ಪ್ರಿಯಾಂಕಾ ಉಪೇಂದ್ರ (Priyanka Upendra) ಅವರ 50 ನೇ ಚಿತ್ರ ರೆಡಿ ಆಗಿದೆ. ಡಿಟೆಕ್ಟಿವ್ ತೀಕ್ಷಣ (Detective Teekshana) ಹೆಸರಿನ ಈ ಚಿತ್ರದಲ್ಲಿ ಆ್ಯಕ್ಷನ್ ಇದೆ, ಥ್ರಿಲ್ ಇದೆ.
ಇದಕ್ಕೂ ಹೆಚ್ಚಾಗಿ ಪ್ರಿಯಾಂಕಾ ಉಪೇಂದ್ರ (Priyanka Upendra) ಅವರು ಡಿಟೆಕ್ಟಿವ್ ತೀಕ್ಷಣ ಪಾತ್ರದಲ್ಲಿ ಮಿಂಚಿದ್ದಾರೆ. ಆದರೆ, ಈ ಚಿತ್ರ ಶುರು ಆಗಿಯೇ ಹೆಚ್ಚು ಕಡಿಮೆ ಎರಡು ವರ್ಷದ ಮೇಲೆ ಆಗಿದೆ. ಈಗ ಈ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಅಯೋಗ್ಯ-2 ಚಿತ್ರ (Ayogya-2 Movie) ರಿಲೀಸ್ ಆಗ್ತಿರೋ ಆಗಸ್ಟ್-7 ರಂದೇ ಇದು ತೆರೆ ಕಾಣುತ್ತಿದೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಪ್ರಿಯಾಂಕಾ 50 ನೇ ಸಿನಿಮಾ
ಪ್ರಿಯಾಂಕಾ ಉಪೇಂದ್ರ ಅಭಿನಯದ ಡಿಟೆಕ್ಟಿವ್ ತೀಕ್ಷಣ ಕೊನೆಗೂ ರಿಲೀಸ್ ಆಗುತ್ತಿದೆ. ಎರಡು ವರ್ಷದ ಹಿಂದೇನೆ ಈ ಚಿತ್ರದ ಟ್ರೈರಲ್ ರಿಲೀಸ್ ಆಗಿತ್ತು.
ಪ್ರಿಯಾಂಕಾ 50 ನೇ ಸಿನಿಮಾ
(ಚಿತ್ರ ಕೃಪೆ: ಪ್ರಿಯಾಂಕಾ ಉಪೇಂದ್ರ ಇನ್ಸ್ಟಾಗ್ರಾಮ್)
ಆದರೆ, ಈ ಚಿತ್ರ ಈಗ ರಿಲೀಸ್ಗೆ ರೆಡಿ ಆಗಿದೆ. ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಆಗಸ್ಟ್-7 ರಂದು ಈ ಚಿತ್ರ ತೆರೆ ಕಾಣುತ್ತಿದೆ.
ಇದನ್ನೂ ಓದಿ: Nitesh Tiwari: “ರಾವಣ-ಜಟಾಯು ಯುದ್ಧ” ಹೇಗಿರುತ್ತೆ? ನಿತೇಶ್ ಬಿಚ್ಚಿಟ್ರು ಒಂದಷ್ಟು ಸೀಕ್ರೆಟ್!
ಪ್ರೆಸ್ ಮೀಟ್ ಲೈವ್
ಜುಲೈ-20 ರಂದು ಈ ಚಿತ್ರದ ಪ್ರೆಸ್ ಮೀಟ್ ನಡೆದಿದೆ. ಇದರ ವಿಡಿಯೋವನ್ನ ಪ್ರಿಯಾಂಕಾ ಉಪೇಂದ್ರ ಶೇರ್ ಮಾಡಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನ ತಮ್ಮ ಪೇಜ್ ಅಲ್ಲಿಯೇ ಇದನ್ನ ಹಂಚಿಕೊಂಡಿದ್ದಾರೆ.
ಅಂದ್ಹಾಗೆ ಈ ಚಿತ್ರವನ್ನ ತ್ರಿವಿಕ್ರಮ್ ರಘು ಡೈರೆಕ್ಷನ್ ಮಾಡಿದ್ದಾರೆ. ಕತೆ-ಚಿತ್ರಕತೆಯನ್ನು ಇವರೇ ಮಾಡಿದ್ದಾರೆ. ಪ್ರಿಯಾಂಕಾ ಉಪೇಂದ್ರ ಅವರು ಈ ಚಿತ್ರದಲ್ಲಿ ಡಿಟೆಕ್ಟಿವ್ ತೀಕ್ಷಣ ಹೆಸರಿನ ರೋಲ್ ಮಾಡಿದ್ದಾರೆ. ನಟ ಮುನಿ ವೆಂಕಟ್ ಚರಣ್, ಅವಿನಾಶ್, ಶ್ರೀಧರ್, ವಿಜಯ್ ಸೂರ್ಯ ಈ ಚಿತ್ರದಲ್ಲಿ ಪ್ರಮುಖ ರೋಲ್ ಮಾಡಿದ್ದಾರೆ.
ಚಿತ್ರದ ಇತರ ವಿಷಯ
ಈ ಚಿತ್ರಕ್ಕೆ ಮನು ದಾಸಪ್ಪ ಕ್ಯಾಮರಾವರ್ಕ್ ಮಾಡಿದ್ದಾರೆ. ಗೌತಮ್ ಸಾಹಸ ನಿರ್ದೇಶನ ಮಾಡಿದ್ದಾರೆ. ಪೆಡ್ಡಪಲ್ಲಿ ರೋಹಿತ್ ಮ್ಯೂಸಿಕ್ ಮಾಡಿದ್ದಾರೆ.
ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ಭರ್ಜರಿ ಆ್ಯಕ್ಷನ್ ಮಾಡಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಪ್ರದರ್ಶನ ಮಾಡಿರೋ ಟ್ರೈಲರ್ ಅಲ್ಲಿ ಪ್ರಿಯಾಂಕಾ ಅವರ ಆ್ಯಕ್ಷನ್ ಭರ್ಜರಿ ಆಗಿಯೇ ಇವೆ.
ಡಿಟೆಕ್ಟಿವ್ ತೀಕ್ಷಣ ರಿಲೀಸ್ ಡೇಟ್ ಅನೌನ್ಸ್
(ಚಿತ್ರ ಕೃಪೆ: ಪ್ರಿಯಾಂಕಾ ಉಪೇಂದ್ರ ಇನ್ಸ್ಟಾಗ್ರಾಮ್)
ವಿಜಯ್ ಸೂರ್ಯ ಕೂಡ ಇಲ್ಲಿ ಸಖತ್ ಸಾಥ್ ಕೊಟ್ಟಿದ್ದಾರೆ. ಇವರ ಜೋಡಿ ಈ ಚಿತ್ರದಲ್ಲಿ ಥ್ರಿಲ್ಲಿಂಗ್ ಕಂಟೆಂಟ್ ಇದೆ ಅಂತಲೇ ಹೇಳಬಹುದು.
ಅಯೋಗ್ಯ-2 ಆಗಸ್ಟ್ 7ಕ್ಕೆ ರಿಲೀಸ್
ಅಯೋಗ್ಯ-2 ಚಿತ್ರವೂ ರಿಲೀಸ್ಗೆ ರೆಡಿ ಆಗಿದೆ. ಇದು ಕೂಡ ಆಗಸ್ಟ್-7 ರಂದು ತೆರೆ ಕಾಣುತ್ತಿದೆ. ಈ ಚಿತ್ರದ ಪ್ರಚಾರವು ಜೋರಾಗಿದೆ. ಉತ್ತರ ಕರ್ನಾಟಕದಲ್ಲಿ ಸ್ವತಃ ಸತೀಶ್ ಹೋಗಿ ತಮ್ಮ ಈ ಚಿತ್ರವನ್ನ ಪ್ರಚಾರ ಮಾಡಿ ಬಂದಿದ್ದಾರೆ. ದಡಿಯಾ ಗಿರಿ ಹಾಗೂ ಶಿವರಾಜ್ ಕೆ.ಆರ್.ಪೇಟೆ ಸಾಥ್ ಕೊಟ್ಟಿದ್ದಾರೆ.
ಇದನ್ನೂ ಓದಿ: Sunny Deol: ನಾನು ರಾಮಾಯಣ ಸಿನಿಮಾದ ಕೆಲಸ ಪೂರ್ತಿ ಶುರು ಮಾಡಿಯೇ ಇಲ್ಲ! ಸನ್ನಿ ಡಿಯೋಲ್ ಹೀಗೆ ಹೇಳಿದ್ಯಾಕೆ?
ಹುಬ್ಬಳ್ಳಿಯಲ್ಲಿ ಈ ಚಿತ್ರದ ಪ್ರಚಾರಕ್ಕೆ ದರ್ಶನ್ ಫ್ಯಾನ್ಸ್ ಕೂಡ ಸಪೋರ್ಟ್ ಮಾಡಿದ್ದಾರೆ. ಚಿತ್ರವನ್ನ ಹುಬ್ಬಳ್ಳಿಯಲ್ಲಿ ಅಷ್ಟೆ ಆಸಕ್ತಿಯಿಂದಲೇ ಪ್ರಮೋಟ್ ಮಾಡಿದ್ದಾರೆ. ಈ ಚಿತ್ರದಲ್ಲಿ ರಚಿತಾ ರಾಮ್ ಇದ್ದಾರೆ. ದಡಿಯಾ ಗಿರಿ, ಶಿವರಾಜ್ ಕೆ.ಆರ್.ಪೇಟೆ ಈ ಚಿತ್ರದಲ್ಲಿದ್ದಾರೆ.
ಈ ಸಿನಿಮಾದ ಹಾಡುಗಳು ವೈರಲ್
ಅಯೋಗ್ಯ-2 ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಕೊಟ್ಟಿದ್ದಾರೆ. ಇವರ ಸಂಗೀತದ ಮುದ್ದು ಮದ್ದು ಪುಟ್ಟಲಕ್ಷ್ಮಿ ಹಾಡು ಒಂದು ಹಂತಕ್ಕೆ ರೀಚ್ ಆಗಿದೆ. ಇದೇ ಚಿತ್ರದ ನಾಯಕನ ಪರಿಚಯದ ಹಾಡು ಗಮನ ಸೆಳೆದಿದೆ.
ಹುಡುಗಿಯರು ಡೇಂಜರಸ್ ಅನ್ನುವ ಹಾಡು ಇತ್ತೀಚಿಗೆ ರಿಲೀಸ್ ಆಗಿದೆ. ಇದು ಕೂಡ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಇನ್ನುಳಿದಂತೆ ಆಗಸ್ಟ್-7 ರಂದು ಈ ಚಿತ್ರ ರಿಲೀಸ್ ಆದ ದಿನವೇ ಪ್ರಿಯಾಂಕಾ ಅವರ ಡಿಟೆಕ್ಟಿವ್ ತೀಕ್ಷಣ ಚಿತ್ರ ತೆರೆ ಕಾಣುತ್ತಿದೆ ಅಂತ ಹೇಳಬಹುದು.














