ಸ್ಯಾಂಡಲ್ವುಡ್ನ (Sandalwood) ಖ್ಯಾತ ನಟ ದರ್ಶನ್ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy case) ಆರೋಪದ ಮೇಲೆ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಹೀಗಿರುವಾಗಲೇ ಅವರ ಪತ್ನಿ
ವಿಜಯಲಕ್ಷ್ಮಿ ವಿರುದ್ಧ ಅಶ್ಲೀಲ ಕಮೆಂಟ್ ಕಿರುಕುಳ ನಡೆದಿತ್ತು. ಆ ನಂತರ ವಿಜಯಲಕ್ಷ್ಮಿ (Vijayalakshmi) ಅವರು ದೂರು ನೀಡಿ ಅರೆಸ್ಟ್ ಕೂಡಾ ನಡೆದಿದೆ. ಇದೀಗ ಈ ಕೇಸ್ನ ನಾಲ್ಕನೇ ಆರೋಪಿಗೆ ಜಾಮೀನು ಸಿಕ್ಕಿದೆ.
ದರ್ಶನ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಾಮೆಂಟ್ ಪ್ರಕರಣ 4ನೇ ಆರೋಪಿಗೆ ಜಾಮೀನು ಮಂಜೂರಾಗಿದೆ. ಹುಬ್ಬಳ್ಳಿ ಪೆಂಟ್ರೋಲ್ ಬಂಕ್ ಮ್ಯಾನೇಜರ್ ಆಗಿದ್ದ ನಿಂಗರಾಜ್ನನ್ನು ಜನವರಿಯಲ್ಲಿ ಅರೆಸ್ಟ್ ಮಾಡಲಾಗಿತ್ತು. ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜೀತ್ ಶೆಟ್ಟಿ ಪೀಠದಿಂದ ಆರೋಪಿಗೆ ಜಾಮೀನು ಮಂಜೂರು ಮಾಡಲಾಗಿದೆ.
ನಿಂಗರಾಜ್ ಗುಲಾಪ್ಪ ತಲ್ವಾರ್ ಜಾಮೀನು ಮಂಜೂರಾಗಿದೆ. ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜೀತ್ ಶೆಟ್ಟಿ ಪೀಠದಿಂದ ಜಾಮೀನು ಮಂಜೂರು ಮಾಡಲಾಗಿದ್ದು, ಹುಬ್ಬಳ್ಳಿ ಪೆಂಟ್ರೋಲ್ ಬಂಕ್ ಮ್ಯಾನೇಜರ್ ಆಗಿದ್ದ ನಿಂಗರಾಜ್ ಪ್ರಕರಣದ 4 ನೇ ಆರೋಪಿಯಾಗಿದ್ದ. ಜನವರಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು.
7 ತಿಂಗಳು ಮುದ್ದೆ ಮುರಿದ ನಿಂಗರಾಜ್
ಪೆಟ್ರೋಲ್ ಬಂಕ್ ಮ್ಯಾನೇಜರ್ ಆಗಿದ್ದ ನಿಂಗರಾಜ್ ಒಂದೇ ಒಂದು ಕಮೆಂಟ್ನಿಂದ ಬರೋಬ್ಬರಿ 7 ತಿಂಗಳು ಜೈಲಿನಲ್ಲಿ ಮುದ್ದೆ ಮುರಿಯುವ ಹಾಗಾಗಿದೆ. ಸೋಷಿಯಲ್ ಮೀಡಿಯಾವನ್ನು ಸರಿಯಾಗಿ ಬಳಸದೇ, ಅಶ್ಲೀಲವಾಗಿ ಕಮೆಂಟ್ ಮಾಡುವರು, ಫೋಟೋ ಮಾರ್ಫಿಂಗ್ ಮಾಡುವವರಿಗೆ ಇದು ಎಚ್ಚರಿಕೆ ಪಾಠವಾಗಲಿದೆ.
ವರದಿ: ಮಂಜುನಾಥ್ ಎನ್. ನ್ಯೂಸ್18 ಕನ್ನಡ ಪ್ರತಿನಿಧಿ ಬೆಂಗಳೂರು














