ್ತಿದ್ದು, ರಣಬೀರ್ ಕಪೂರ್ (Ranbir Kapoor) ಶ್ರೀರಾಮನ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಅಮೆರಿಕದ ಸ್ಯಾನ್ ಡಿಯಾಗೋ ಕಾಮಿಕ್ ಕಾನ್ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಚಿತ್ರದ ತಾರಾಗಣ ಭಾಗವಹಿಸಿದ್ದು, ಇದೇ ವೇಳೆ ಯಶ್ ತಮ್ಮ ಸಹನಟ ರಣಬೀರ್ ಕಪೂರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಕಾಮಿಕ್ ಕಾನ್ನಲ್ಲಿ ಗಮನ ಸೆಳೆದ ‘ರಾಮಾಯಣ’
ಅಮೆರಿಕದ ಸ್ಯಾನ್ ಡಿಯಾಗೋದಲ್ಲಿ ನಡೆದ ಕಾಮಿಕ್ ಕಾನ್ ಕಾರ್ಯಕ್ರಮದಲ್ಲಿ ‘ರಾಮಾಯಣ’ ಚಿತ್ರದ ವಿಶೇಷ ಮಾತುಕತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಿರ್ದೇಶಕ ನಿತೇಶ್ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ, ನಟ ಯಶ್, ರಣಬೀರ್ ಕಪೂರ್ ಸೇರಿದಂತೆ ಚಿತ್ರದ ಪ್ರಮುಖ ಕಲಾವಿದರು ಭಾಗವಹಿಸಿದರು.
“A BEAUTIFUL RAMA WITH GREAT INTENT AND SACRIFICE!” 🏹✨#Yash breaks silence on #RanbirKapoor’s transformation as Lord Ram at SDCC:
“It’s not easy to play Lord Ram. The way Ranbir Kapoor has done it is marvelous. He has worked very hard, and when you watch #Ramayana, you will… pic.twitter.com/lvNi5zE0mT— M4MOVIES 🍿 (@M4MOIVES) July 23, 2026
ಕನ್ನಡ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಯಶ್, ‘ರಾಮಾಯಣ’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಅಧಿಕೃತವಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ರಾವಣನಂತಹ ಪ್ರಭಾವಿ ಪಾತ್ರವನ್ನು ನಿರ್ವಹಿಸುತ್ತಿರುವುದು ಸಿನಿಪ್ರಿಯರಲ್ಲಿ ದೊಡ್ಡ ನಿರೀಕ್ಷೆ ಮೂಡಿಸಿದೆ.
ಇದನ್ನೂ ಓದಿ: Jana Nayagan: ವಿಜಯ್ ಕೊನೆಯ ಸಿನಿಮಾದಲ್ಲಿ ತಾನು ನಟಿಸಿದ್ದ ದೃಶ್ಯಗಳಿಲ್ಲ ಅಂತ ಕಣ್ಣೀರಿಟ್ಟ ನಟಿ
‘ರಾಮನ ಪಾತ್ರ ಯಾರಿಗೂ ಸುಲಭವಲ್ಲ’
ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, ರಾಮನ ಪಾತ್ರದ ಮಹತ್ವವನ್ನು ವಿಶೇಷವಾಗಿ ಉಲ್ಲೇಖಿಸಿದರು.ಈ ಜಗತ್ತಿನಲ್ಲಿ ಯಾರೇ ಆಗಿರಲಿ, ರಾಮನ ಪಾತ್ರ ನಿರ್ವಹಿಸುವುದು ನನಗೆ ಸಿಕ್ಕಿರುವ ದೊಡ್ಡ ಪುಣ್ಯ ಎಂದು ಸುಲಭವಾಗಿ ಹೇಳಲು ಸಾಧ್ಯವಿಲ್ಲ. ಅದು ಅತ್ಯಂತ ಜವಾಬ್ದಾರಿಯುತ ಮತ್ತು ಸವಾಲಿನ ಪಾತ್ರ ಎಂದು ಹೇಳಿದ್ದಾರೆ.
ರಾಮನಂತಹ ಆದರ್ಶ ವ್ಯಕ್ತಿತ್ವವನ್ನು ತೆರೆ ಮೇಲೆ ಜೀವಂತಗೊಳಿಸುವುದು ದೊಡ್ಡ ಹೊಣೆಗಾರಿಕೆ. ಅದನ್ನು ಯಶಸ್ವಿಯಾಗಿ ನಿರ್ವಹಿಸಲು ಅಪಾರ ಪರಿಶ್ರಮ ಮತ್ತು ಸಮರ್ಪಣೆ ಅಗತ್ಯ ಎಂದು ಯಶ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ: Sai Pallavi: ಸಾಯಿ ಪಲ್ಲವಿ ಬೆಂಬಲಕ್ಕೆ ನಿಂತ ‘ರಾಮಾಯಣದ ಸೀತೆ’! ಖ್ಯಾತ ನಟಿ ಹೇಳಿದ್ದೇನು ಗೊತ್ತಾ?
ರಣಬೀರ್ ಕಪೂರ್ ಬಗ್ಗೆ ಯಶ್ ಮೆಚ್ಚುಗೆ
ಜೊತೆಗೆ ರಣಬೀರ್ ಕಪೂರ್ ಅತ್ಯುತ್ತಮ ನಟ ಎಂದು ಯಶ್ ಹೇಳಿದ್ದಾರೆ . ರಾಮನ ಪಾತ್ರಕ್ಕಾಗಿ ಅವರು ತೋರಿದ ಬದ್ಧತೆ ಮತ್ತು ಸಿದ್ಧತೆ ನಿಜಕ್ಕೂ ಮೆಚ್ಚುವಂತದ್ದು ಎಂದು ಶ್ಲಾಘಿಸಿದರು.
ರಣಬೀರ್ ರಾಮನ ಪಾತ್ರಕ್ಕಾಗಿ ಕೆಲಸ ಮಾಡಿದ ರೀತಿಯನ್ನು ನೋಡಿದಾಗ ಅವರ ಮೇಲಿನ ಗೌರವ ಇನ್ನಷ್ಟು ಹೆಚ್ಚಾಯಿತು ಎಂದು ಯಶ್ ಹೇಳಿದ್ದಾರೆ.
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರ ಈಗಾಗಲೇ ಭಾರತೀಯ ಸಿನಿರಂಗದ ಅತ್ಯಂತ ದೊಡ್ಡ ಪೌರಾಣಿಕ ಸಿನಿಮಾಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ನಟಿಸುತ್ತಿರುವ ಈ ಸಿನಿಮಾ ದೇಶ-ವಿದೇಶಗಳ ಸಿನಿಪ್ರಿಯರಲ್ಲಿ ಅಪಾರ ನಿರೀಕ್ಷೆ ಹುಟ್ಟಿಸಿದೆ.














